ಬೆಂಗಳೂರು,ಫೆ.17-
ರಾಜ್ಯದ ಅತ್ಯಂತ ಪ್ರತಿಷ್ಠಿತ ಹಾಗೂ ಜನಪ್ರಿಯ ನಂದಿನಿ ಬ್ರ್ಯಾಂಡ್‌ನ ಕೆಲವು ಉತ್ಪನ್ನಗಳ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವವರ ವಿರುದ್ಧ ಕಾನೂನುಕ್ರಮ ಜರುಗಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ (ಕೆ.ಎಂ.ಎಫ್) ಎಚ್ಚರಿಕೆ ನೀಡಿದೆ.
ನಂದಿನಿ ಉತ್ಪನ್ನಗಳು ಸೇವನೆಗೆ ಅಸುರಕ್ಷಿತವೆಂದು ಕೆಲವರು ದುರುದ್ದೇಶದಿಂದ ತಪ್ಪಾಗಿ ಪ್ರಚಾರ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ನಂದಿನಿ ಬ್ರಾಂಡ್ ನೊಂದಿಗೆ ಬೆಳೆದಿರುವ ಕೋಟ್ಯಾಂತರ ಗ್ರಾಹಕರಲ್ಲಿ ಅನಗತ್ಯ ಗೊಂದಲ ಉಂಟುಮಾಡಿರುವುದು ನಮ ಗಮನಕ್ಕೆ ಬಂದಿದೆ ಎಂದು ಮಂಡಳಿ ಹೇಳಿದೆ.
ಕೆ.ಎಂ.ಎಫ್ ಕಾನೂನುಬದ್ದ ಸಂಸ್ಥೆಗಳು ಹಾಗೂ ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (ಎಫ್‌ಎಸ್ ಎಎಐ) ನಿಗದಿಪಡಿಸಿರುವ ಎಲ್ಲಾ ಸುರಕ್ಷತಾ ಮಾನದಂಡಗಳು ಮತ್ತು ಅನುಮೋದಿತ ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದೆ. ನಂದಿನಿಹಾಲು ಹಾಗೂ ಹಾಲು ಉತ್ಪನ್ನಗಳೆಲ್ಲವೂ ಸೇವನೆಗೆ ಸಂಪೂರ್ಣ ಸುರಕ್ಷಿತವಾಗಿದ್ದು, ಗ್ರಾಹಕರು ಆತಂಕಪಡಬೇಕಾಗಿಲ್ಲ ಎಂದು ಕರ್ನಾಟಕ ಹಾಲು ಮಹಾಮಂಡಳಿಯು ಗ್ರಾಹರಿಗೆ ಭರವಸೆ ನೀಡಿದೆ
Previous Articleಅಮೆರಿಕಾದಲ್ಲಿ ಕನ್ನಡಿಗ ವಿದ್ಯಾರ್ಥಿಯ ಸಾವಿಗೆ ಒತ್ತಡವೇ ಕಾರಣವಾಯಿತೇ?
Next Article ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

