ಪಾಕಿಸ್ತಾನದ ಕರಾಚಿಯ ರೆಸ್ಟೋರೆಂಟ್ ಒಂದು ಆಲಿಯಾ ಭಟ್ ಅಭಿನಯದ ಸಿನಿಮಾವನ್ನು ತನ್ನ ಜಾಹೀರಾತಿಗೆ ಬಳಸಿಕೊಂಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕರಾಚಿಯ ಸ್ವಿಂಗ್ ಹೆಸರಿನ ಜನಪ್ರಿಯ ರೆಸ್ಟೊರೆಂಟ್ ‘ಮೆನ್ಸ್ ಮಂಡೇ” ಸ್ಪೆಷಲ್ ಆಫರ್ ಜಾಹೀರಾತಿನಲ್ಲಿ ಆಲಿಯಾ ಭಟ್ ಅಭಿನಯದ”ಗಂಗೂಬಾಯಿ ಕಥೇವಾಡಿ” ಚಲನಚಿತ್ರದ ಜನಪ್ರಿಯ ದೃಶ್ಯವನ್ನು ಬಳಸಿಕೊಂಡಿದೆ. ಇದರಲ್ಲಿ ವೇಶ್ಯೆಯಾದವಳು ಪುರುಷರನ್ನು ಕರೆಯುವ ದೃಶ್ಯವಿದ್ದು ಇದನ್ನೇ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ. ರೆಸ್ಟೋರೆಂಟ್ ನ ಈ ಕ್ರಮ ಟೀಕೆಗೆ ಗುರಿತಾಗಿದೆ. ತನ್ನ ಸಮುದಾಯದ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಲೈಂಗಿಕ ಕಾರ್ಯಕರ್ತೆಯ ನಿಜ ಜೀವನದ ಕಥೆಯನ್ನು ಆಧರಿಸಿದ ಚಲನಚಿತ್ರದ ದೃಶ್ಯವನ್ನು ಜಾಹೀರಾತಿನಲ್ಲಿ ಬಳಸಿಕೊಂಡಿದ್ದಕ್ಕಾಗಿ ರೆಸ್ಟೋರೆಂಟ್ ಮಾಲೀಕರು ಸಾಮಾಜಿಕ ತಾಣ ಬಳಕೆದಾರರಿಂದ ಟೀಕೆಗೆ ತುತ್ತಾಗಿದ್ದಾರೆ.
ರೆಸ್ಟೋರೆಂಟ್ ಬಳಸಿಕೊಂಡ ಕ್ಲಿಪ್ ನಲ್ಲಿ ಆಲಿಯಾ ಭಟ್ “ಆಜಾ ನಾ ರಾಜಾ.. ಇನ್ನೂ ಏನಕ್ಕಾಗಿ ಕಾಯುತ್ತಿರುವೆ?” ಎನ್ನುವ ದೃಶ್ಯವಿದೆ. ಇದಕ್ಕೆ ತಕ್ಕಂತೆ “ಸ್ವಿಂಗ್ಸ್ ಎಲ್ಲಾ ರಾಜರನ್ನು ಅಲ್ಲಿಗೆ ಕರೆಯುತ್ತಿದೆ. ಅಜಾವೋ ಮತ್ತು ಸ್ವಿಂಗ್ಸ್‌ನಲ್ಲಿ ಮೆನ್ಸ್ ಮಂಡೇಯಂದು ಶೇಕಡಾ 25 ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಿ!” ಎಂದು ರೆಸ್ಟೊರೆಂಟ್‌ನ ಪೋಸ್ಟ್ ಹೇಳುತ್ತದೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾದ ಎಡಿಟ್ ಮಾಡಿದ ಕ್ಲಿಪ್ ಅನ್ನು ಅದರ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಪ್ರಚಾರದ ಗಿಮಿಕ್ ಆಗಿ ಮಾರ್ಕೆಟಿಂಗ್ ತಂತ್ರವಾಗಿ ಬಳಸಿದ್ದ ರೆಸ್ಟೋರೆಂಟ್ ಬಗ್ಗೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.