ಮಂಗಳೂರು : ತಾಯಿಯ ಜನ್ಮದಿನದಂದು ಶುಭ ಹಾರೈಸಲು ವಾರ್ಡನ್ ಮೊಬೈಲ್ ಫೋನ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಅಪ್ರಾಪ್ತ ಬಾಲಕನೊಬ್ಬ ಹಾಸ್ಟೆಲ್‌ನಲ್ಲಿ ತನ್ನ ನೇಣಿಗೆ ಶರಣಾಗಿದ್ದಾನೆ.
ಹಾಸ್ಟೆಲ್‌ನ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ವಾರ್ಡನ್ ಮೊಬೈಲ್ ಫೋನ್ ಅನ್ನು ನೀಡಿಲ್ಲ ಎಂದು ಹೇಳಲಾಗಿದೆ. ಇದರಿಂದ ಮನನೊಂದ ಬಾಲಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಘಟನೆಯು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ಯಾದ ಶಾರದ ವಿದ್ಯಾ ನಿಕೇತನದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಬೆಂಗಳೂರಿನ ಹೊಸಕೋಟೆ ನಿವಾಸಿ ಪೂರ್ವಜ್ (14) ಎಂದು ಗುರುತಿಸಲಾಗಿದೆ. ಜೂನ್ 11 ರಂದು ಪೂರ್ವಜ್ ತಾಯಿಯ ಜನ್ಮದಿನ ಎಂದು ಇತ್ತೆನ್ನಲಾಗಿದೆ. ಅವನು ತನ್ನ ತಾಯಿಗೆ ಶುಭಾಶಯ ಹೇಳಲು ಹಾಸ್ಟೇಲ್ ವಾರ್ಡನ್‌ಗೆ ಮೊಬೈಲ್ ಫೋನ್‌ಗಾಗಿ ವಿನಂತಿಸಿದಾಗ, ವಾರ್ಡನ್ ನಿರಾಕರಿಸಿದ್ದಾರೆ. ಅವರ ಕುಟುಂಬ ಸದಸ್ಯರು ಪೂರ್ವಜ್ ಅವರನ್ನು ದೂರವಾಣಿ ಮೂಲಕ 14 ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಮಾತನಾಡಲು ಅವಕಾಶ ನೀಡಲಿಲ್ಲ.
ಪೂರ್ವಜ್ ಮಧ್ಯರಾತ್ರಿ 12 ಗಂಟೆಯವರೆಗೆ ನಿದ್ರಿಸದೆ ಬೇಸರದಿಂದಿದ್ದ ಎಂದು ವರದಿಯಾಗಿದೆ. ನಂತರ, ಆತ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು, ಕುಟುಂಬ ಸದಸ್ಯರು ಆರೋಪಿಸಿದ್ದಾರೆ
ಬೆಳಗ್ಗೆ ಹಾಸ್ಟೆಲ್‌ನಲ್ಲಿದ್ದ ಇತರೆ ವಿದ್ಯಾರ್ಥಿಗಳು ಆತನ ಶವವನ್ನು ಕಂಡು ಹಾಸ್ಟೆಲ್ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಸಂಜೆ ಕುಟುಂಬ ಸದಸ್ಯರು ಹಾಸ್ಟೆಲ್ ತಲುಪಿದರು. ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದರು.
ಇಂಗ್ಲಿಷ್‌ನಲ್ಲಿರುವ ಪೂರ್ವಜ್‌ನ ಡೆತ್ ನೋಟ್‌ನ ಒಂದು ಆಯ್ದ ಭಾಗವು, “ಹ್ಯಾಪಿ ಬರ್ತ್‌ಡೇ MOM. ಮಿಸ್ ಯು. ಐ ಲವ್ ಯೂ MOM. ಐ ಆಮ್ ಡೈಯಿಂಗ್. ಪ್ಲೀಸ್. ಪ್ಲೀಸ್. ಖುಷಿಯಾಗಿರಿ ಮತ್ತು ಈ ಸ್ಕೂಲ್‌ನಿಂದ ನನ್ನ ಫೀಸ್ ತೆಗೆದುಕೊಳ್ಳಿ. ದಯವಿಟ್ಟು ಖುಷಿಯಾಗಿರಿ.” ಎಂದು ಬರೆದಿದೆ.