ಬೆಂಗಳೂರು,ಮಾ.18- Ola ಮತ್ತು Uber ಕ್ಯಾಬ್ಗಳಿಗೆ ಸೆಡ್ಡು ಹೊಡೆಯಲು ರೂಪಿಸಲಾಗಿರುವ ಆಟೋಚಾಲಕರು ಮತ್ತು ಪ್ರಯಾಣಿಕರ ಮಧ್ಯೆ ನೇರ ಸಂಪರ್ಕ ಕಲ್ಪಿಸುವ ನಮ್ಮ ಯಾತ್ರಿ ಅ್ಯಪ್ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ.
ನಮ್ಮ ಯಾತ್ರಿ ಅ್ಯಪ್ ನಲ್ಲಿ ನಗರದ 43 ಸಾವಿರಕ್ಕೂ ಹೆಚ್ಚು ಆಟೋ ಚಾಲಕರು ನೊಂದಾಯಿಸಿಕೊಂಡಿದ್ದು,ನಮ್ಮ ಯಾತ್ರಿ ಆ್ಯಪ್ 4 ಲಕ್ಷ ಮಂದಿ ಗ್ರಾಹಕರನ್ನು ಹೊಂದಿದೆ.
ಮಧ್ಯವರ್ತಿ ಬದಲು ನೇರವಾಗಿ ಗ್ರಾಹಕ ಮತ್ತು ಆಟೊಚಾಲಕರ ಮಧ್ಯೆ ಸೇವೆ ಮತ್ತು ಪಾವತಿ ಎರಡೂ ಕೊಡಲಾಗುತ್ತಿರುವ ವಿಶೇಷ ವ್ಯವಸ್ಥೆಯನ್ನು ನಮ್ಮ ಯಾತ್ರಿ ಒದಗಿಸಿರುವುದು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ನಮ್ಮ ಯಾತ್ರಿ ಪ್ಲಾಟ್ಫಾರ್ಮ್ ನೀಡಿರುವ ಮಾಹಿತಿ ಪ್ರಕಾರ ಇದು ವಿಶ್ವದ ಮೊದಲ ಪರಿಪೂರ್ಣ ಓಪನ್ ಮೊಬಿಲಿಟಿ ಆ್ಯಪ್ ಆಗಿದೆ. ಇದರಲ್ಲಿ ಆಟೊಚಾಲಕರು ಮತ್ತು ಪ್ರಯಾಣಿಕರ ಮಧ್ಯೆ ನೇರ ಸಂಪರ್ಕ ಇರುತ್ತದೆ. ಕ್ಯಾಬ್ ಅಗ್ರಿಗೇಟರ್ ರೀತಿ ಮಧ್ಯವರ್ತಿ ಎಂಬುದಿರುವುದಿಲ್ಲ.
ಗ್ರಾಹಕರು ನೀಡುವ ಪೇಮೆಂಟ್ ನೇರವಾಗಿ ಮತ್ತು ಸಂಪೂರ್ಣವಾಗಿ ಚಾಲಕರಿಗೆ ಸೇರುತ್ತದೆ. ಓಲಾ, ಊಬರ್ನಂತಹ ಕ್ಯಾಬ್ ಸೇವೆಗಳಲ್ಲಿ ಚಾಲಕರು ಇಂತಿಷ್ಟು ಹಣವನ್ನು ಕಮಿಷನ್ ಆಗಿ ಕ್ಯಾಬ್ ಅಗ್ರಿಗೇಟರ್ಗೆ ಕೊಡಬೇಕು. ಆದರೆ ನಮ್ಮ ಯಾತ್ರಿಯಲ್ಲಿ ಚಾಲಕರು ಕಮಿಷನ್ ಕೊಡುವುದು ತಪ್ಪುತ್ತದೆ. ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಸೇವೆ ಕೊಡಲು ಇದರಿಂದ ಸಾಧ್ಯವಾಗುತ್ತದೆ. ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಲಾಭ ತರುತ್ತದೆ. ನಮ್ಮ ಯಾತ್ರಿ ಆ್ಯಪ್ನ ವಿಶೇಷತೆಯೇ ಇದು. ಆಂಡ್ರಾಯ್ಡ್ ಮತ್ತು ಆ್ಯಪಲ್ ಸ್ಟೋರ್ಗಳಲ್ಲಿ ನಮ್ಮ ಯಾತ್ರಿ ಅ್ಯಪ್ಗೆ 4.8 ರೇಟಿಂಗ್ ಇದೆ.
