Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » PFI ಬಗ್ಗೆ ಹೊರಬಂದ ಇನ್ನಷ್ಟು ಮಾಹಿತಿ
    ಅಪರಾಧ

    PFI ಬಗ್ಗೆ ಹೊರಬಂದ ಇನ್ನಷ್ಟು ಮಾಹಿತಿ

    vartha chakraBy vartha chakraSeptember 25, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಸೆ.25- ಕೆಲ ದಿನಗಳ ಹಿಂದೆ ದಿನಗಳ ಹಿಂದೆ ನಗರ ಸೇರಿದಂತೆ ರಾಜ್ಯದ ಹಲವೆಡೆ ರಾಷ್ಟ್ರೀಯ ತನಿಖಾ ದಳ(ಎನ್​ಐಎ)ಅಧಿಕಾರಿಗಳು ಪಿಎಫ್​ಐ ಕಚೇರಿ ಮುಖಂಡರ ಮನೆ ಮೇಲೆ ದಾಳಿ ನಡೆದ ವೇಳೆ ಜಪ್ತಿ ಮಾಡಿದ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗಿದೆ.
    ದಾಳಿಯ ವೇಳೆ ಎನ್​ಐಎ ಅಧಿಕಾರಿಗಳಿಗೆ
    ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಉಗ್ರ ಚಟುವಟಿಕೆಗೆ ಯುವಕರನ್ನು ಪ್ರಚೋದಿಸುತ್ತಿದ್ದ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
    ಪಿಎಫ್​ಐ ಮುಖಂಡರ ಮೊಬೈಲ್​ಗಳು, ಲ್ಯಾಪ್​ಟಾಪ್, ಎಲೆಕ್ಟ್ರಾನಿಕ್ ಡಿವೈಸ್​​ಗಳು, ಸಾರ್ವಕರ್​ ಪುಸ್ತಕ, ಹಿಂದೂ ವಿರೋಧಿ ಬರವಣಿಗೆಗಳು, 40 ಲಕ್ಷ ರೂ‌ ನಗದು ಪತ್ತೆಯಾಗಿದೆ.
    ಬ್ಯಾಂಕ್​ ಖಾತೆ ಜಪ್ತಿ:
    ನಗರದ ಕೆ.ಜೆ.ಹಳ್ಳಿ ಗಲಾಟೆ ಸಂಬಂಧ 15 ಮಂದಿಯನ್ನು ಬಂಧಿಸಿದ್ದ ಪೊಲೀಸರಿಗೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ. ವಿಚಾರಣೆ ವೇಳೆ ಎಲ್ಲಾ ಆರೋಪಿಗಳಿಗೂ ಪಿಎಫ್​ಐ ಜೊತೆ ಲಿಂಕ್ ಇರೋದು ತಿಳಿದು ಬಂದಿದೆ. ಸಮಾಜಘಾತುಕ ಕೃತ್ಯಗಳನ್ನು ಎಸಗಲು ಪ್ರಚೋದನೆ ನೀಡುತ್ತಿದ್ದ ವಿಚಾರ ಕೂಡ ಬೆಳಕಿಗೆ ಬಂದಿದೆ. ಪಿಎಫ್​ಐ ಮುಖಂಡರ ಮೇಲೆ ಎನ್​ಐಎ ದಾಳಿಯಲ್ಲಿ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದೆ. ಸಾರ್ವಕರ್ ಪುಸ್ತಕ ಕೂಡ ಲಭ್ಯವಾಗಿದ್ದು ಹಲವು ಪುಸ್ತಕಗಳನ್ನು ಎನ್​ಐಎ ಜಪ್ತಿ ಮಾಡಿದೆ. ಹಲವು ಪೇಪರ್ ಕಟಿಂಗ್ಸ್ ಕೂಡ ಎನ್​ಐಎಗೆ ಲಭ್ಯವಾಗಿದೆ. ಇನ್ನು ಪಿಎಫ್ಐ ಮುಖಂಡನೊಬ್ಬನ ಮನೆಯಲ್ಲಿ 40 ಲಕ್ಷ ಹಣ ಪತ್ತೆಯಾಗಿದೆ. 40 ಲಕ್ಷ ಹಣ ಹಾಗೂ ಬ್ಯಾಂಕ್ ಖಾತೆಯ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಪಾಕಿಸ್ತಾನ, ಇರಾನ್​​ನ ಕೆಲ ವ್ಯಕ್ತಿಗಳ ಜೊತೆಗೂ ಸಂಪರ್ಕ ಇರೋದು ಗೊತ್ತಾಗಿದ್ದು ಚುನಾವಣೆಗೂ ಮುನ್ನ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ವಿಚಾರ ಬಯಲಾಗಿದೆ.
    ದಾಳಿಗೂ ಮುನ್ನ ಸಭೆ:
    ಪಿಎಫ್​ಐ ಮುಖಂಡರನ್ನು ಬಂಧಿಸುವ ಮೊದಲು ನಗರ ಪೊಲೀಸರು ಹಾಗೂ ಎನ್​ಐಎ ತಂಡ ಸಾಕಷ್ಟು ತಯಾರಿ ಮಾಡಿಕೊಂಡಿತ್ತು.ನಗರ​ ಆಯುಕ್ತ ಪ್ರತಾಪ್​ ರೆಡ್ಡಿ ಹಾಗೂ ಎನ್ಐಎ ಮತ್ತು ಕೇಂದ್ರ ಐಬಿ ಅಧಿಕಾರಿಗಳು ಸೆ. 21ರಂದು ಸಭೆ ನಡೆಸಿ ಆರೋಪಿಗಳ ಅಂಚೆ ವಿಳಾಸ​ ಸಹಿತ 19 ಮಂದಿಯ ಪಟ್ಟಿ ರೆಡಿ ಮಾಡಿದ್ದರು. ಏಕಕಾಲದಲ್ಲೇ ಕಾರ್ಯಾಚರಣೆಗೆ ಇಳಿಯಲು ಪ್ಲಾನ್ ಮಾಡಲಾಗಿತ್ತು. ಅದರಂತೆ 19 ಜನರ ತಂಡವನ್ನು ರಚಿಸಲಾಗಿತ್ತು. ಸೆಪ್ಟೆಂಬರ್ 21ರ ಸಂಜೆಯೇ ಪ್ರಕರಣ ದಾಖಲಾಗಿದ್ದು ಇದುವರೆಗೆ 14 ಜನರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ಪೋನ್ ಪರಿಶೀಲನೆ ವೇಳೆ ಕೇರಳ ಲಿಂಕ್ ಇರೋದು ಪತ್ತೆಯಾಗಿದೆ. ಆರೋಪಿಗಳ ಫೋನ್​​ನಲ್ಲಿ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ತನಿಖೆ ವೇಳೆ ಪಿಎಫ್​​ಐಗೂ, ಕೇರಳಕ್ಕೂ ಲಿಂಕ್ ಇರುವುದು ಪತ್ತೆಯಾಗಿದೆ. ಸದ್ಯ ಕೇರಳ ಆಯಾಮದಲ್ಲಿ ಎನ್​ಐಎ ತನಿಖೆ ಶುರು ಮಾಡಿದೆ. ಕೇರಳ ಕಂಟ್ರೋಲ್ ಮಾಡ್ತಿದ್ದವರ ಪತ್ತೆಗೆ ಎನ್​ಐಎ ಮುಂದಾಗಿದೆ.
    51ಮಂದಿ ವಿರುದ್ಧ ಕೇಸ್ :
    ಇನ್ನು ಪಿಎಫ್​ಐ ಹಾಗೂ ಎಸ್​ಡಿಪಿಐ ಮೇಲೆ ಎನ್​ಐಎ ದಾಳಿ ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ 51 ಜನರ ಮೇಲೆ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿಯ ಕಮರಿಪೇಟೆ ಠಾಣೆಯಲ್ಲಿ ಸೆಕ್ಷನ್ 143, 145, 341, 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೌಲ್​​ಪೇಟೆ ಬಳಿ ಅನುಮತಿ ಪಡೆಯದೇ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿತ್ತು. ಒಟ್ಟಿನಲ್ಲಿ ಸಂಘಟನೆಗಳ ಹೆಸರಲ್ಲಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಂಚು ರೂಪಿಸಿರುವ ಇಂಥಾ ಸಂಘಟನೆಗಳ ಮೇಲೆ ಸರ್ಕಾರ ನಿಗಾ ವಹಿಸಬೇಕಿದೆ. ಸದ್ಯ ಎನ್​ಐಎ ತನಿಖೆ ನಡೆಯುತ್ತಿದ್ದು ಮತ್ತಷ್ಟು ಮಾಹಿತಿಗಳು ಹೊರಬೀಳಬೇಕಿದೆ.

