ಬೆಂಗಳೂರು,ಸೆ.6-
ಈತ ಮೋಸ್ಟ್ ವಾಂಟೆಡ್ ನಕ್ಸಲ್ .ಈತನ ಬಂಧನಕ್ಕಾಗಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.ಈತನ ಸುಳಿವು ನೀಡಿದವರಿಗೆ ದೊಡ್ಡ ಪ್ರಮಾಣದ ಬಹುಮಾನ ಕೂಡ ಘೋಷಿಸಿದ್ದರು.ಆದರೂ ಆತ
ಸಿಕ್ಕಿರಲಿಲ್ಲ.
ಆದರೆ, ಈತ ಈಗ ಬೆಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.ಅದು ಹೇಗೆಂದರೆ. ಈತನ ಗೆಳತಿ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ಇಲ್ಲಿಯೇ ನೆಲೆಸಿದ್ದಾರೆ.
ಆಕೆಯನ್ನು ನೋಡಲು ಹರಿಯಾಣದಿಂದ ನಗರಕ್ಕೆ ಬಂದಿದ್ದ ಈ ನಕ್ಸಲ್ ನನ್ನು ಸಿಸಿಬಿಯ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳು ಬಂಧಿಸಿದ್ದಾರೆ.
ಹರಿಯಾಣ ಮೂಲದ ಅನಿರುದ್ಧ್ ಬಂಧಿತ ನಕ್ಸಲ್ ಆಗಿದ್ದು,ಈತ ಸಿಪಿಐ ಮಾವೋವಾದಿಗಳ ಪರವಾಗಿ ಕೆಲಸ ಮಾಡುತ್ತಿದ್ದ ಈತನನ್ನು ಎಟಿಸಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅನಿರುದ್ಧ್ ನಿಷೇಧಿತ ಬರಹಗಳನ್ನು ಸರ್ಕ್ಯೂಲೇಟ್ ಮಾಡುತ್ತಿದ್ದ. ಇದುವರೆಗೂ ಯಾವ ಪೊಲೀಸರಿಗೂ ಸಿಕ್ಕಿಬಿದ್ದಿರಲಿಲ್ಲ. ಈಗ ಬೆಂಗಳೂರಿನ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ. ಈತನನ್ನು ಸಿಸಿಬಿ…
Previous Articleಗೌರಿ ಹಬ್ಬಕ್ಕೆ ಶಿವಕುಮಾರ್ ಗಂಗೆ ಪೂಜೆ
Next Article Infosys ಶೋಷಣೆ ಮಾಡುತ್ತಿದೆಯಾ..?