ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇಂದು ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಘೋಷಿಸಿದ ಅವರು, ಎಲ್ಲಾ ಪ್ರಯಾಣಗಳಂತೆ, ಇದು ಕೂಡ ಕೊನೆಗೊಳ್ಳಬೇಕು ಎಂದರು. ಸೆಪ್ಟೆಂಬರ್ 2019 ರಲ್ಲಿ T20 ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು ಆದರೆ ODI ಮತ್ತು ಟೆಸ್ಟ್‌ಗಳಲ್ಲಿ ಆಡುವುದನ್ನು ಮುಂದುವರೆಸಿದ್ದರು
ಮಿಥಾಲಿ ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಮತ್ತು ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳೆಯಲು ಸಹಾಯ ಮಾಡುವಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಬಲಗೈ ಬ್ಯಾಟಿಂಗ್ ಆಟಗಾರ್ತಿ ಆಗಿರುವ ಮಿಥಾಲಿ, ODI ಪಂದ್ಯಗಳಲ್ಲಿ ಇಲ್ಲಿಯವರೆಗಿನ ದಾಖಲೆಯ 7,805 ರನ್‌ಗಳನ್ನು ಒಳಗೊಂಡಂತೆ ಅವರ ಅಚ್ಚರಿಯ ರನ್-ಸ್ಕೋರಿಂಗ್ ಸಾಧನೆಗಳಿಗಾಗಿ ಇತಿಹಾಸದಲ್ಲಿ ದಾಖಲಾಗುತ್ತಾರೆ, ಭಾರತ ಪರ 12 ಟೆಸ್ಟ್ ಪಂದ್ಯಗಳನ್ನಾಡಿರುವ ಮಿಥಾಲಿ 699 ರನ್ ಹಾಗೂ 89 ಟಿ20 ಪಂದ್ಯಗಳಲ್ಲಿ 2,364 ರನ್ ಗಳಿಸಿದ್ದಾರೆ.
Previous Articleಪಠ್ಯ ಪುಸ್ತಕ ಮರು ಪರಿಷ್ಕರಣೆಗೆ ಮುಂದಾಗಿದ್ದೇವೆ: ಸಚಿವ ಬಿ.ಸಿ. ನಾಗೇಶ್
Next Article ಗುಂಡಿಟ್ಟು ಹೊಡೆಯುವ ಹೇಳಿಕೆಗೆ ಈಗಲೂ ಬದ್ಧ: ಮುತಾಲಿಕ್