ಒಡಿಯಾ ಟಿವಿ ಧಾರಾವಾಹಿ ನಟಿ ರಶ್ಮಿರೇಖಾ ಓಜಾ ಅವರು ಜೂನ್ 18 ರಂದು ಭುವನೇಶ್ವರ ನಗರದ ನಯಾಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗಡಸಾಹಿ ಪ್ರದೇಶದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಾತ್ರಿ 10.30ರ ಸುಮಾರಿಗೆ ಆಕೆಯ ಶವ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡಿದ್ದು, ಘಟನೆಯ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು.ತನಿಖೆ ಆರಂಭಿಸಿದ್ದಾರೆ.
ಮತ್ತೊಂದೆಡೆ, ಶವದ ಬಳಿ ಮೇಜಿನ ಮೇಲೆ ಇರಿಸಲಾಗಿದ್ದ ಚೀಟಿಯನ್ನು ಪೊಲೀಸರು ಪತ್ತೆ ಮಾಡಿದರು. ಈ ಡೆತ್ ನೋಟ್ ನಟಿಯೇ ಬರೆದಿರುವ ಶಂಕೆ ವ್ಯಕ್ತವಾಗಿದೆ. ಆಕೆಯ ಸಾವಿಗೆ ಯಾರೂ ಹೊಣೆಯಲ್ಲ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ. ಆತ್ಮಹತ್ಯೆಗೆ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.
ಜಗತ್‌ಸಿಂಗ್‌ಪುರ ಜಿಲ್ಲೆಯ ತಿರ್ಟೋಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಕೇತ್‌ಪಟಾನಾದಿಂದ ಬಂದ ಓಜಾ, ನಟನಾ ವೃತ್ತಿಜೀವನವನ್ನು ಮುಂದುವರಿಸಲು +2 ಕೋರ್ಸ್ ಮುಗಿಸಿದ ನಂತರ ಭುವನೇಶ್ವರಕ್ಕೆ ಬಂದಿದ್ದರು. ‘ಕೆಮಿತಿ ಕಹಿಬಿ ಕಹಾ’ ಧಾರಾವಾಹಿಯಲ್ಲಿನ ಪಾತ್ರದಿಂದ ಅವರು ಜನಪ್ರಿಯರಾಗಿದ್ದರು
Previous Articleಮತ್ತೆ ಮೈದಾನಕ್ಕಿಳಿದು ಬ್ಯಾಟ್ ಬೀಸಿದ ಕಿಚ್ಚ!
Next Article ಕಾರು ಟ್ಯಾಂಕರ್ ಡಿಕ್ಕಿ ಐವರು ಸಾವು