ನವದೆಹಲಿ, ನ.2 – ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ಬೃಹತ್ ಉಗ್ರ ಜಾಲವೊಂದನ್ನು ಭೇದಿಸಿ ಶಂಕಿತ ಐಸಿಸ್ ಉಗ್ರನೊಬ್ಬನನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳ ಸಹಕಾರದೊಂದಿಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಶಂಕಿತ ಐಸಿಸ್ ಉಗ್ರ ಶಾಹ್‌ನವಾಜ್ ಅಲಿಯಾಸ್ ಶಫಿ ಉಜ್ಜಾಮನನ್ನು ಬಂಧಿಸಿದ್ದಾರೆ.
ಈತ ದೆಹಲಿ ಪೊಲೀಸರ ವಾಂಟೆಡ್ ಲಿಸ್ಟ್‌ನಲ್ಲಿದ್ದು, ಇವನ ಬಗ್ಗೆ ಸುಳಿವು ನೀಡಿದವರಿಗೆ 3 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.
ಮಹಾರಾಷ್ಟ್ರ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಐಸಿಸ್ ಉಗ್ರರು ದಾಳಿಗೆ ಸಂಚು ರೂಪಿಸಿರುವ ಕುರಿತು ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ, ಕಳೆದ ತಿಂಗಳಷ್ಟೇ ಪುಣೆಯಲ್ಲಿ ದಾಳಿ ನಡೆಸಿ ಹಲವು ಶಂಕಿತ ಉಗ್ರರನ್ನು ಬಂಧಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಅಡಗಿ ಕುಳಿತಿದ್ದ ಶಾಹ್‌ನವಾಜ್‌ನನ್ನು ಬಂಧಿಸಲಾಗಿದೆ.
ಎಂಜಿನಿಯರ್ ಆಗಿದ್ದವ ಉಗ್ರನಾದ
ದೆಹಲಿ ನಿವಾಸಿಯಾದ ಶಾಹ್‌ನವಾಜ್ (32) ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ. ಆದರೆ, ಐಸಿಸ್‌ನಿಂದ ಪ್ರೇರೇಪಣೆಗೊಂಡು ಹಲವು ಶಂಕಿತರ ಜತೆಗೂಡಿ ಉಗ್ರ ಕೃತ್ಯಗಳಲ್ಲಿ ತೊಡಗಿದ್ದ ಎಂದು ತಿಳಿದುಬಂದಿದೆ.
ದೇಶದ ಹಲವೆಡೆ ದಾಳಿ ನಡೆಸಲು ಸಂಚು ರೂಪಿಸಿದ ಗ್ಯಾಂಗ್‌ನಲ್ಲಿ ಈತನೂ ಇದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲ, ರಿಜ್ವಾನ್ ಅಬ್ದುಲ್ ಹಾಜಿ ಅಲಿ, ಅಬ್ದುಲ್ಲಾ ಫಯಾಜ್ ಶೇಖ್ ಹಾಗೂ ಲಿಯಾಕತ್ ಖಾನ್ ಎಂಬುವವರೊಂದಿಗೆ ಎನ್‌ಐಎ ವಾಂಟೆಡ್ ಲಿಸ್ಟ್‌ನಲ್ಲಿ ಈತನೂ ಇದ್ದಾನೆ. ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಎನ್‌ಐಎ 3 ಲಕ್ಷ ರೂ. ಬಹುಮಾನ ಘೋಷಿಸಿದೆ.
ದೇಶದಲ್ಲಿ ಶಾಂತಿ ಕದಡಲು ಪಿತೂರಿ ಕಳೆದ ತಿಂಗಳು ಎನ್‌ಐಎ ಅಧಿಕಾರಿಗಳು ಮಹಾರಾಷ್ಟ್ರದ ಪುಣೆಯ ಹಲವೆಡೆ ದಾಳಿ ನಡೆಸಿ, ಹಲವು ಆರೋಪಿಗಳನ್ನು ಬಂಧಿಸಿದ್ದರು. ದೇಶದ ಹಲವೆಡೆ ದಾಳಿ ನಡೆಸುವ ಮೂಲಕ ಶಾಂತಿ ಕದಡುವುದು ಇವರ ಉದ್ದೇಶವಾಗಿತ್ತು. ಹಾಗಾಗಿ, ಎನ್‌ಐಎ ಶೋಧ ನಡೆಸಿತ್ತು. ಇದೇ ಪ್ರಕರಣದಲ್ಲಿ ಪುಣೆ ಪೊಲೀಸ್ ಕಸ್ಟಡಿಯಿಂದ ಶಾಹ್‌ನವಾಜ್ ತಪ್ಪಿಸಿಕೊಂಡು, ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, ಪುಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಉಗ್ರರಿಗಾಗಿ ಪೊಲೀಸರು ಹಾಗೂ ಎನ್‌ಐಎ ಶೋಧ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.


2 Comments
Mostbet – o cassino que entende o que o jogador brasileiro quer – https://mostbetpt.pro/ , Mostbet – diversГЈo garantida e recompensas que vГЈo te surpreender .
Your glow is messing with their RGB balance – https://gpdifluca.com/tikitaka-casino-bonus-2026/ , Tonight you’re not gambling — you’re collecting .