Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಛೆ ! ಸ್ವಾಮೀಜಿ ಹೀಗೆಲ್ಲಾ ಮಾಡಿದ್ದಾ?
    ಅಪರಾಧ

    ಛೆ ! ಸ್ವಾಮೀಜಿ ಹೀಗೆಲ್ಲಾ ಮಾಡಿದ್ದಾ?

    vartha chakraBy vartha chakraOctober 14, 2022Updated:October 16, 2022No Comments3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಅ.14-ಅಪ್ರಾಪ್ತೆಯರ ಮೇಲೆ‌ ಲೈಂಗಿಕ ದೌರ್ಜನ್ಯದ ಪೋಕ್ಸೋ ‌ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿತ್ರದುರ್ಗದ ಬೃಹನ್ಮಠದ ಮುರುಘಾ ಶರಣರು,ಬಾಲಕಿಯೊಬ್ಬಳು ಋತುಮತಿಯಾಗುವ ತನಕವೂ ಅಂದರೆ ಅವಳು 7ನೇ ತರಗತಿ ಓದುತ್ತಿರುವವರೆಗೂ ಸತತ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
    ಕೋವಿಡ್‌ ಮೊದಲ ಅಲೆ ಸಂದರ್ಭದಲ್ಲಿಯೇ ಅಪ್ರಾಪ್ತೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಮುರುಘಾ ಶರಣರು, ವಾರ್ಡನ್‌ ರಶ್ಮಿ ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ನಿನ್ನೆ ತಡರಾತ್ರಿ ಈ ಸಂಬಂಧಿಸಿದಂತೆ ದೂರು ನೀಡಿದ್ದು ಈ  ಸಂಬಂಧ ಎಫ್‌ಐಆರ್‌ ದಾಖಲಾಗಿದೆ.
    ನಜರಾಬಾದ್‌ ಪೊಲೀಸರು ದಾಖಲಿಸಿರುವ ಎಫ್ ಐಆರ್ ನಲ್ಲಿ‌
    ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯರಿಬ್ಬರ ಪೈಕಿ ಒಬ್ಬಾಕೆ ಋತುಮತಿಯಾಗುವ ತನಕವೂ ಅಂದರೆ ಅವಳು 7ನೇ ತರಗತಿ ಓದುತ್ತಿರುವವರೆಗೂ ಸತತವಾಗಿ ಶಿವಮೂರ್ತಿ ಮುರುಘ ಶರಣ ಸ್ವಾಮೀಜಿಯವರು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬ ಆಘಾತಕಾರಿ ಅಂಶವು ಉಲ್ಲೇಖಿಸಲಾಗಿದೆ.
    ಅಲ್ಲದೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿರುವ ಬಾಲಕಿಯರಿಬ್ಬರ ತಾಯಿಯು ಆರ್ಥಿಕವಾಗಿ ಶಕ್ತರಲ್ಲದ ಕಾರಣ ತನ್ನಿಬ್ಬರು ಮಕ್ಕಳನ್ನೂ ಮಠದಲ್ಲಿನ ವಸತಿ ನಿಲಯಕ್ಕೆ ಸೇರಿಸಿದ್ದರು. ಈ ಮಕ್ಕಳಿಬ್ಬರು ಹಿಂದುಳಿದ ಸಮುದಾಯಕ್ಕೆ ಸೇರಿದವರು  ಎನ್ನುವುದು ಉಲ್ಲೇಖವಾಗಿದೆ.
    ಬಾಲಕಿಯರನ್ನು ಒತ್ತಾಯಪೂರ್ವಕವಾಗಿ ಶರಣರ ಖಾಸಗಿ ಕೊಠಡಿಗೆ ಕಳಿಸಲಾಗುತ್ತಿತ್ತು. ಬಾಗಿಲಲ್ಲಿ ನಿಂತು ಬೇರೆ ಯಾರೂ ಹೋಗದಂತೆ ಕಾಯ್ದುಕೊಳ್ಳುವುದು ಮತ್ತು ಮಕ್ಕಳು ಕೊಠಡಿಗೆ ಹೋಗಲು ಹಿಂಜರಿದಾಗ ಅವರನ್ನು ಮುರುಘಾ ಶರಣರ ಸಹಾಯಕರು ಹೆದರಿಸುತ್ತಿದ್ದರು ಎನ್ನುವ ಆತಂಕಕಾರಿ ಸಂಗತಿ ಕೂಡ ಎಫ್‌ಐಆರ್‌ ನಮೂದಾಗಿದೆ.
