ಬೆಂಗಳೂರು – ರಾಜಕೀಯದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಬಂದು ಸಾಕಷ್ಟು ಪ್ರಯೋಗಗಳನ್ನು ಮಾಡಿ ವಿಫಲವಾಗಿರುವ ನಿಖಿಲ್ ಕುಮಾರಸ್ವಾಮಿ ಇದೀಗ ಹಳೆ ಗಂಡನ ಪಾದವೇ ಗತಿ
ಎಂದು ಬಣ್ಣದ ಬದುಕಿತ್ತ ಮುಖ ಮಾಡಿದ್ದಾರೆ.
ಸಿನಿಮಾ ನಟನಾಗಬೇಕೆಂದು ವಿಶೇಷ ಕಾಳಜಿ ವಹಿಸಿ ವಿದೇಶಕ್ಕೆ ತೆರಳಿ ನಟನಾ ತರಬೇತಿಯನ್ನು ಪಡೆದುಕೊಂಡು ಬಂದ ನಿಖಿಲ್ ಕುಮಾರಸ್ವಾಮಿ, ಇಲ್ಲಿಯೂ ಕೂಡ ಸಿನಿಮಾ ನಿರ್ಮಾಣ ನಟನೆ ನಿರ್ದೇಶನ ಸೇರಿದಂತೆ ಹಲವು ವಿಷಯಗಳಲ್ಲಿ ತರಬೇತಿ ಪಡೆದುಕೊಂಡು ಒಂದೆರಡು ಸಿನಿಮಾದಲ್ಲಿ ನಟಿಸಿದರು ಕೂಡ.
ಇದರ ಬೆನ್ನಲ್ಲೇ ಅವರು ಸಿನಿಮಾ ರಂಗದಿಂದ ವಿಮುಖರಾಗಿ ರಾಜಕೀಯದತ್ತ ಆಸಕ್ತಿ ಬೆಳಸಿಕೊಂಡರು. ಬಣ್ಣದ ಬದುಕಿನಲ್ಲಿ ಸಿಕ್ಕಿದ ಅಲ್ಪಸ್ವಲ್ಪ ಜನಪ್ರಿಯತೆಯನ್ನು ಮುಂದಿಟ್ಟುಕೊಂಡು ತಾವು ಒಬ್ಬ ದೊಡ್ಡ ಸಿನಿಮಾ ನಟ ಎಂದು ಹೇಳಿಕೊಂಡು ರಾಜಕಾರಣದಲ್ಲಿ ಯಶಸ್ಸು ಗಳಿಸುವ ಪ್ರಯತ್ನ ನಡೆಸಿದರು
ತಮ್ಮ ತಾತ ಮಾಜಿ ಪ್ರಧಾನಿ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಎಂಬ ಭದ್ರಕೋಟೆ ಇವೆಲ್ಲವನ್ನು ಇಟ್ಟುಕೊಂಡು ರಾಜಕೀಯದಲ್ಲಿ ಸಾಧನೆ ಮಾಡಬೇಕೆಂದು ಬಂದ ನಿಖಿಲ್ ಕುಮಾರಸ್ವಾಮಿ ಮೊದಲಿಗೆ ಮಂಡ್ಯ ಲೋಕಸಭಾ Electionಯಲ್ಲಿ ಸ್ಪರ್ಧಿಸಿ ಹೀನಾಯ ಸೋಲು ಕಂಡರು.
ಆದರೂ ಧೃತಿಗೆಡದೇ ಪಕ್ಷ ಸಂಘಟನೆಯಲ್ಲಿ ತೊಡಗಿದ ನಿಖಿಲ್ ಕುಮಾರಸ್ವಾಮಿ ಅವರನ್ನು ಜಾತ್ಯತೀತ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಇದರಿಂದ ಮತ್ತಷ್ಟು ಉತ್ಸಾಹದಿಂದ ನಿಖಿಲ್ ಕುಮಾರಸ್ವಾಮಿ ಪಕ್ಷ ಪಕ್ಷ ಸಂಘಟನೆಯಲ್ಲಿ ತೊಡಗಿದರು ತಮ್ಮದೇ ಆದ ಪಡೆಯನ್ನು ಕಟ್ಟಿಕೊಂಡು ರಾಜ್ಯದಲ್ಲಿ ಪ್ರವಾಸ ಕೈಗೊಂಡರು.
ಸಿನಿಮಾ ನಟ ಎಂಬ ಹೆಗ್ಗಳಿಕೆಯೊಂದಿಗೆ ರಾಜ್ಯಾದ್ಯಂತ ಜೆಡಿಎಸ್ ಸಂಘಟನೆಯಲ್ಲಿ ತೊಡಗಿದ ನಿಖಿಲ್ ಕುಮಾರಸ್ವಾಮಿ ವಿಧಾನಸಭಾ ಚುನಾವಣೆ ಸ್ಪರ್ಧಿಸುವ ತೀರ್ಮಾನ ಕೈಗೊಂಡರು.
ಈ ಹಿನ್ನೆಲೆಯಲ್ಲಿ ಜಾತ್ಯಾತೀತ ಜನತಾದಳದ ಭದ್ರ ಕೋಟೆ ಎಂದು ಪರಿಗಣಿಸಲಾದ ರಾಮನಗರ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಇಲ್ಲಿಯವರೆಗೆ ಆಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅನಿತಾ ಕುಮಾರಸ್ವಾಮಿ ಅವರು ತಮ್ಮ ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡಿದರೆ ರಾಮನಗರ ಪಕ್ಕದಲ್ಲಿರುವ ಚನ್ನಪಟ್ಟಣ ಕ್ಷೇತ್ರದಿಂದ ಕುಮಾರಸ್ವಾಮಿ ಕಣಕ್ಕಿಳಿದರು. ಇದರಿಂದಾಗಿ ನಿಖಿಲ್ ಕುಮಾರಸ್ವಾಮಿ ಅವರು ಅತ್ಯಂತ ಸುಲಭವಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಲಿದ್ದಾರೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು.
ಆದರೆ ಮತದಾರ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ ಬರೋಬ್ಬರಿ ಎರಡು ದಶಕಗಳ ಕಾಲ ಈ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದ್ದ ಜೆಡಿಎಸ್ ಮತ್ತು ದೇವೇಗೌಡರ ಕುಟುಂಬವನ್ನು ಸಾರಾಸಗಟಾಗಿ ತಿರಸ್ಕರಿಸಿದ.
ಇದರಿಂದ ಆಘಾತಕ್ಕೊಳಗಾಗಿರುವ ನಿಖಿಲ್ ಕುಮಾರಸ್ವಾಮಿ ಇದೀಗ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಅಷ್ಟೇ ಅಲ್ಲ ಇನ್ನು ಮುಂದೆ ತಾವು ರಾಜಕೀಯ ಬಿಟ್ಟು ಸಿನಿಮಾ ಪ್ರಪಂಚದಲ್ಲಿ ಸಕ್ರಿಯವಾಗುವುದಾಗಿ ಹೇಳಿದ್ದಾರೆ.
Previous Articleಎಂ.ಬಿ.ಪಾಟೀಲ್ ಅವರನ್ನು ಗುರಾಯಿಸಿದ ಸುರೇಶ್ | Vidhana Soudha
Next Article ರಾಜ್ಯ ವಕ್ಫ್ ಮಂಡಳಿ ನೇಮಕದ ಅಚ್ಚರಿ