ನೊಬೆಲ್ ಪ್ರಶಸ್ತಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಎಂದೇ ಖ್ಯಾತಿ ಪಡೆದಿದ್ದು, ಆಲ್ಫ್ರೆಡ್ ನೊಬೆಲ್ ಎಂಬ ಸ್ವೀಡಿಶ್ ವಿಜ್ಞಾನಿ ಮತ್ತು ಉದ್ಯಮಿಯ ಸಾವಿನ ನಂತರ ಅವರ ಅಭಿಲಾಷೆಯಂತೆ ಭೌತ ವಿಜ್ಞಾನ, ರಾಸಾಯನಿಕ ವಿಜ್ಞಾನ, ಔಷಧ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಈ ಐದು ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೊಬೆಲ್ ಬಹುಮಾನ ನೀಡುತ್ತಾ ಬರಲಾಗಿದೆ.
1969ರಿಂದ ಸ್ವೀಡನ್ ನ ಸ್ವೆರಿಗೆಸ್ ರಿಕ್ಸ್ ಬ್ಯಾಂಕ್ ಆರ್ಥಿಕ ವಿಜ್ಞಾನ ವಿಭಾಗದಲ್ಲೂ ನೊಬೆಲ್ ಫೌಂಡೇಶನ್ ನ ಅನುಮೋದನೆ ಇರುವ ಸ್ವೆರಿಗೆಸ್ ರಿಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ನೀಡುತ್ತಿದ್ದು ಇದು ಅಧಿಕೃತ ನೊಬೆಲ್ ಪುರಸ್ಕಾರ ಎನಿಸುವುದಿಲ್ಲ. ಪರೋಕ್ಷ ನೊಬೆಲ್ ಪ್ರಶಸ್ತಿಯಾಗಿದೆ.
ಈ ಪ್ರಶಸ್ತಿಗಳನ್ನು 1900 ರಿಂದ ನೀಡಲಾಗಿದ್ದು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸಾಧಕರ ನಾಮ ನಿರ್ದೇಶನ ಮಾಡಲು ಅವಕಾಶವಿದೆ. ಸ್ವೀಡನ್ ಮತ್ತು ನಾರ್ವೆಯಲ್ಲಿ ಈ ಬಹುಮಾನಗಳನ್ನು ನೀಡಲಾಗುತ್ತದೆ. ಈ ಪ್ರಶಸ್ತಿಗೆ ಆಯ್ಕೆಯಾದವರಿಗೆ ನೊಬೆಲ್ ಪರಿದೋಷಕ ಮತ್ತು (11 SEK, ಸ್ವೀಡನ್ ಹಣ) ಭಾರತದಲ್ಲಿ 8.1 ಕೋಟಿ ಯನ್ನು ಬಹುಮಾನವಾಗಿ ನೀಡಲಾಗುತ್ತದೆ.
ಅದರಂತೆ ಈ ವರ್ಷವೂ ಪ್ರಶಸ್ತಿ ಸಾಧಕರನ್ನು ಘೋಷಣೆ ಮಾಡಿದ್ದೂ ಅಕ್ಟೋಬರ್,7 ರಂದು ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು, ಅ,8 ರಂದು ಭೌತ ಶಾಸ್ತ್ರ ಅ,9 ರಂದು ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ, ಸಾಹಿತ್ಯ ಶಾಸ್ತ್ರ ಪ್ರಶಸ್ತಿಯನ್ನು ಅ,10 ರಂದು ಶಾಂತಿ ಪ್ರಶಸ್ತಿಯನ್ನು 11,ರಂದು ಘೋಷಣೆ ಮಾಡಿದ್ದೂ ಆರ್ಥಿಕ ವಿಜ್ಞಾನ ಶಾಸ್ತ್ರ ಪ್ರಶಸ್ತಿಯನ್ನು ಅ,14 ರಂದು ಘೋಷಣೆ ಮಾಡಲಾಗಿದೆ.
2024 ರ ನೊಬೆಲ್ ಪ್ರಶಸ್ತಿ ಸಾಧಕರು ಈ ಕೆಳಗಿನಂತಿದ್ದು
- ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ – ಜಾನ್ ಹಾಪ್‌ಫೀಲ್ಡ್ ಮತ್ತು ಜೆಫ್ರಿ E. ಹಿಂಟನ್ ಅವರ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನಡೆಸಿದ ಅಧ್ಯಯನಕ್ಕಾಗಿ 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಸಿಕ್ಕಿದೆ. ನರಗಳ ಜಾಲದಲ್ಲಿ ಕೃತಕ ಯಂತ್ರಗಳನ್ನು ಸಕ್ರಿಯಗೊಳಿಸುವ ಬಗ್ಗೆ ನಡೆಸಿದ ಸಂಶೋಧನೆಗಳು ಮತ್ತು ಆವಿಷ್ಕಾರಕ್ಕಾಗಿ ಇವರಿಬ್ಬರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
- ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ – ಡೇವಿಡ್ ಬೇಕರ್ , ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರಿಗೆ 2024ರ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ. ಡೇವಿಡ್ ಬೇಕರ್ ಅವರಿಗೆ ಕಂಪ್ಯೂಟೇಶನಲ್ ಪ್ರೊಟೀನ್ ವಿನ್ಯಾಸಕ್ಕೆ ಹಾಗೂ ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರಿಗೆ ಭವಿಷ್ಯದಲ್ಲಿ ಪ್ರೋಟೀನ್ ರಚನೆಯ ಅಧ್ಯಯನಕ್ಕಾಗಿ ಈ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಪ್ರೋಟೀನ್ ರಹಸ್ಯಗಳನ್ನು ತಿಳಿಸುವ ಬಗ್ಗೆ ಈ ಅಧ್ಯಯನ ಹೇಳುತ್ತದೆ.
- ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರ ನೊಬೆಲ್ ಪ್ರಶಸ್ತಿ – ಮೈಕ್ರೊ ಆರ್ ಎನ್ ಎ ಮತ್ತು ಅದರ ನಂತರದ ಪ್ರತಿಲೇಖನ ಜೀನ್ ನಿಯಂತ್ರಣದಲ್ಲಿ ಮೈಕ್ರೊ ಆರ್ ಎನ್ ಎ ಪಾತ್ರದ ಅಧ್ಯಯನಕ್ಕಾಗಿ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರಕ್ಕೆ 2024ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ
- ಸಾಹಿತ್ಯ ಕ್ಷೇತ್ರ ನೊಬೆಲ್ ಪ್ರಶಸ್ತಿ – ದಕ್ಷಿಣ ಕೊರಿಯಾದ ಲೇಖಕಿ ಹಾನ್ ಕಾಂಗ್ ಅವರಿಗೆ ಇಂದು (ಅಕ್ಟೋಬರ್ 10) ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಕವಯಿತ್ರಿಯಾಗಿದ್ದ ಹಾನ್ ಕಾಂಗ್ ಬಳಿಕ ಕಾದಂಬರಿಗಾರ್ತಿಯಾದರು. ಹಲವು ಕಥಾ ಸಂಕಲಗಳನ್ನು ಹೊರತಂದಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚೆಗೆ ಬಹಳ ಹೆಸರು ಮಾಡುತ್ತಿದ್ದಾರೆ.
- ಶಾಂತಿ ನೊಬೆಲ್ ಪ್ರಶಸ್ತಿ – ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ಶಾಂತಿ ನೊಬೆಲ್ ಪ್ರಶಸ್ತಿ, ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ಈ ಬಾರಿ 2024ನೇ ಶಾಂತಿ ನೊಬೆಲ್ ಪ್ರಶಸ್ತಿ ಬಂದಿದೆ. ಪರಮಾಣು ಶಸ್ತ್ರಾಸ್ತ್ರಗಳ ಮುಕ್ತ ಜಗತ್ತನ್ನು ಸಾಧಿಸುವ ಪ್ರಯತ್ನ ಹಾಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ ಎಂದಿಗೂ ಬಳಸಬಾರದು ಎಂದು ಸಾಕ್ಷಿ ಸಾಕ್ಷ್ಯದ ಮೂಲಕ ಪ್ರದರ್ಶಿಸುತ್ತಿರುವುದಕ್ಕೆ ಪ್ರಶಸ್ತಿ ನೀಡಿಲಾಗಿದೆ.
- ಆರ್ಥಿಕ ವಿಜ್ಞಾನ ನೊಬೆಲ್ ಪ್ರಶಸ್ತಿ – ಡೆರೋನ್ ಅಸಿಮೊಗ್ಲು, ಸೈಮನ್ ಜಾನ್ಸನ್, ಜೇಮ್ಸ್ ರಾಬಿನ್ಸನ್ ಎಂಬ ಅಮೆರಿಕನ್ ಆರ್ಥಿಕ ವಿಜ್ಞಾನಿಗಳು 2024ರ ಸಾಲಿನ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ ಪ್ರಶಸ್ತಿ ಮತ್ತು ಬಹುಮಾನವನ್ನು ಪಡೆದಿದ್ದಾರೆ. ಈ ಮೂವರು ಆರ್ಥಿಕ ತಜ್ಞರು, ಸಾಮಾಜಿಕ ಸಂಸ್ಥೆಗಳು ಹೇಗೆ ರಚನೆ ಆಗುತ್ತವೆ, ಹಾಗೂ ಅವುಗಳಿಂದ ಪ್ರಗತಿ ಮೇಲೆ ಏನು ಪರಿಣಾಮ ಎಂಬುದನ್ನು ತಮ್ಮ ಅಧ್ಯಯನಗಳಿಂದ ವಿವರಿಸಿದ್ದಾರೆ. ಇವರ ಈ ಸಾಧನೆಗಾಗಿ ಪರೋಕ್ಷ ನೊಬೆಲ್ ಪುರಸ್ಕಾರ ಲಭಿಸಿದೆ.