ಬೆಂಗಳೂರು – ರಾಜ್ಯದ ವಿದ್ಯುತ್ ಪ್ರಸರಣ ನಿಗಮಗಳು ಮತ್ತು ಜನಸಾಮಾನ್ಯರ ನಡುವೆ ಇದೀಗ ಹಗ್ಗ ಜಗ್ಗಾಟ ಆರಂಭವಾಗಿದೆ.
ಏಪ್ರಿಲ್ ತಿಂಗಳಲ್ಲಿ ಎಲ್ಲಾ ವಿದ್ಯುತ್ ವಿತರಣಾ ಸಂಸ್ಥೆಗಳು ತನ್ನ ಗ್ರಾಹಕರಿಗೆ ವಿದ್ಯುತ್ ಶುಲ್ಕ ಪಾವತಿಸುವಂತೆ ಬಿಲ್ ವಿತರಿಸಿದೆ ಆದರೆ ಬಹುತೇಕರು ಈ ಬಿಲ್ ಗಳನ್ನು ಪಾವತಿಸುವ ಗೋಜಿಗೆ ಹೋಗಿಲ್ಲ.
ಅದರಲ್ಲೂ ಗ್ರಾಮೀಣ ಪ್ರದೇಶದ ಜನತೆ ತಾವು ಬಳಸಿರುವ ವಿದ್ಯುತ್ 200 ಯೂನಿಟ್ ದಾಟಿಲ್ಲ ಹೀಗಾಗಿ ವಿದ್ಯುತ್ ಶುಲ್ಕ ಪಾವತಿಸುವುದಿಲ್ಲ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ 200 ಯೂನಿಟ್ ವರೆಗೆ ವಿದ್ಯುತ್ ಬಳಕೆ ಉಚಿತವಾಗಿರಲಿದೆ ಎಂದು ಹೇಳಿದೆ ಹೀಗಾಗಿ ನಾವುಗಳು ಪಾವತಿಸುವುದಿಲ್ಲ ಎಂದು ತಕರಾರು ತೆಗೆದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರ ಮನೆ ಬಾಗಿಲಲ್ಲಿ ವಿದ್ಯುತ್ ಶುಲ್ಕ ಪಡೆದು ರಸೀದಿ ನೀಡುವ ವ್ಯವಸ್ಥೆ ಇದೆ ಹೀಗಾಗಿ ಬೆಸ್ಕಾಂ ಸಿಬ್ಬಂದಿ ಜನಸಾಮಾನ್ಯರ ಮನೆ ಬಾಗಿಲಿಗೆ ಹೋಗಿ ಶುಲ್ಕ ಪಾವತಿಸುವಂತೆ ಮಾನವಿ ಮಾಡಿದರೆ ಅದಕ್ಕೆ ಯಾರೂ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯುತ್ ಗ್ರಾಹಕರನ್ನು ಹೊಂದಿರುವ ಬೆಸ್ಕಾಂ ತೀವ್ರ ನಷ್ಟ ಅನುಭವಿಸುವಂತಾಗಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಬೆಸ್ಕಾಂ ಅಧಿಕಾರಿಗಳು ಸೂಚನೆ ನೀಡಿದ್ದು, ಉಚಿತ ವಿದ್ಯುತ್ ನೀಡುವುದರ ಬಗ್ಗೆ ನಮಗೆ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ಗ್ರಾಹಕರು ವಿದ್ಯುತ್ ಬಿಲ್ ಅನ್ನು ಕಡ್ಡಾಯವಾಗಿ ಪಾವತಿಸಬೇಕು. ಇಲ್ಲವಾದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ.
ಉಚಿತ ವಿದ್ಯುತ್ ನೀಡುವ ಕುರಿತಂತೆ ಒಂದು ವೇಳೆ ಸರ್ಕಾರದಿಂದ ಆದೇಶ ಬಂದಿದ್ದರೂ ಅದು ಮುಂದಿನ ಬಿಲ್ ಗೆ ಅನ್ವಯವಾಗುತ್ತದೆ. ಬಾಕಿ ಬಿಲ್‌ಗೆ ಆ ಆದೇಶ ಅನ್ವಯಿಸುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಜನರು ಈಗಾಗಲೇ ಬಳಕೆ ಮಾಡಿರುವ ವಿದ್ಯುತ್‌ಗಳ ಬಿಲ್ ಅನ್ನು ಕಟ್ಟಬೇಕು ಎಂದು ಗ್ರಾಹಕರಿಗೆ ಬೆಸ್ಕಾಂ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.
ಆದರೂ ಇದನ್ನು ಕೇಳುವ ಸ್ಥಿತಿಯಲ್ಲಿ ಗ್ರಾಹಕರು ಇಲ್ಲ ಹೀಗಾಗಿ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುವತ್ತ ಸಾಗಿದೆ.
Previous ArticleBJPಗೆ ಅನೇಕ ಕಡೆ deposit ಕೂಡ ಬರಲಿಲ್ಲ
Next Article ಉನ್ನತ ಹುದ್ದೆಗಾಗಿ ಹಿರಿಯ ಅಧಿಕಾರಿಗಳ ಲಾಬಿ


2 Comments
Sentez-vous invincible chez Betano https://betanogame.org/fr/mobile-app/. Les nouveaux utilisateurs obtiennent 500 € de bonus de bienvenue et des tours gratuits instantanément. Pariez sur les sports, faites tourner les rouleaux ou rejoignez la roulette en direct – la victoire est plus proche que jamais.
Registre-se no Mostbet e comece com saldo muito maior agora mesmo – Mostbet Oficial , No Mostbet o seu jogo comeГ§a com um reforГ§o especial e irresistГvel .