ಚಿಕ್ಕಮಗಳೂರು, ಡಿ.16- ದತ್ತ ಜಯಂತಿ ಸಂದರ್ಭದಲ್ಲಿ ದತ್ತಪೀಠಕ್ಕೆ ಭಕ್ತರು ತೆರಳುವ ದಾರಿಯಲ್ಲಿ ಮೊಳೆ ಹಾಕಿದ್ದ ಪ್ರಕರಣಕ್ಕೆ ಸಂಬಂಧ ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ನಗರದ ಮೊಹಮ್ಮದ್ ಶಾಹಬಾಸ್ ಹಾಗೂ ದುಬೈ ಮೂಲದ
ವಾಹೀದ್ ಹುಸೇನ್ ಎಂದು ಗುರುತಿಸಲಾಗಿದೆ. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಗ್ರಾಮಾಂತರ ಠಾಣಾ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.
ಕಳೆದ ಡಿ. 6ರಂದು ದತ್ತಜಯಂತಿ ಹಿನ್ನೆಲೆ ಅನುಸೂಯ ಜಯಂತಿ ನಡೆಯುವಾಗ ಈ ಪ್ರಕರಣ ನಡೆದಿತ್ತು. ದತ್ತ ಪೀಠಕ್ಕೆ ಬರುವ ಭಕ್ತಾದಿಗಳ ವಾಹನಗಳನ್ನು ಪಂಚರ್ ಮಾಡುವ ದುರುದ್ದೇಶದಿಂದ ಗಿರಿಸಾಲಿನ ರಸ್ತೆಗಳ ತಿರುವುಗಳಲ್ಲಿ ಮೊಳೆಗಳನ್ನು ಸುರಿಯಲಾಗಿತ್ತು.
ಬಾಂಬ್ ಸ್ಕ್ವಾಡ್, ಪೊಲೀಸರು ಹಾಗೂ ಭಜರಂಗದಳದ ಕಾರ್ಯಕರ್ತರು ಮೊಳೆ ತೆರವುಗೊಳಿಸಿದ್ದರು. ಎಡಿಜಿಪಿ ಅಲೋಕ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ತನಿಖೆಗೆ ಸೂಚನೆ ನೀಡಿದ್ದರು. ಇದೀಗ ಇಬ್ಬರನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ
Previous Articleಜನಾರ್ದನ ರೆಡ್ಡಿ ಅವರ ಕಲ್ಯಾಣ ಪ್ರಗತಿ ರಾಜ್ಯ ಪಕ್ಷ
Next Article ಶಾರುಕ್ ಖಾನ್ ಸಿನಿಮಾ ಪಠಾಣ್ Ban?