ಲೈಂಗಿಕ ದೌರ್ಜನ್ಯ ನಡೆಸಿದ ಅರೋಪಕ್ಕೆ ಗುರಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿಗಳು ಹರಡಿವೆ.ಆದರೆ ಶರಣರು ಇದನ್ನು ತಳ್ಳಿ ಹಾಕಿದ್ದು ಪೊಲೀಸ್ ರಕ್ಷಣೆಯಲ್ಲಿ ಮಠಕ್ಕೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.
ಲೈಂಗಿಕ ಕಿರುಕುಳದ ದೂರು ಸಲ್ಲಿಕೆಯಾಗುತ್ತಿದ್ದಂತೆ ಮಠದಲ್ಲೇ ಬೆಂಬಲಿಗರು, ಭಕ್ತರೊಂದಿಗೆ ಚರ್ಚೆಯಲ್ಲಿ ತೊಡಗಿದ್ದ ಶರಣರು ಕಳೆದ ರಾತ್ರಿಯಿಂದ ಕಾಣಿಸಿಕೊಂಡಿರಲಿಲ್ಲ.ಇದರಿಂದ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ ಅನುಮಾನ ವ್ಯಕ್ತವಾಗಿ, ಪೊಲೀಸರು ಮಠಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು
ಸಂತ್ರಸ್ತ ಬಾಲಕಿಯರು ಮಕ್ಕಳ ಕಲ್ಯಾಣ ಸಮಿತಿ ಸಮಾಲೋಚಕರು ಹಾಗೂ ಪೊಲೀಸರ ಎದುರು ಭಾನುವಾರ ಹೇಳಿಕೆ ದಾಖಲು ಮಾಡಿದ್ದಾರೆ. ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಲಾಗಿದ್ದು ಸೋಮವಾರ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡುವ ಸಾಧ್ಯತೆ ಇದೆ. ಬಳಿಕ ಮಕ್ಕಳೊಂದಿಗೆ ಪೊಲೀಸರು ಸ್ಥಳ ಮಹಜರ್ ಗೆ ಮಠಕ್ಕೆ ಧಾವಿಸಲಿದ್ದಾರೆ. ಹೀಗಾಗಿ, ಪೀಠಾಧ್ಯಕ್ಷರು ಮಠ ತೊರೆದಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು.
ಇದರ ನಡುವೆ ಮಧ್ಯಾಹ್ನದ ವೇಳೆಗೆ ಶರಣರು ಹಾವೇರಿ ಸಮೀಪದ ಹೆದ್ದಾರಿಯಲ್ಲಿ ಕಾಣಿಸಿಕೊಂಡರು. ಇದನ್ನು ಚಿತ್ರದುರ್ಗ ಪೊಲೀಸರ ಗಮನಕ್ಕೆ ತಂದ ಹಾವೇರಿ ಪೊಲೀಸರು ಅವರನ್ನು ಹಿಂಬಾಲಿಸಿದರು.
ಬಂಕಾಪುರ ಸಮೀಪದಲ್ಲಿ ಚಿತ್ರದುರ್ಗ ಪೊಲೀಸರು ಕೂಡಾ ಶರಣರು ಬರುತ್ತಿದ್ದ ಕಾರಿನ ಸಮೀಪ ಬಂದರು. ಇದರಿಂದ ಅವರನ್ನು ವಶಕ್ಕೆ ಪಡೆಯಲಾಯಿತು ಎಂಬ ಸುದ್ದಿಗಳು ಹರಡಿದವು.
ಇದನ್ನು ನಿರಾಕರಿಸಿದ ಶರಣರು ತಮ್ಮನ್ನು ಯಾರೂ ಬಂಧಿಸಿಲ್ಲ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ತೆರಳಿದ್ದೆ.ಇದರಿಂದ ತಾವು ನಾಪತ್ತೆಯಾಗಿದ್ದೇನೆಂಬ ವದಂತಿಗಳು ಹರಡಿದವು. ತಾವು ಈಗ ಮಠಕ್ಕೆ ತೆರಳುತ್ತಿದ್ದು ಪೊಲೀಸರು ತಮಗೆ ಬೆಂಗಾವಲಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
Previous Articleಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಬೇಡ
Next Article ಯಡಿಯೂರಪ್ಪ-ಸಂತೋಷ್ ಬಿಗ್ ಫೈಟ್