ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲವಾಗಿ ತಿಂಗಳುಗಳು ಉರುಳಿದರೂ ಕೂಡ ಅವರ ನೆನಪು ಮಾಸಿಲ್ಲ. ಭೌತಿಕ ಜಗತ್ತಿನಲ್ಲಿ ಅವರಿಲ್ಲದ ನೋವು ಕಡಿಮೆ ಆಗಿಲ್ಲ ಇತ್ತೀಚೆಗೆ ಹೊಸಪೇಟೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಬೃಹತ್ ಪ್ರತಿಮೆ ಅನಾವರಣ ಆಗಿತ್ತು.
ಇದೀಗ ಸಚಿವರೊಬ್ಬರು ತಮ್ಮ ಕಚೇರಿಯಲ್ಲಿ ಅಪ್ಪುವಿನ ಜಾಕೇಟ್ ಅನ್ನು ಫೋಟೋ ಫ್ರೇಮ್ ಹಾಕಿಸಿ ಇಟ್ಟುಕೊಂಡಿದ್ದಾರೆ. ಈ ಮೂಲಕ ಅಗಲಿದ ನಟನ ಮೇಲಿನ ಪ್ರೀತಿ ತೋರಿದ್ದಾರೆ.
ಇಷ್ಟಕ್ಕೂ ಹೀಗೆ ಅಪ್ಪು ಜಾಕೆಟ್ ಗೆ ಫ್ರೇಮ್ ಹಾಕಿಸಿ ಇರಿಸಿಕೊಂಡ ಆ ಸಚಿವರು ಯಾರೆಂದ್ರೇ ಅವರೇ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್! ಹೌದು ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ‘ಅರಸು’ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಧರಿಸಿದ್ದ ಜಾಕೆಟ್ ಗೆ ಫ್ರೇಮ್ ಹಾಕಿಸಿ ತಂದೆಯ ಕಚೇರಿಯಲ್ಲಿ ಇರಿಸಿದ್ದಾರೆ
ಅರಸು ಸಿನಿಮಾದಲ್ಲಿ ತಾನು ಧರಿಸಿದ್ದ ಜಾಕೆಟ್ ಅನ್ನು ಪುನೀತ್ ಅವರು ಅಂದು ತನ್ನ ಅಭಿಮಾನಿ ಹೊಸಪೇಟೆಯ ಕಿಚಡಿ ವಿಶ್ವಗೆ ಕೊಟ್ಟಿದ್ದರು. ಅಪ್ಪು ಕೊಟ್ಟಿದ್ದ ಜಾಕೆಟ್ ಅನ್ನು ಸಚಿವರ ಪುತ್ರ ಸಿದ್ಧಾರ್ಥ್ ಸಿಂಗ್ ಅವರಿಗೆ ಕಿಚಡಿ ವಿಶ್ವ ನೀಡಿದ್ದು, ಜಾಕೆಟ್ಗೆ ಫೋಟೋ ಪ್ರೇಮ್ ಹಾಕಿಸಿ ಅಪ್ಪನ ಕಚೇರಿಯಲ್ಲಿ ಮಗ ಇಟ್ಟಿದ್ದಾರೆ.
ಸಚಿವ ಆನಂದಸಿಂಗ್ ಕಚೇರಿಯಲ್ಲಿ ಪುನೀತ್ ರಾಜ್ ಕುಮಾರ್ ಜಾಕೆಟ್!
Previous Articleದುಬೈನಲ್ಲಿ 777 ಚಾರ್ಲಿ ಟೀಂ
Next Article ಬೆಂಕಿ ಹೊತ್ತಿಕೊಂಡ ಪ್ರಕರಣದಲ್ಲಿ ಸ್ಕೂಟರ್ ಸವಾರ ಸಾವು