ಬೆಂಗಳೂರು – ವಿಧಾನಸಭೆ Electionಗೆ ಮುನ್ನ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳು ಆ ಪಕ್ಷವನ್ನು ಅಧಿಕಾರಕ್ಕೆ ತಂದಿವೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಐದು ಗ್ಯಾರಂಟಿಗಳು ಜಾರಿ ಸಂಬಂಧ ಆದೇಶ ಹೊರಬಿದ್ದಿದೆ.
ಆದರೆ ಈ ಯೋಜನೆಗಳನ್ನು ಯಾವ ರೀತಿ ಜಾರಿಗೊಳಿಸಬೇಕು ಯಾರಿಗೆ ಅವುಗಳು ಅನ್ವಯವಾಗಲಿವೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಬರಬೇಕಾಗಿದೆ ಈ ನಡುವೆ ರಾಜ್ಯದ ಬಹುತೇಕ ಜನರು ಈ ಯೋಜನೆಗಳು ತಮಗೂ ಅನ್ವಯ ಆಗಲಿವೆ ಎಂದು ಭಾವಿಸಿ ಅದಕ್ಕೆ ಸಂಬಂಧಪಟ್ಟಂತೆ ಕೆಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ ಅನೇಕರು ಬಿಪಿಎಲ್ ಕಾರ್ಡ್ ಗಾಗಿ ಮುಗಿ ಬಿದ್ದಿದ್ದರೆ ಮತ್ತೆ ಕೆಲವರು ತಮ್ಮ ಕಾರ್ಡ್ ಗಳನ್ನು ಆಧಾರ್ ಕಾರ್ಡ್ ಗೆ ಜೋಡಣೆ ಮಾಡುತ್ತಿದ್ದಾರೆ.
ಇದೆಲ್ಲದರ ನಡುವೆ ರಾಜ್ಯದ ಪ್ರತಿಯೊಬ್ಬ ವಿದ್ಯುತ್ ಗ್ರಾಹಕನಿಗೂ 200 ಯೂನಿಟ್ ಉಚಿತ ವಿದ್ಯುತ್ ಎಂಬ ಸರ್ಕಾರದ ನಿರ್ಧಾರ ಹಲವು ಪರಿಣಾಮಗಳನ್ನು ಬೀರಿದೆ.
ಒಂದು ಅಂದಾಜಿನ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಗ್ರಾಹಕರು ಮಾಸಿಕ 200 ಯೂನಿಟ್ ಗಳಿಗಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಹೀಗಾಗಿ ಇವರು ಯಾವುದೇ ರೀತಿಯ ವಿದ್ಯುತ್ ಬಳಕೆ ಶುಲ್ಕ ಪಾವತಿಸಬೇಕಾಗಿಲ್ಲ.
ಬೆಸ್ಕಾಂ ವ್ಯಾಪ್ತಿಯಲ್ಲಿ 86 ಲಕ್ಷ, ಚೆಸ್ಕಾಂನಡಿ 20 ಲಕ್ಷ, ಮೆಸ್ಕಾಂ ವ್ಯಾಪ್ತಿಯಲ್ಲಿ 15 ಲಕ್ಷ, ಹೆಸ್ಕಾಂ ವ್ಯಾಪ್ತಿಯಲ್ಲಿ 28 ಲಕ್ಷ ಹಾಗೂ ಜೆಸ್ಕಾ ಅಡಿ 19 ಲಕ್ಷ ಸಂಪರ್ಕಗಳು ಸೇರಿ ಒಟ್ಟಾರೆ ಎಲ್ಲಾ ನಿಗಮಗಳ ಅಡಿ 1.70 ಕೋಟಿ ವಿದ್ಯುತ್ ಸಂಪರ್ಕಗಳಿದ್ದು, ಈ ಪೈಕಿ 1.20 ಕೋಟಿಯಷ್ಟು ಬಳಕೆದಾರರು 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆದಾರರಾಗಿದ್ದಾರೆ.
ಇವರೆಲ್ಲ ಇದೀಗ ಎಲೆಕ್ಟ್ರಿಕ್ ಸ್ಟೌವ್ ಗಳನ್ನು ಖರೀದಿಸ ತೊಡಗಿದ್ದಾರೆ ಹೀಗಾಗಿ ಮಾರುಕಟ್ಟೆಯಲ್ಲಿ
ಎಲೆಕ್ಟ್ರಿಕ್ ಸ್ಟೌವ್ ಗಳಿಗೆ ಏಕಾಏಕಿ ಭಾರಿ ಬೇಡಿಕೆ ಉಂಟಾಗಿದೆ. ಈ ಸ್ಟೌವ್ ಗಳ ಬೆಲೆ ಕೂಡ ದುಬಾರಿಯಾಗತೊಡಗಿದೆ.
ಸದ್ಯ ಅಡುಗೆ ಅನಿಲ ಸಿಲಿಂಡರ್ ದರ ದುಬಾರಿಯಾಗಿದೆ ಹೀಗಾಗಿ ಗ್ರಾಮೀಣ ಪ್ರದೇಶದ ಬಹುತೇಕರು ಅಡುಗೆ ಅನಿಲ ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಇವರೆಲ್ಲ ಇದೀಗ ಎಲೆಕ್ಟ್ರಿಕ್ ಸ್ಟೌವ್ ಖರೀದಿಸತೊಗಿದ್ದಾರೆ.
ಸರ್ಕಾರ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿರುವ ಹಿನ್ನೆಲೆಯಲ್ಲಿ ಅಡುಗೆ ಮಾಡಲು ಅನಿಲ ಸಿಲೆಂಡರ್ ಗಿಂತ ಎಲೆಕ್ಟ್ರಿಕ್ ಸ್ಟೌವ್ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಇದಕ್ಕಾಗಿ ಅವುಗಳನ್ನು ಖರೀದಿಸಲು ಮುಂದಾಗಿದ್ದಾರೆ 200 ಯೂನಿಟ್ ವರೆಗೆ ವಿದ್ಯುತ್ ಶುಲ್ಕ ಇಲ್ಲದಿರುವ ಪರಿಣಾಮ ಅಡುಗೆ ಅನಿಲದ ಬದಲಿಗೆ ಎಲೆಕ್ಟ್ರಿಕ್ ಸ್ಟೌವ್ ಉತ್ತಮ ಎಂದು ಅವುಗಳನ್ನು ಖರೀದಿಸುತ್ತಿದ್ದಾರೆ.
Previous ArticleCMಗೆ ಹಣಕಾಸು DCMಗೆ Bengaluru City ಅಭಿವೃದ್ಧಿ
Next Article 30 crores ಮೌಲ್ಯದ ಕೊಕೇನ್ ವಶ