    Verbattle
    Verbattle
    Verbattle
    PF PFI ಉಗ್ರ ಹುಬ್ಬಳ್ಳಿ
    Share. Facebook Twitter Pinterest LinkedIn Tumblr Email WhatsApp
    Previous Articleಕರಾಟೆ ಕ್ಲಾಸ್ ನಲ್ಲಿ Terror ತರಬೇತಿ
    Next Article ಮಕ್ಕಳ ಅಶ್ಲೀಲ ವಿಡಿಯೋ: CBI ದಾಳಿ
    vartha chakra
    • Website

    Related Posts

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    January 22, 2026

    ಐಜಿಪಿ ರಾಮಚಂದ್ರರಾವ್ ಗೆ ಮತ್ತೊಂದು ಸಂಕಷ್ಟ.

    January 22, 2026

    Comments are closed.

    Verbattle
    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Daviddek on ಅಕ್ಕನ ಮನೆಗೆ ಕನ್ನ ಹಾಕಿದ ತಂಗಿ
    • RicardoCor on ಡಿ.ಕೆ ಶಿವಕುಮಾರ್ ಅವರನ್ನು ರಾಹುಲ್ ಗಾಂಧಿ ಯಾಕೆ ಭೇಟಿ ಮಾಡುತ್ತಿಲ್ಲ ಗೊತ್ತಾ?
    • Daviddek on ಜ.29ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    January 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    January 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.