ಬೆಂಗಳೂರು, ಸೆ.25- ಕೆಲ ದಿನಗಳ ಹಿಂದೆ ದಿನಗಳ ಹಿಂದೆ ನಗರ ಸೇರಿದಂತೆ ರಾಜ್ಯದ ಹಲವೆಡೆ ರಾಷ್ಟ್ರೀಯ ತನಿಖಾ ದಳ(ಎನ್ಐಎ)ಅಧಿಕಾರಿಗಳು ಪಿಎಫ್ಐ ಕಚೇರಿ ಮುಖಂಡರ ಮನೆ ಮೇಲೆ ದಾಳಿ ನಡೆದ ವೇಳೆ ಜಪ್ತಿ ಮಾಡಿದ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗಿದೆ.
ದಾಳಿಯ ವೇಳೆ ಎನ್ಐಎ ಅಧಿಕಾರಿಗಳಿಗೆ
ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಉಗ್ರ ಚಟುವಟಿಕೆಗೆ ಯುವಕರನ್ನು ಪ್ರಚೋದಿಸುತ್ತಿದ್ದ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಪಿಎಫ್ಐ ಮುಖಂಡರ ಮೊಬೈಲ್ಗಳು, ಲ್ಯಾಪ್ಟಾಪ್, ಎಲೆಕ್ಟ್ರಾನಿಕ್ ಡಿವೈಸ್ಗಳು, ಸಾರ್ವಕರ್ ಪುಸ್ತಕ, ಹಿಂದೂ ವಿರೋಧಿ ಬರವಣಿಗೆಗಳು, 40 ಲಕ್ಷ ರೂ ನಗದು ಪತ್ತೆಯಾಗಿದೆ.
ಬ್ಯಾಂಕ್ ಖಾತೆ ಜಪ್ತಿ:
ನಗರದ ಕೆ.ಜೆ.ಹಳ್ಳಿ ಗಲಾಟೆ ಸಂಬಂಧ 15 ಮಂದಿಯನ್ನು ಬಂಧಿಸಿದ್ದ ಪೊಲೀಸರಿಗೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ. ವಿಚಾರಣೆ ವೇಳೆ ಎಲ್ಲಾ ಆರೋಪಿಗಳಿಗೂ ಪಿಎಫ್ಐ ಜೊತೆ ಲಿಂಕ್ ಇರೋದು ತಿಳಿದು ಬಂದಿದೆ. ಸಮಾಜಘಾತುಕ ಕೃತ್ಯಗಳನ್ನು ಎಸಗಲು ಪ್ರಚೋದನೆ ನೀಡುತ್ತಿದ್ದ ವಿಚಾರ ಕೂಡ ಬೆಳಕಿಗೆ ಬಂದಿದೆ. ಪಿಎಫ್ಐ ಮುಖಂಡರ ಮೇಲೆ ಎನ್ಐಎ ದಾಳಿಯಲ್ಲಿ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದೆ. ಸಾರ್ವಕರ್ ಪುಸ್ತಕ ಕೂಡ ಲಭ್ಯವಾಗಿದ್ದು ಹಲವು ಪುಸ್ತಕಗಳನ್ನು ಎನ್ಐಎ ಜಪ್ತಿ ಮಾಡಿದೆ. ಹಲವು ಪೇಪರ್ ಕಟಿಂಗ್ಸ್ ಕೂಡ ಎನ್ಐಎಗೆ ಲಭ್ಯವಾಗಿದೆ. ಇನ್ನು ಪಿಎಫ್ಐ ಮುಖಂಡನೊಬ್ಬನ ಮನೆಯಲ್ಲಿ 40 ಲಕ್ಷ ಹಣ ಪತ್ತೆಯಾಗಿದೆ. 40 ಲಕ್ಷ ಹಣ ಹಾಗೂ ಬ್ಯಾಂಕ್ ಖಾತೆಯ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಪಾಕಿಸ್ತಾನ, ಇರಾನ್ನ ಕೆಲ ವ್ಯಕ್ತಿಗಳ ಜೊತೆಗೂ ಸಂಪರ್ಕ ಇರೋದು ಗೊತ್ತಾಗಿದ್ದು ಚುನಾವಣೆಗೂ ಮುನ್ನ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ವಿಚಾರ ಬಯಲಾಗಿದೆ.