    ಪೋಕ್ಸೋ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಮೊದಲನೇ ಆರೋಪಿಯನ್ನಾಗಿಸಲಾಗಿದೆ. ವಾರ್ಡನ್‌ ರಶ್ಮಿ (2ನೇ ಆರೋಪಿ), ಬಸವಾದಿತ್ಯ (ಮೂರನೇ ಆರೋಪಿ), ಪರಮಶಿವಯ್ಯ (4ನೇ ಆರೋಪಿ)ಗಂಗಾಧರಯ್ಯ (5ನೇ ಆರೋಪಿ), ಮಹಾಲಿಂಗ (6ನೇ ಆರೋಪಿ), ಕರಿಬಸಪ್ಪ (7ನೇ ಆರೋಪಿ) ಇತರೆ ಆರೋಪಿಗಳಾಗಿರುವುದು ಎಫ್‌ಐಆರ್‌ ದಾಖಲಾಗಿದೆ.
    ಚಿತ್ರದುರ್ಗದ ಮಠದಲ್ಲಿ ಅಡುಗೆ ಸಹಾಯಕಿ ಆಗಿದ್ದ ಮಹಿಳೆಯಿಂದ ಶ್ರೀ ಗಳ ವಿರುದ್ಧ  ದೂರು ದಾಖಲಾಗಿದೆ. ತನ್ನ ಓರ್ವ ಮಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡುಹೋಗಿ ದೂರು ದಾಖಲಿಸಿದ್ದು,  ತನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇನ್ನಿಬ್ಬರು ಬಾಲಕಿಯರು ಸೇರಿದಂತೆ ಒಟ್ಟು ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
    ಸದ್ಯ ಮೈಸೂರಿನಿಂದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಆಗಲಿದೆ.
    ಎಫ್‌ಐಆರ್‌ ವಿವರ:
    ನನಗೆ ಗಂಡನ ಆಸರೆ ಸಿಗದ ಕಾರಣ ನಾನು, ನನ್ನಮಕ್ಕಳು ನನ್ನ ಪೋಷಕರ ಆಶ್ರಯದಲ್ಲಿರುತ್ತೇನೆ. ನನ್ನ ಪೋಷಕರು ಆರ್ಥಿಕ ಹಿಂದುಳಿದವರಾಗಿದ್ದು ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಾವು ಹಿಂದುಳಿದ ಜಾತಿಗೆ ಸೇರಿದವರಾಗಿರುತ್ತೇವೆ.
    ನನ್ನ ಗಂಡ ತೊರೆದ ನಂತರ ನನಗೆ ಮಕ್ಕಳನ್ನು ಸಾಕಲು ತೊಂದರೆಯಾಗಿದ್ದರಿಂದ ನನ್ನಮಕ್ಕಳನ್ನು ಮುರುಘಾ ಮಠದ ಆಡಳಿತದಲ್ಲಿರುವ ಎಸ್‌ಜೆಎಂ ಕನ್ನಡ ಮಾಧ್ಯಮ ಶಾಲೆಗೆ 2016ರಲ್ಲಿ 3ನೇ ತರಗತಿ ಮತ್ತು 1ನೇ ತರಗತಿಗೆ ಸೇರಿಸಿ ಮಠದ ಆಶ್ರಯದಲ್ಲಿರುವ ಅಕ್ಕಮಹಾದೇವಿ ವಸತಿ ನಿಲಯದಲ್ಲಿರುವ ಬಸವ ಮಕ್ಕಳ ವಸತಿ ನಿಲಯದಲ್ಲಿ ಆಶ್ರಯಕ್ಕಾಗಿ ದಾಖಲಿಸಿರುತ್ತೇನೆ. ನನ್ನ ಮಕ್ಕಳು ಹಾಸ್ಟೆಲ್‌ನಲ್ಲಿರುತ್ತಿದ್ದರು.
    ಖಾಸಗಿ ಕೋಣೆಯಲ್ಲಿ ಕೃತ್ಯ:
    ನನ್ನ ಮೊದಲನೇ ಮಗಳು 7ನೇ ತರಗತಿ ಓದುತ್ತಿರುವಾಗ ಅಂದರೆ 2019ರಿಂದ ಹಾಗೂ 2 ನೇ ಮಗಳು ಸಹ ಓದುತ್ತಿರುವಾಗ ಕೋವಿಡ್‌ ರಜೆಯಲ್ಲಿದ್ದಾಗ 2020ರಲ್ಲಿ ಶಿವಮೂರ್ತಿ ಮುರುಘ ಶರಣ ಸ್ವಾಮೀಜಿಯವರು ವಾರ್ಡನ್‌ ರಶ್ಮಿ ಮುಖಾಂತರ ತಮ್ಮ ಖಾಸಗಿ ಕೋಣೆಗೆ ಕರೆಸಿಕೊಂಡು ಪ್ರಥಮವಾಗಿ ಲೈಂಗಿಕ ದೌರ್ಜನ್ಯವನ್ನು ಮಾಡಿರುತ್ತಾರೆ ಎಂದು ನನ್ನ ಮಕ್ಕಳು ನನಗೆ ತಿಳಿಸಿರುತ್ತಾರೆ.