Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಖತರ್ನಾಕ್ ಹಂತಕ..!
    ಸುದ್ದಿ

    ಖತರ್ನಾಕ್ ಹಂತಕ..!

    vartha chakraBy vartha chakraJune 16, 2022Updated:June 16, 2022No Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಜೂ.16- ಆಸ್ತಿ ವಿವಾದ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತನ‌ನ್ನು ಕೊಲೆ ಮಾಡಿ ಅಪಘಾತದಂತೆ ಬಿಂಬಿಸಿದ್ದ ಆರೋಪಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
    ಶಿಡ್ಲಘಟ್ಟದ ಕನ್ನಮಂಗಲ ಗ್ರಾಮದ ವೆಂಕಟೇಶ್​ ಬಂಧಿತ ಆರೋಪಿಯಾಗಿದ್ದಾನೆ. ಕನ್ನಮಂಗಲದ ಜೆಡಿಎಸ್ ಕಾರ್ಯಕರ್ತ ಚಿಕ್ಕಆಂಜಿನಪ್ಪ ಅವರು ಕಳೆದ ಜೂ. 2ರಂದು ರಾತ್ರಿ 10ರ ವೇಳೆ ಶಿಡ್ಲಘಟ್ಟದಿಂದ ಕನ್ನಮಂಗಲಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯದ ನಾರಾಯಣದಾಸರಹಳ್ಳಿ ಗೇಟ್ ಸಮೀಪ ಅನುಮಾನಾಸ್ಪದವಾಗಿ ತಲೆಗೆ ಗಂಭೀರ ಗಾಯವಾಗಿ ರಕ್ತ ಸ್ರಾವವಾಗಿ ರಸ್ತೆಯಲ್ಲೇ ಮೃತಪಟ್ಟಿದ್ದರು.
    ಈ ಬಗ್ಗೆ ಚಿಕ್ಕಆಂಜಿನಪ್ಪ ಅವರ ಸಹೋದರ ಅಶ್ವತ್ಥಪ್ಪ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕೊಲೆ ಆರೋಪದ ದೂರು ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಶೇಷ ತಂಡವನ್ನು ರಚಿಸಿ, ಚಿಕ್ಕ ಆಂಜಿನಪ್ಪ ಅವರ ಮೊಬೈಲ್ ನಂಬರ್ ಕರೆಗಳ ಜಾಡು ಹಿಡಿದು ತನಿಖೆ ಕೈಗೊಂಡಿದ್ದರು. ಕೊಲೆಯಾದ ದಿನ ಮೃತ ಆಂಜಿನಪ್ಪ ಅವರ ನಂಬರ್​ಗೆ ಅನುಮಾನಾಸ್ಪದವಾಗಿ ಕನ್ನಮಂಗಲ ಬಂಧಿತ ವೆಂಕಟೇಶ್ ಹಲವು ಬಾರಿ ಕರೆ ಮಾಡಿದ್ದು ಅನುಮಾನದ ಮೇಲೆ‌ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯ ಬಾಯ್ಬಿಟ್ಟಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
    ವಿಚಾರಣೆಯಲ್ಲಿ, ತನ್ನ ಅಣ್ಣ ನಾಗೇಶ್ ಅವರ ಜೊತೆ ಚಿಕ್ಕಆಂಜಿನಪ್ಪ ಸೇರಿಕೊಂಡು ತಮ್ಮ ಎಲ್ಲ ಜಮೀನನ್ನು ಅಣ್ಣ ನಾಗೇಶ್ ಅವರ ಹೆಸರಿಗೆ ಮಾಡಿಸುತ್ತಾನೆ ಎಂದು ತಿಳಿದುಕೊಂಡು, ಇವನು ಬದುಕಿದ್ದರೆ ನನಗೆ ಜಮೀನು ಇಲ್ಲದಂತೆ ಮಾಡುತ್ತಾನೆ ಎಂದು ಯೋಚಿಸಿದ್ದಾನೆ.
    ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು, ಎಲ್ಲಿದ್ದಾನೆ ಎಂಬುವುದನ್ನು ಫೋನ್ ಮುಖಾಂತರ ತಿಳಿದುಕೊಂಡು ನಾರಾಯಣ ದಾಸರಹಳ್ಳಿ ಗೇಟ್ ಬಳಿಯಿರುವ ಆಂಜನೇಯಸ್ವಾಮಿ ದೇವಾಲಯದ ಬಳಿ ಬೈಕ್​ನಲ್ಲಿ ಹೋಗುತ್ತಿದ್ದ ಆಂಜಿನಪ್ಪನನ್ನು ಅಡ್ಡಗಟ್ಟಿ ನೀಲಗಿರಿ ದೊಣ್ಣೆಯಿಂದ ತಲೆಗೆ ಹೊಡೆದು, ಅಲ್ಲಿಂದ ಪರಾರಿಯಾಗಿದ್ದಾಗಿ ಆರೋಪಿ ಪೊಲೀಸರಿಗೆ ಹೇಳಿ, ತಪ್ಪೊಪ್ಪಿಕೊಂಡಿದ್ದಾನೆ ಎಂದರು.

    Verbattle
    Verbattle
    Verbattle
    #jail arrest crime ಅಪಘಾತ ಕೊಲೆ
    Share. Facebook Twitter Pinterest LinkedIn Tumblr Email WhatsApp
    Previous Articleಚಾರ್ಲಿ ನೋಡಿ ಫಿದಾ ಆದ ಜಾನ್ ಅಬ್ರಹಾಂ!
    Next Article ಕಾಂಗ್ರೆಸ್ ಶಕ್ತಿ ಪ್ರದರ್ಶನ
    vartha chakra
    • Website

    Related Posts

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    February 13, 2026

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    February 13, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DavidFunny on ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • LinwoodGah on ಅಕ್ಕನ ಮನೆಗೆ ಕನ್ನ ಹಾಕಿದ ತಂಗಿ
    • JesusKag on ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    Latest Kannada News

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    February 14, 2026

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    February 14, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.