ದಾಳಿಗೂ ಮುನ್ನ ಸಭೆ:
ಪಿಎಫ್ಐ ಮುಖಂಡರನ್ನು ಬಂಧಿಸುವ ಮೊದಲು ನಗರ ಪೊಲೀಸರು ಹಾಗೂ ಎನ್ಐಎ ತಂಡ ಸಾಕಷ್ಟು ತಯಾರಿ ಮಾಡಿಕೊಂಡಿತ್ತು.ನಗರ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಎನ್ಐಎ ಮತ್ತು ಕೇಂದ್ರ ಐಬಿ ಅಧಿಕಾರಿಗಳು ಸೆ. 21ರಂದು ಸಭೆ ನಡೆಸಿ ಆರೋಪಿಗಳ ಅಂಚೆ ವಿಳಾಸ ಸಹಿತ 19 ಮಂದಿಯ ಪಟ್ಟಿ ರೆಡಿ ಮಾಡಿದ್ದರು. ಏಕಕಾಲದಲ್ಲೇ ಕಾರ್ಯಾಚರಣೆಗೆ ಇಳಿಯಲು ಪ್ಲಾನ್ ಮಾಡಲಾಗಿತ್ತು. ಅದರಂತೆ 19 ಜನರ ತಂಡವನ್ನು ರಚಿಸಲಾಗಿತ್ತು. ಸೆಪ್ಟೆಂಬರ್ 21ರ ಸಂಜೆಯೇ ಪ್ರಕರಣ ದಾಖಲಾಗಿದ್ದು ಇದುವರೆಗೆ 14 ಜನರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ಪೋನ್ ಪರಿಶೀಲನೆ ವೇಳೆ ಕೇರಳ ಲಿಂಕ್ ಇರೋದು ಪತ್ತೆಯಾಗಿದೆ. ಆರೋಪಿಗಳ ಫೋನ್ನಲ್ಲಿ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ತನಿಖೆ ವೇಳೆ ಪಿಎಫ್ಐಗೂ, ಕೇರಳಕ್ಕೂ ಲಿಂಕ್ ಇರುವುದು ಪತ್ತೆಯಾಗಿದೆ. ಸದ್ಯ ಕೇರಳ ಆಯಾಮದಲ್ಲಿ ಎನ್ಐಎ ತನಿಖೆ ಶುರು ಮಾಡಿದೆ. ಕೇರಳ ಕಂಟ್ರೋಲ್ ಮಾಡ್ತಿದ್ದವರ ಪತ್ತೆಗೆ ಎನ್ಐಎ ಮುಂದಾಗಿದೆ.
51ಮಂದಿ ವಿರುದ್ಧ ಕೇಸ್ :
ಇನ್ನು ಪಿಎಫ್ಐ ಹಾಗೂ ಎಸ್ಡಿಪಿಐ ಮೇಲೆ ಎನ್ಐಎ ದಾಳಿ ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ 51 ಜನರ ಮೇಲೆ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿಯ ಕಮರಿಪೇಟೆ ಠಾಣೆಯಲ್ಲಿ ಸೆಕ್ಷನ್ 143, 145, 341, 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೌಲ್ಪೇಟೆ ಬಳಿ ಅನುಮತಿ ಪಡೆಯದೇ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿತ್ತು. ಒಟ್ಟಿನಲ್ಲಿ ಸಂಘಟನೆಗಳ ಹೆಸರಲ್ಲಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಂಚು ರೂಪಿಸಿರುವ ಇಂಥಾ ಸಂಘಟನೆಗಳ ಮೇಲೆ ಸರ್ಕಾರ ನಿಗಾ ವಹಿಸಬೇಕಿದೆ. ಸದ್ಯ ಎನ್ಐಎ ತನಿಖೆ ನಡೆಯುತ್ತಿದ್ದು ಮತ್ತಷ್ಟು ಮಾಹಿತಿಗಳು ಹೊರಬೀಳಬೇಕಿದೆ.
Previous Articleಕರಾಟೆ ಕ್ಲಾಸ್ ನಲ್ಲಿ Terror ತರಬೇತಿ
Next Article ಮಕ್ಕಳ ಅಶ್ಲೀಲ ವಿಡಿಯೋ: CBI ದಾಳಿ