ಬೆಂಗಳೂರು: ರಾಜ್ಯದ 3,457 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಸಮೀಪದ ಶಾಲೆಗಳಲ್ಲಿ ವಿಲೀನ ಹಾಗೂ 3,339 ಶಾಲೆ– ಕಾಲೇಜುಗಳನ್ನು ವಿಲೀನಗೊಳಿಸಿ ಕ್ಲಸ್ಟರ್ ಪ್ರೌಢಶಾಲೆ ಅಥವಾ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಬೇಕು ಎಂದು ಆಡಳಿತ ಸುಧಾರಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು
ಹೀಗೆ ಮಾಡಿದಲ್ಲಿ ಒಟ್ಟು 6,796 ಶಾಲೆ– ಕಾಲೇಜುಗಳು ವಿಲೀನಗೊಳ್ಳಲಿವೆ. 3,457 ಶಾಲೆಗಳನ್ನು 1,667 ಶಾಲೆ ಗಳಲ್ಲಿ ವಿಲೀನಗೊಳಿಸುವಂತೆ ಸಲಹೆ ನೀಡಲಾಗಿದೆ. ಹೀಗಾದಲ್ಲಿ, 3,457 ಶಾಲೆಗಳು ಅಸ್ತಿತ್ವವನ್ನೇ ಕಳೆದುಕೊಳ್ಳಲಿವೆ.
3,339 ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳನ್ನು ಸಮೀಪದ 1,135 ಶಾಲೆ–ಕಾಲೇಜುಗಳಲ್ಲಿ ವಿಲೀನಗೊಳಿಸಬೇಕು. ಬಳಿಕ, ಅವುಗಳನ್ನು ಸಮೂಹ ಪ್ರೌಢಶಾಲೆ ಅಥವಾ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಬೇಕು.
* ಸರಿಯಾದ ಸವಲತ್ತುಗಳನ್ನು ನೀಡದೆ ಮೊದಲು ಸರಕಾರೀ ಶಾಲೆಗಳನ್ನು ಹಾಳುಗೆಡವಬೇಕು.
* ಸರಕಾರೀ ಶಾಲೆಗಳಿಗೆ ಬರುವ ಬಡ ಮಕ್ಕಳಿಗಿರುವ ಸವಲತ್ತುಗಳನ್ನು ಕಡಿತಗೊಳಿಸಬೇಕು.
* ಆ ಮೇಲೆ ಶಾಲೆಗಳನ್ನು ಮುಚ್ಚಬೇಕು.
* ಮಠಗಳಿಗೆ, ಜಾತಿ ಮತ್ತು ಕೋಮು ಸಂಘಟನೆಗಳಿಗೆ ಹೆಚ್ಚು ಹೆಚ್ಚು ಅನುದಾನ ನೀಡಿ, ಶಾಲೆಗಳನ್ನು ಅಲಕ್ಷಿಸಬೇಕು.
ಶಾಲೆಗೆ ಹೋಗಿ ಮಕ್ಕಳು ಓದಿದರೆ ತಾನೇ ಸಮಸ್ಯೆ!
ಮುಚ್ಚುತ್ತಿರುವ ಶಾಲೆಗಳ ಅಧ್ಯಾಪಕರ ಕತೆ ಏನೋ ತಿಳಿಯದು.
ನಮ್ಮಲ್ಲಿ ದುಡ್ಡಿಲ್ಲದೇ ಇರುವುದು ಶಾಲೆಗಳಿಗೆ ಮಾತ್ರ.
ಜೈ ಕರ್ನಾಟಕ!
– ಪುರುಷೋತ್ತಮ ಬಿಳಿಮಲೆ.
Previous Articleಪಾಕ್ ಮಾಜಿ ಅಧ್ಯಕ್ಷ ಮುಷರಫ್ ಇನ್ನಿಲ್ಲ
Next Article ಭಯೋತ್ಪಾದನಾ ಕೃತ್ಯದ ಸಂಚು ಬಯಲು
1 Comment
озвучивание помещений озвучивание помещений .