ಬೆಂಗಳೂರು: ಶಾಲೆಗಳಲ್ಲಿ ಕೊರೋನಾ ಸೋಂಕು ಕಂಡುಬಂದರೆ ಶಾಲೆಯನ್ನು ಮುಚ್ಚುವಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಚಿಸಿದ್ದಾರೆ.
ಬೆಂಗಳೂರಿನ ದಾಸರಹಳ್ಳಿಯಲ್ಲಿ ಎರಡು ಖಾಸಗಿ ಶಾಲೆಗಳಲ್ಲಿ ಸೋಂಕು ಕಂಡುಬಂದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಲೆ ಕ್ಲೋಸ್ ಮಾಡಿ ಕೊರೋನಾ ನಿಯಮ ಪಾಲನೆ ಮಾಡಬೇಕು. ದಾಸರಹಳ್ಳಿಯ ಎರಡು ಖಾಸಗಿ ಶಾಲೆಗಳಲ್ಲಿ ಸೋಂಕು ಬಂದಿರುವ ಬಗ್ಗೆ ಮಾಹಿತಿ ಬಂದಿಲ್ಲ. ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಮಕ್ಕಳಿಗೆ ಸೋಂಕು ಬಂದ ಕೂಡಲೇ ಏನೂ ಆಗುವುದಿಲ್ಲ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಎಷ್ಟು ಲಸಿಕೆ ಆಗಿದೆ ಮಾಹಿತಿ ಪಡೆಯುತ್ತಿದ್ದೇವೆ. 15 ವರ್ಷ ಮೇಲ್ಪಟ್ಟರಿಗೂ ಲಸಿಕೆ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಸೋಂಕು ಬಂದ ಕೂಡಲೇ ಶಾಲೆ ಬಂದ್ ಮಾಡಬೇಕು. ಕೊರೋನಾ ಪ್ರೋಟೋಕಾಲ್‍ನಂತೆ ನಿಯಮ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಸೋಂಕು ಬಂದರೂ ಮಕ್ಕಳಿಗೆ ಹೆಚ್ಚು ಸಮಸ್ಯೆ ಆಗುವುದಿಲ್ಲ. ಯಾರು ಆತಂಕ ಆಗೋದು ಬೇಡ. ಇದು ಓಮಿಕ್ರಾನ್ ಉಪತಳಿಯಾಗಿದೆ. ನಮ್ಮಲ್ಲಿ ಹೊಸ ಓಮಿಕ್ರಾನ್ ಉಪ ತಳಿ ನಮ್ಮಲ್ಲಿ ಪತ್ತೆ ಆಗಿಲ್ಲ. ಹೀಗಾಗಿ ಆತಂಕ ಆಗೋದು ಬೇಡ ಎಂದು ಮನವಿ ಮಾಡಿದ ಅವರು, ಮಕ್ಕಳಿಗೆ ಸೋಂಕು ಬಂದರೆ ಪೋಷಕರಿಗೆ ಆತಂಕ ಆಗುವುದು ಸಹಜ. ಆದರೆ ಯಾರು ಗಾಬರಿ ಆಗುವುದು ಬೇಡ ಎಂದು ಹೇಳಿದರು.
ಕೊರೋನಾ ಸೋಂಕಿತರು ಕಂಡುಬಂದರೆ ಶಾಲೆ ಮುಚ್ಚಲು ಸಚಿವ ಸೂಚನೆ
Previous Article“ಮಾಫಿಯಾ” ಸೆಟ್ಟಿಗೆ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಆಗಮನ.
Next Article ಡೊಮಿನೋಸ್ ಪಿಜ್ಜಾ ಡೆಲಿವರಿ ಮಹಿಳೆ ಮೇಲೆ ಯುವತಿಯರಿಂದ ಹಲ್ಲೆ