ಬೆಂಗಳೂರು,ಜು.6- ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ ಗ್ರಾಹಕನಿಗೆ
ಬಾರ್ ಕ್ಯಾಶಿಯರ್ ಹಾಗೂ ಸಪ್ಲೇಯರ್ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ದುರ್ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೀತಿಧಾಮ ಬಾರ್‌ನಲ್ಲಿ ಘಟನೆ ನಡೆದಿದೆ.
ಹಲ್ಲೆಗೊಳಗಾದ ಕೊಪ್ಪಗೇಟ್ ನಿವಾಸಿ ಬಾಬು(30) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾರ್ ಕ್ಯಾಶಿಯರ್ ಸಮಂತ್ ಗೌಡ, ಸಪ್ಲೇಯರ್ ಜೀವನ್ ಗೌಡ ಹಲ್ಲೆ ನಡೆಸಿದ್ದಾರೆ.
ಪ್ರೀತಿಧಾಮ ಬಾರ್ ಗೆ ನಿನ್ನೆ ರಾತ್ರಿ 8ರ ವೇಳೆ ಬಾಬು ಹೋಗಿದ್ದಾಗ ಮದ್ಯದ ಜತೆಗೆ ನೀಡಿದ್ದ ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದು, ಕೋಪಗೊಂಡ ಬಾಬು ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಸಪ್ಲೇಯರ್ ಬಳಿ ಪ್ರಶ್ನಿಸಿದಾಗ ಸಿಟ್ಟಾದ ಸಪ್ಲೇಯರ್ ಜೀವನ್ ಏಕಾಏಕಿ ಅಲ್ಲೇ ಇದ್ದ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದು, ಬಾಬು ತಲೆ ತೂತಾಗಿದೆ.
ಇತ್ತ ಜೀವನ್‌ಗೆ ಬಾರ್ ಕ್ಯಾಶಿಯರ್ ಸಮಂತ್ ಗೌಡ ಸಾಥ್ ನೀಡಿದ್ದು ಇಬ್ಬರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ,ಈ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಜಿಗಣಿ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Previous Articleರಾಜ್ಯ ಸರ್ಕಾರದ ವಿರುದ್ಧ ಬಂಡಾಯಕ್ಕೆ ಸಜ್ಜಾದ ನೌಕರರು.
Next Article ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕು.