ಬೆಂಗಳೂರು.
ರಾಜ್ಯ ವಿಧಾನಸಭೆ Election ಮೇಲೆ ಕಣ್ಣಿಟ್ಟು ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಕನಸು ಕಾಣುತ್ತಿರುವ BJP ಗೆ ಇತ್ತೀಚಿನ ಕೆಲವು ಸಮೀಕ್ಷೆಯ ವರದಿಗಳು ನಿದ್ದೆಗೆಡುವಂತೆ ಮಾಡಿವೆ. ಅದರಲ್ಲೂ ಕರಾವಳಿ, ಮಲೆನಾಡು ಪ್ರದೇಶದಲ್ಲಿ BJP ಸ್ವಲ್ಪ ಹಿನ್ನಡೆಯನ್ನು ಅನುಭವಿಸುತ್ತಿದೆ.
ಬಳ್ಳಾರಿ (Bellary) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಾರ್ದನ ರೆಡ್ಡಿ (Janardhana Reddy) ಅವರ ನೂತನ ಪಕ್ಷ BJP ಗೆ ಹಿನ್ನಡೆಯುಂಟು ಮಾಡಲಿದೆ ಎಂಬ ವರದಿಗಳು ಕೇಸರಿ ಪಾಳಯದ ಹೈಕಮಾಂಡ್ ಅನ್ನು ತಲುಪಿವೆ. ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಮಲ ನಾಯಕರು ಇದೀಗ ಈ ಪ್ರದೇಶದಲ್ಲಿ ಪಕ್ಷದ ಪರವಾದ ಅಲೆ ಸೃಷ್ಟಿಸಲು ಪಕ್ಷದ ಹಿರಿಯ ನಾಯಕರು ರಂಗಪ್ರವೇಶ ಮಾಡಿದ್ದಾರೆ.
ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ಕರಾವಳಿ ಮತ್ತು ಬಳ್ಳಾರಿ ಪ್ರವಾಸ ಕೈಗೊಂಡು, ಕಾರ್ಯಕರ್ತರೊಂದಿಗೆ ಸಭೆ ಮತ್ತು ಸಾರ್ವಜನಿಕ ಸಭೆ ನಡೆಸಲಿದ್ದಾರೆ.
ನಾಳೆ ಉಡುಪಿಗೆ ಬರುತ್ತಿರುವ ಜೆ.ಪಿ.ನಡ್ಡಾ, 10.30ಕ್ಕೆ ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಜಿಲ್ಲೆಯ 1,111 ಬೂತ್‌ಗಳ ಅಧ್ಯಕ್ಷರು ಸಹಿತವಾಗಿ 12 ಮಂದಿ ಕಾರ್ಯಕರ್ತರನ್ನು ಒಳಗೊಂಡ ಸಮಿತಿಯ ಎಲ್ಲ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತರ ಬೈಂದೂರು ವಿಧಾನಸಭೆ ಕ್ಷೇತ್ರದ ಮುಳ್ಳಿಕಟ್ಟೆಯ ನಗು ಸಿಟಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಮುಖ್ಯ ಭಾಷಣ ಮಾಡಲಿದ್ದಾರೆ.
ಬೈಂದೂರು (Baindur) ಕ್ಷೇತ್ರದಿಂದ ಶೃಂಗೇರಿ (Sringeri ) ಗೆ ಪ್ರಯಾಣ ಬೆಳೆಸಲಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C T Ravi) ಮೊದಲಾದವರು ಭಾಗವಹಿಸಲಿದ್ದಾರೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆ.23ಕ್ಕೆ ಸಂಡೂರಿ (Sandur) ಗೆ ಆಗಮಿಸಲಿದ್ದಾರೆ. ಸಾರ್ವಜನಿಕ ಸಮಾವೇಶ ನಡೆಸಲಿದ್ದಾರೆ. ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ತೋರಣಗಲ್ಲಿನಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ BJP ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.