G7 ಮತ್ತು ಕ್ವಾಡ್ ಸೇರಿದಂತೆ ಮೂರು ಪ್ರಮುಖ ಬಹುಪಕ್ಷೀಯ ಶೃಂಗಸಭೆಗಳಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಮೇ ೧೯ ರಿಂದ ಜಪಾನ್, ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ.
ತಮ್ಮ ಪ್ರವಾಸದ ಮೊದಲ ಹಂತ, ಮೇ 19 ರಿಂದ 21 ರವರೆಗೆ, ಮೋದಿ ಅವರು ಜಪಾನಿನ ಹಿರೋಷಿಮಾ ನಗರಕ್ಕೆ ಭೇಟಿ ನೀಡಿದ್ದಾರೆ. ಮುಂದುವರೆದ ರಾಷ್ಟ್ರಗಳ G7 ವಾರ್ಷಿಕ ಶೃಂಗಸಭೆಯಲ್ಲಿ ಮೋದಿ ಆಹಾರ, ರಸಗೊಬ್ಬರ ಭದ್ರತೆ ಮತ್ತು ಇಂಧನ ಸೇರಿದಂತೆ ಜಾಗತಿಕವಾಗಿ ರಾಷ್ಟ್ರಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುವ ನಿರೀಕ್ಷೆ ಇತ್ತು.
ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಸ್ವಯಂ ಘೋಷಿತ ವಿಶ್ವಗುರು ಅವರ ಸುತ್ತಲಿನ ಹೈಪ್ ಫ್ಯಾಕ್ಟರಿ ನಕಲಿ ನಿರೂಪಣೆಗಳನ್ನು ತಯಾರಿಸಲು ಪ್ರಾರಂಭಿಸಿದೆ” ಎಂದು ಹೇಳಿದರು. ತಮ್ಮ ಹೇಳಿಕೆಯನ್ನು ಮುಂದುವರೆಸಿ “ವಾಸ್ತವ ಇಲ್ಲಿದೆ: ಅಭಿವೃದ್ಧಿ ಹೊಂದಿದ ದೇಶಗಳ G7 ಶೃಂಗಸಭೆಗಳು 1976ರಲ್ಲಿ ಪ್ರಾರಂಭವಾಯಿತು. 2003ರಲ್ಲಿ ಮೊದಲ ಬಾರಿಗೆ ಭಾರತವನ್ನು ಕೆಲವು ಇತರ ದೇಶಗಳೊಂದಿಗೆ ಆಹ್ವಾನಿಸಲಾಯಿತು. ಡಾ. ಮನಮೋಹನ್ ಸಿಂಗ್ ಅಂತಹ G7 ಶೃಂಗಸಭೆಗಳಿಗೆ ನಿಯಮಿತವಾಗಿ ಭಾಗವಹಿದ್ದಾರೆ” ಎಂದು ಹೇಳಿದ್ದಾರೆ.
ಮೋದಿ ಅವರು G7 ನಲ್ಲಿ ಭಾಗವಹಿಸುತ್ತಿರುವುದರಲ್ಲಿ ವಿಶೇಷವೇನಿಲ್ಲ. ಅದನ್ನು ಮೋದಿ ಅವರಿಗೆ ನೀಡಿದ ವಿಶೇಷ ಗೌರವ ಎಂದು ಪರಿಣಿಗಣಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.