ಅಕ್ಟೋಬರ್ 24 ವಿಶ್ವ ಸಂಸ್ಥೆಯು ಸ್ಥಾಪಿತವಾದ ದಿನವಾಗಿದ್ದು ಇದರ ಸವಿನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ವಿಶ್ವದ ಮೊದಲನೇ ಮತ್ತು ಎರಡನೆಯ ಮಹಾಯುದ್ಧದ ಭೀಕರತೆಯ ನಂತರ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು, ಅಗತ್ಯವಿರುವವರಿಗೆ ಮಾನವೀಯ ನೆರವು ನೀಡಲು, ಮಾನವ ಹಕ್ಕುಗಳನ್ನು ರಕ್ಷಿಸಲು ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಲು ಮತ್ತು ಮೂರನೇ ಮಹಾಯುದ್ಧ ನಡೆಯದಂತೆ ತಡೆಯಲು, ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳ ಸೂಚನೆ ಮೇರೆಗೆ ಹುಟ್ಟಿಕೊಂಡ ಸಂಸ್ಥೆಯೇ ವಿಶ್ವಸಂಸ್ಥೆ.
ವಿಶ್ವ ಸಂಸ್ಥೆಯ ಇತಿಹಾಸ
- ವಿಶ್ವಸಂಸ್ಥೆಯನ್ನು ಅಧಿಕೃತವಾಗಿ 24 ಅಕ್ಟೋಬರ್ 1945 ರಂದು ಸ್ಥಾಪಿಸಲಾಯಿತು. ಎರಡನೆಯ ಮಹಾಯುದ್ಧದ ನಂತರ, ಪ್ರಪಂಚದ ಎಲ್ಲ ದೇಶಗಳು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು ಒಂದು ಸಂಘಟನೆಯ ಅವಶ್ಯಕತೆಯನ್ನು ಅರಿತು ಅದರ ರಚನೆಗೆ ಮುಂದಾದವು.
- ಇದರ ಸಲುವಾಗಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಮ್ಮೇಳನವನ್ನು ನಡೆಸಲಾಯಿತು, ಇದರಲ್ಲಿ ವಿಶ್ವದ 50 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯ ಕೊನೆಯ ದಿನ, 24 ಅಕ್ಟೋಬರ್ 1945 ರಂದು ಜಾರಿಗೆ ಬಂದ ಚಾರ್ಟರ್(ಕರುಡು ರೂಪುರೇಷೆ) ಗೆ ಸಹಿ ಹಾಕಲಾಯಿತು.
- ವಿಶ್ವಸಂಸ್ಥೆ ತನ್ನ ಕಾರ್ಯ ನಿರ್ವಹಿಸಲು ಸಾಮಾನ್ಯ ಸಭೆ, ಭದ್ರತಾ ಮಂಡಳಿ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿ, ಧರ್ಮದರ್ಶಿತ್ವ ಮಂಡಳಿ, ಅಂತಾರಾಷ್ಟ್ರೀಯ ನ್ಯಾಯಾಲಯ ಹಾಗೂ ಸಚಿವಾಲಯವನ್ನು ಒಳಗೊಂಡಿದೆ.
ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು
- ವಿಶ್ವಸಂಸ್ಥೆ ರಚನೆಯಾದಾಗ 50 ಸದಸ್ಯರಿದ್ದರು. ಇಂದು 193 ರಾಷ್ಟ್ರಗಳು ಪೂರ್ಣ ಸದಸ್ಯತ್ವ ಹೊಂದಿವೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯ ಹಲವಾರು ಶಾಖೆಗಳಿವೆ.
- ಚೀನಾ,ಫ್ರಾನ್ಸ್ ,ರಷ್ಯಾ,ಯುನೈಟೆಡ್ ಕಿಂಗ್ಡಮ್ , ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ವಿಶ್ವಸಂಸ್ಥೆಯ ಕಾಯಂ ಸದಸ್ಯ ರಾಷ್ಟ್ರಗಳು.
ಭಾರತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿದೆಯೇ?
- ಹೌದು, 1945 ರ ಜೂನ್ 26 ರಂದು ವಿಶ್ವಸಂಸ್ಥೆಯ ಚಾರ್ಟರ್‌ಗೆ ಸಹಿ ಹಾಕಿದ ಮೊದಲ 50 ದೇಶಗಳಲ್ಲಿ ಭಾರತವೂ ಸೇರಿದ್ದು, 30 ಅಕ್ಟೋಬರ್ 1945 ರಂದು ಅಧಿಕೃತವಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಯಿತು.
ವಿಶ್ವಸಂಸ್ಥೆಯ ಮೊದಲ ಸಮಾವೇಶ 1946 ರಲ್ಲಿ ಲಂಡನ್ ಅಲ್ಲಿ ನಡೆಯಿತು.
ವಿಶ್ವಸಂಸ್ಥೆ ದ್ವಜ ಮಾಹಿತಿ
- 1947 ಅಕ್ಟೋಬರ್ 20 ರಂದು ಸಾಮಾನ್ಯಸಭೆ ವಿಶ್ವಸಂಸ್ಥೆ ದ್ವಜವನ್ನು ಅನುಮೋದಿಸಿತು ಈ ದ್ವಜ ನೀಲಿ ಬಣ್ಣವನ್ನು ಹೊಂದಿದ್ದು ಮದ್ಯದಲ್ಲಿ ಬಿಳಿ ಬಣ್ಣದ ಭೂಮಿಯ ಚಿತ್ರವನ್ನು ಮತ್ತು ಚಿತ್ರದ 2 ಕಡೆ ಆಲಿವ್ ಮರದ 2 ಕೊಂಬೆಗಳನ್ನು ಹೊಂದಿದೆ. ಇದರ ಉದ್ದ 2 ಅನುಪಾತದಲ್ಲಿದೆ.
ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು ಮತ್ತು ಪ್ರದಾನ ಕಚೇರಿ ಇರುವ ಸ್ಥಳ
- ಅರೇಬಿಕ್ ಚೈನೀಸ್ ಇಂಗ್ಲಿಷ್ ಪ್ರೆಂಚ್ ರಷ್ಯನ್ ಮತ್ತು ಸ್ಟ್ಯಾನಿಷ್ ಆಗಿದ್ದು ಇದರ ಪ್ರದಾನ ಕಚೇರಿ ನ್ಯೂಯಾರ್ಕ್ (ಅಮೇರಿಕ) ದಲ್ಲಿದೆ ಯುರೋಪ್ ಗೆ ಸಂಬಂದಿಸಿದ ಕಚೇರಿ ಜಿನೀವಾದಲ್ಲಿದೆ.