ಕೋಲಾರ
ಕಳೆದ ರಾತ್ರಿ ಇದ್ದಕ್ಕಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಎಲ್ಲಾ ಪೋಲೀಸರು ಹತ್ತು ಗಂಟೆಯ ವೇಳೆಗೆ ಸಮವಸ್ರ್ತಧರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ರವಾನಿಸಿದ್ದೇ ತಡ ಇಡೀ ಪೊಲೀಸ್ ವಲಯದಲ್ಲಿ ತಡ ರಾತ್ರಿ ವೇಳೆ ಯಾಕೆ, ಏನು ಎಂಬಿತ್ಯಾದಿ ಪ್ರಶ್ನೆಗಳು ಮೂಡಿದವು.
ಹಾಜರಾದ ಪೋಲೀಸರಿಗೆ ವರಿಷ್ಠಾಧಿಕಾರಿ ತಮ್ಮ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾಜಿ ಹಾಲಿ ರೌಡಿ ಶೀಟರ್ ಗಳನ್ನು ಹಾಗೂ ಕಳುವು ಪ್ರಕರಣಗಳಲ್ಲಿ ಹಳೇ ಚಾಳಿಯಲ್ಲಿ ಭಾಗಿಯಾಗಿದ್ದಂತಹ ಅಪರಾಧಿಗಳನ್ನ ತಲಾಷ್ ಮಾಡುವಂತೆ ಆದೇಶಿಸಿದ್ದು, ಪೋಲೀಸರು ತಮ್ಮ ಠಾಣಾ ವ್ಯಾಪ್ತಿಗಳಲ್ಲಿ ಇರುವ ಒಂದಷ್ಟು ಮಂದಿ ರೌಡಿಗಳನ್ನು ಬಂಧಿಸಿ ಕರೆತಂದಿದ್ದು, ಇದೀಗ ಠಾಣೆಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಅಲ್ಲದೇ ರಾತ್ರಿ ಸಮಯದಲ್ಲಿ ಅಲ್ಲಲ್ಲಿ ಚೆಕ್ ಪೋಸ್ಟ್ಗಳ ನಿಯೋಜನೆ ಮಾಡಿ ಅನಗತ್ಯವಾಗಿ ರಾತ್ರಿ ವೇಳೆ ಸಂಚರಿಸುವವರಿಗೂ ಖಡಕ್ ಸೂಚನೆ ನೀಡಿ ಕಳುಹಿಸಿದ್ದಾರೆ. ರಾತ್ರಿಯೇ ಮಾಹಿತಿ ನೀಡಿರುವ ವರಿಷ್ಠಾಧಿಕಾರಿ ಎಂ ನಾರಾಯಣ್ (M Narayana) ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ತೊಡಗುವ ವ್ಯಕ್ತಿಗಳಿಗೆ ಹಾಗೂ ರೌಡಿ ಶೀಟರುಗಳಿಗೆ ಮುಂದಿನ ಆಗುವ ಅಪಾಯದ ಮುನ್ಸೂಚನೆಯನ್ನ ನೀಡಿದ್ದಾರೆ. ಜಿಲ್ಲೆಯಲ್ಲಿ ಮೊಟ್ಟ ಮೊದಲನೇ ಬಾರಿ ಅದೂ ತಡ ರಾತ್ರಿಯ ವೇಳೆ ರೌಡಿ ಶೀಟರ್ ಗಳ ಮನೆಗಳ ಕದ ತಟ್ಟಿರುವುದು ಅಚ್ಚರಿಯಾದರೂ ಸಮಂಜಸವೇ ಆಗಿದೆ.
ಅಲ್ಲದೇ ಕೇಂದ್ರ ವಲಯ ಪೋಲೀಸ್ ಮಹಾನಿರ್ದೇಶಕರಾಗಿ ಖಡಕ್ ಅಧಿಕಾರಿ ರವಿ ಕಾಂತೇಗೌಡ (Ravikanthe Gowda) ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ತಮ್ಮ ವಲಯಾ ವ್ಯಾಪ್ತಿಗೆ ಬರುವ ಕೋಲಾರˌ ಕೆ ಜಿ ಎಫ್ˌ ತುಮಕೂರು ಚಿಕ್ಕಬಳ್ಳಾಪುರˌ ರಾಮನಗರˌ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾಷ್ ನಡೆಸಿದ್ದಾರೆ. ಈ ಬೆಳವಣಿಗೆ ಚುನಾವಣಾ ಸಮಯದಲ್ಲಿ ರೌಡಿ ಶೀಟರ್ ಗಳಿಗೆ ಎಚ್ಚರಿಕೆ ನೀಡಿದಂತಾಗಿದೆ. ಇದನ್ನು ಚುನಾವಣಾ ಪೂರ್ವದ ಮುನ್ಸೂಚನೆ ಎನ್ನಬಹುದಾಗಿದೆ.
1 Comment
ВНЖ Испании ВНЖ Испании .