ಬೆಂಗಳೂರು,ಜೂ.18-
ಸಾಹಿತ್ಯ ಅಕಾಡೆಮಿ ಸೇರಿದಂತೆ ರಾಜ್ಯದ ವಿವಿಧ ಸಾಂಸ್ಕೃತಿಕ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರು ರಾಜಕೀಯ ಒಲವು -ನಿಲುವು ಹೊಂದಿದ್ದಾರೆ ಹೀಗಾಗಿ ಅವರು ಪಕ್ಷದ ಕಚೇರಿಗೆ ಬಂದಿದ್ದರಲ್ಲಿ ತಪ್ಪೇನು ಇಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಕೆಪಿಸಿಸಿ ಕಚೇರಿಗೆ ಸಾಹಿತ್ಯ, ಸಂಸ್ಕೃತಿ ಮತ್ತು ಇತರ ಅಕಾಡೆಮಿಗಳ ಅಧ್ಯಕ್ಷರ ಮತ್ತು ಪದಾಧಿಕಾರಿಗಳನ್ನು ಕರೆಸಿಕೊಂಡ ವಿಚಾರವಾಗಿ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತ ಆಗುತ್ತಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದಾಗ, ಅವರು ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.
ಎಲ್ಲ ಸರ್ಕಾರಗಳು ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕ ಮಾಡುವಾಗ ಅರ್ಹ ಅಭ್ಯರ್ಥಿಗಳ ರಾಜಕೀಯ ಒಲವು ನಿಲುವುಗಳನ್ನು ಗಮನಿಸಿ ಅವಕಾಶ ನೀಡುತ್ತದೆ ಅದರಂತೆ ಈಗಲೂ ನೇಮಕಾತಿ ಮಾಡಲಾಗಿದೆ ನೇಮಕಗೊಂಡವರನ್ನು ಪಕ್ಷದ ಕಚೇರಿಗೆ ಕರೆಯಲಾಗಿತ್ತು ಇದರಲ್ಲಿ ಇಷ್ಟ ಇದ್ದವರು ಬಂದಿದ್ದಾರೆ ಕೆಲವರು ಬಂದಿಲ್ಲ ಇದಕ್ಕೆ ವಿವಾದ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದರು.
ಸಾಂಸ್ಕೃತಿಕ ಸಂಸ್ಥೆಗಳು ಸ್ವಾಯತ್ತ ಸಂಸ್ಥೆಗಳು ಎಂದ ಮಾತ್ರಕ್ಕೆ ಅವುಗಳ ಅಧ್ಯಕ್ಷರು ಮತ್ತು ಸದಸ್ಯರಿಗೆ ರಾಜಕೀಯ ಒಲವು ನಿಲುವು ಇರಬಾರದು ಎಂದೇನಿಲ್ಲ ಅವರುಗಳು ಕೂಡ ನಮ್ಮಂತೆ ರಾಜಕಾರಣಿಗಳೇ ಆಗಿದ್ದಾರೆ ಎಂದು ತಿಳಿಸಿದರು.
Previous Articleಪೊಲೀಸರ ಸಮಯಪ್ರಜ್ಞೆಯಿಂದ ದರ್ಶನ್ ಬಂಧನ.
Next Article ಕ್ರೆಡಲ್ ಕಿರೀಟಕ್ಕೆ ಮತ್ತೊಂದು ಗರಿ ಬಂತು.