ನಮ್ಮ ಯಾತ್ರಿ ಹಿಂದಿನ ತಾಂತ್ರಿಕ ಶಕ್ತಿ ನಂದನ್ ನಿಲೇಕಣಿ ಅವರಾಗಿದ್ದಾರೆ
ನಮ್ಮ ಯಾತ್ರಿ ಆ್ಯಪ್ ಅನ್ನು ಬೆಕನ್ ಪ್ರೊಟೊಕಾಲ್ನಲ್ಲಿ ರೂಪಿಸಲಾಗಿದೆ. . ಬೆಕನ್ ಫೌಡೇಶನ್ ಸಹಯೋಗದಲ್ಲಿ ಜಸ್ಪೇ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಇದೇ ಮಾದರಿಯಲ್ಲಿ ಕೇರಳ ಕೊಚ್ಚಿಯಲ್ಲೂ ಬೆಕನ್ ಫೌಂಡೇಶನ್, ಜಸ್ಪೇ ಮೊದಲಾದ ವಿವಿಧ ಸಂಸ್ಥೆಗಳು ಸೇರಿ ಓಪನ್ ಮೊಬಿಲಿಟಿ ನೆಟ್ವರ್ಕ್ ಅಭಿವೃದ್ಧಿಪಡಿಸಿವೆ. ಅಲ್ಲಿ ವಿವಿಧ ಸಾರಿಗೆಗಳ ಮೊಬೈಲ್ ಅಪ್ಲಿಕೇಶನ್ಗಳನ್ನು ಏಕೀಕೃತಗೊಳಿಸಿ ಒಂದೇ ಪ್ಲಾಟ್ಫಾರ್ಮ್ ಅಡಿಗೆ ತರಲಾಗಿದೆ. ಬೆಂಗಳೂರಿನಲ್ಲೂ ಇಂತಹದ್ದೇ ವ್ಯವಸ್ಥೆ ಮಾಡುವ ಉದ್ದೇಶವಿದೆ. ಸದ್ಯ ಅಟೊಚಾಲಕರ ನಮ್ಮ ಯಾತ್ರಿ ಆ್ಯಪ್ ಮಾತ್ರ ಈ ಪ್ಲಾಟ್ಫಾರ್ಮ್ನಲ್ಲಿದೆ. ಮುಂದೆ ಬೇರೆ ಸಾರಿಗೆಗಳ ಸೇವೆ ಇದರಲ್ಲಿ ಸೇರಬಹುದು. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.
ಇದೇ ವೇಳೆ, ನಮ್ಮ ಯಾತ್ರಿ ಅಪ್ಲಿಕೇಶನ್ ಬಗ್ಗೆ ಆಟೊರಿಕ್ಷಾ ಚಾಲಕರ ಸಂಘದ (ಎಆರ್ಡಿಯು) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಸಮಾಧಾನ ವ್ಯಕ್ತಪಡಿಸಿದ್ದಾರೆ.
Archives
- March 2026
- February 2026
- January 2026
- December 2025
- November 2025
- October 2025
- September 2025
- August 2025
- July 2025
- June 2025
- May 2025
- April 2025
- March 2025
- February 2025
- January 2025
- December 2024
- November 2024
- October 2024
- September 2024
- August 2024
- July 2024
- June 2024
- May 2024
- April 2024
- March 2024
- February 2024
- January 2024
- December 2023
- November 2023
- October 2023
- September 2023
- August 2023
- July 2023
- June 2023
- May 2023
- April 2023
- March 2023
- February 2023
- January 2023
- December 2022
- November 2022
- October 2022
- September 2022
- August 2022
- July 2022
- June 2022
- May 2022
- April 2022


2 Comments
Unisciti alla rivoluzione Betano. Ottieni fino a €500 di bonus più giri gratis e gioca ai giochi più emozionanti online. Scommesse sportive, live casino https://betanogame.org/it/bonuses/ e jackpot infiniti – è qui che appartieni.
Mostbet: o cassino online com o melhor pacote de boas-vindas do ano – https://mostbetpt.pro/ , Mostbet – o melhor cassino online com 150% de bГґnus + 200 giros de graГ§a .