ಶಿವಮೂರ್ತಿ ಮುರುಘ ಶರಣ ಸ್ವಾಮೀಜಿಯವರು ಅಂದಿನಿಂದಲೂ ಋತುಮತಿಯಾಗುವ ತನಕ ಅಂದರೆ ಅವಳು 7ನೇ ತರಗತಿ ಓದುತ್ತಿರುವವರೆಗೂ ಸತತವಾಗಿ ಲೈಂಗಿಕ ದೌರ್ಜನ್ಯ ಮಾಡಿರುತ್ತಾರೆ. ಇದರ ಜತೆಗೆ ಇದೇ ವಸತಿನಿಲಯದಲ್ಲಿರುವ 15 ವರ್ಷದ 10ನೇ ತರಗತಿ ಮತ್ತು 14 ವರ್ಷದ 9ನೇ ತರಗತಿ ಹಾಗ ಇನ್ನೂ ಮುಂತಾದ ಮಕ್ಕಳು ಅವರ ಹೆಸರುಗಳು ನನಗೆ ಸರಿಯಾಗಿ ನೆನಪಿಲ್ಲ.
    ವಾರ್ಡನ್‌ ರಶ್ಮಿ ಒತ್ತಡ:
    ವಾರ್ಡನ್‌ ರಶ್ಮಿ ಮಕ್ಕಳ ಮೇಲೆ ಒತ್ತಡ ತಂದು ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಸಹ ಹೆದರಿಸಿ ಅವರುಗಳನ್ನು ಸ್ವಾಮೀಜಿಯವರ ಖಾಸಗಿ ಕೊಠಡಿಗೆ ಯಾವುದಾದರೊಂದು ಕಾರಣ ನೀಡಿ ಕಳಿಸುತ್ತಿದ್ದಳು ಎಂದು ಮಕ್ಕಳು ನನಗೆ ತಿಳಿಸಿರುತ್ತಾರೆ.
    ಹಾಗೂ ಸ್ವಾಮೀಜಿವರ ಖಾಸಗಿ ಕೊಠಡಿಗೆ ಮಕ್ಕಳು ಹೋಗಲು ಒಪ್ಪದಿದ್ದ ಪಕ್ಷದಲ್ಲಿ ಮುರುಘಾ ಮಠದ ಸಾಧಕರಾದ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯ ಇವರುಗಳು ಮಕ್ಕಳನ್ನು ಹೆಸರಿಸಿ ಒತ್ತಾಯ ಮಾಡಿ ಕಳಿಸುತ್ತಿದ್ದಳು. ಸ್ವಾಮೀಜಿಯ ಅಸಿಸ್ಟೆಂಟ್‌ ಆಗಿರುವ ಮಹಾಲಿಂಗ ಹಾಗೂ ಅಡುಗೆ ಭಟ್ಟ ಕರಿಬಸಪ್ಪ ಇವರುಗಳು ಮಕ್ಕಳನ್ನು ಸ್ವಾಮೀಜಿಯ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿ ಬಿಡುವುದು ಹಾಗೂ ಬಾಗಿಲಲ್ಲಿ ನಿಂತು ಬೇರೆ ಯಾರೂ ಹೋಗದಂತೆ ಕಾಯ್ದುಕೊಳ್ಳುವುದು ಮತ್ತು ಮಕ್ಕಳು ಕೊಠಡಿಗೆ ಹೋಗಲು ಹಿಂಜರಿದಾಗ ಹೆದರಿಸುವುದು ಮಾಡುತ್ತಿದ್ದರು ಎಂದು ಬಾಲಕಿಯ ತಾಯಿಯು ದೂರಿನಲ್ಲಿ ವಿವರಿಸಿದ್ದಾರೆ.
    ಪ್ರತ್ಯೇಕ ವಿಚಾರಣೆ:
    12 ಮತ್ತು 14 ವರ್ಷದ ಬಾಲಕಿಯರಿಬ್ಬರು ತಮ್ಮ ತಾಯಿಯೊಂದಿಗೆ ಮೈಸೂರಿನ ಒಡನಾಡಿ ಸ್ಟಾನ್ಲಿ ಅವರನ್ನು ಸಂಪರ್ಕಿಸಿದ್ದರು. ಅವರ ಸಲಹೆ ಮೇರೆಗೆ ಮಕ್ಕಳು ಮತ್ತು ತಾಯಿಯು ಮೈಸೂರಿನ ಸಿಡಬ್ಲೂಸಿಯ ಮುಂದೆ ಹಾಜರಾಗಿದ್ದರು ಎಂದು ಗೊತ್ತಾಗಿದೆ.
    ಸಿಡಬ್ಲ್ಯೂಸಿಯು ಮಕ್ಕಳಿಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. ಆ ನಂತರ ಸಂತ್ರಸ್ತೆ ಬಾಲಕಿಯರ ಹೇಳಿಕೆಗಳನ್ನು ಪಡೆದು ದಾಖಲಿಸಿ ತಕ್ಷಣವೇ ಮುರುಘಾ ಶರಣರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಸಿಡಬ್ಲೂಸಿಯು ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು. 

