ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಆಷಾಢಮಾಸದ ಮೊದಲ ಶುಕ್ರವಾರದ ಪೂಜೆಗಳು ನಡೆಯುತ್ತಿವೆ. ಚಾಮುಂಡಿಬೆಟ್ಟದಲ್ಲಿ ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಜಿಲ್ಲಾಡಳಿತ ಹಾಗು ಚಾಮುಂಡಿಬೆಟ್ಟದ ಆಡಳಿತ ಮಂಡಳಿ ಸಹಯೋಗದಲ್ಲಿ ನಾಡ ಅಧಿದೇವತೆ ಚಾಮುಂಡಿ ಸೇರಿ ಬೆಟ್ಟವನ್ನೂ ಹಾಗು ದೇವಾಲಯವನ್ನು ಸಿಂಗರಿಸಲಾಗಿದೆ. ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗಿದೆ. ನಾಡ ಅಧಿದೇವತೆಗೆ ಪ್ರಾತಃಕಾಲದಿಂದಲೇ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಭಕ್ತರು ಸರಥಿ ಸಾಲಿನಲ್ಲಿ ಆಗಮಿಸಿ ನಾಡ ಅಧಿದೇವತೆ ಕಣ್ತುಂಬಿಕೊಳ್ಳುತ್ತಿದ್ದಾರೆ.
Previous Articleಕೇದಾರನಾಥದಲ್ಲಿ ಭೂಕುಸಿತ..!!
Next Article ಡುಂಕಿಗಾಗಿ ಶಾರುಖ್ ಗೆ ಜೋಡಿಯಾದ ತಾಪ್ಸಿ ಪನ್ನು