    Business ಶಾಲೆ
    Share. Facebook Twitter Pinterest LinkedIn Tumblr Email WhatsApp
    Previous Articleಉದಯ್ ಗರುಡಾಚಾರ್ ಗೆ ಜೈಲು ಬೈಲು
    Next Article ಶಾಸಕರಿಗೆ ತಲ್ವಾರ್ ತೋರಿಸಿ ಬೆದರಿಕೆ
    vartha chakra
    • Website

    Related Posts

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    August 30, 2025

    ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು

    August 16, 2025

    ಕೆಟ್ಟು ನಿಂತ ಬಸ್ಸಿನಲ್ಲಿ ಸುಟ್ಟು ಕರಕಲಾದ !

    August 13, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Wernersaf on ಪೊಲೀಸ್ ಇಲಾಖೆ ಗೌರವ ಹಾಳಾಗುತ್ತಿದೆಯಂತೆ.
    • Connietaups on ದರ್ಶನ್ ಪರಪ್ಪನ ಅಗ್ರಹಾರದಿಂದ ಶಿಪ್ಟ್.?
    • ancieskxpa on ಬಾಬಾ ಸಿದ್ಧಿಕ್ಕಿ ಹತ್ಯೆ ನಂತರ, ಸಲ್ಮಾನ್‌ ಖಾನ್ ಹತ್ಯೆ ಮಾಡಲು ಟಾರ್ಗೆಟ್ ಮಾಡುತ್ತಿರುವ ಬಿಷ್ಣೋಯ್‌ ಗ್ಯಾಂಗ್!
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    August 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    August 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    August 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe