ತುಮಕೂರು: ಹಿಂದೂಗಳ ಹತ್ಯೆಗೆ ಕಠಿವಾಣ ಬಿದ್ದಿಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಆದ ಒಂದೇ ವರ್ಷದಲ್ಲಿ ಇಬ್ಬರು ಭೀಕರವಾಗಿ ಕೊಲೆಯಾಗಿದ್ದಾರೆ. ಬಿಜೆಪಿ ಸರ್ಕಾರದಲ್ಲೇ ಹಿಂದೂಗಳಿಗೆ ರಕ್ಷಣೆಯೇ ಇಲ್ಲ ಅನ್ನೋ ಆತಂಕ ಮೂಡಿಸಿದೆ. ಈ ನಡುವೆ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವ ಕಾರ್ಯಕರ್ತರು ರಾಜೀನಾಮೆಗಳ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಅಪ್ಪಟ್ಟ ಹಿಂದೂ ಕಾರ್ಯಕರ್ತರ ಹಾಗೂ ಬಿಜೆಪಿಯ ಸಕ್ರಿಯ ಮುಖಂಡ ಶಿವಮೊಗ್ಗದ ಹರ್ಷ ಹತ್ಯೆಯಾಗಿ ವರ್ಷವೂ ಕಳೆದಿಲ್ಲ. ಆ ಘಟನೆಯಿಂದ ಇನ್ನೂ ಹಿಂದೂಪರ ಕಾರ್ಯಕರ್ತರು ಹಾಗೂ ಬಿಜೆಪಿಯ ಯುವಪಡೆ ಹೊರ ಬಂದಿಲ್ಲ. ಈಗ ಮಂಗಳೂರಿನಲ್ಲಿ ಅದೇ ರೀತಿ ದಾಳಿ ಮಾಡಿದ ದುಷ್ಕರ್ಮಿಗಳು ಪ್ರವೀಣ್ ನನ್ನು ಕೂಡ ಭೀಕರವಾಗಿ ಕೊಂದು ಮುಗಿಸಿದೆ.
ಇದು ಕೇಸರಿ ಪಾಳಯದಲ್ಲೇ ಕೆಂಡ ಹೊತ್ತಿಕೊಂಡಂತಾಗಿದೆ. ಬಿಜೆಪಿ ಸರ್ಕಾರದಲ್ಲೇ ಹಿಂದುಗಳಿಗೆ ರಕ್ಷಣೆ ಹಾಗೂ ಸುರಕ್ಷತೆಯ ಪ್ರಶ್ನೆ ಈಗ ಎದುರಾಗಿದೆ. ತಮ್ಮದೇ ಸರ್ಕಾರದ ವಿರುದ್ಧ ತಿರುಗಿ ಬಿದ್ದು ವಿವಿಧ ಮೋರ್ಚಾಗಳಿಗೆ ರಾಜೀನಾಮೆಯ ಅಸ್ತç ಬಿಜೆಪಿಗೆ ಮಗ್ಗುಲ ಮುಳಾಗಿದೆ.
ತುಮಕೂರು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟಕದ ಸದಸ್ಯರಾದ ಕಿರಣ್, ರಕ್ಷಿತ್ ಹಾಗೂ ಶಕುಂತಲಾ ನಟರಾಜ್ ರಾಜೀನಾಮೆ ನೀಡಿದ್ದಾರೆ. ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹಾಲೇಗೌಡ ಕೂಡ ಸ್ಥಾನ ತ್ಯಜಿಸುವ ಮಾತುಗಳನ್ನಾಡಿದ್ದಾರೆ. ಇವರ ರಾಜೀನಾಮೆ ಪತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
ಬಿಜೆಪಿ ಸರ್ಕಾರಕ್ಕೂ ಪ್ರವೀಣ್ ಹತ್ಯೆ ನುಂಗಲಾರದ ತುತ್ತಾಗಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಸಂಭ್ರಮದಲ್ಲಿತ್ತು. ಆದರೆ ಈಗ ಸಂಭ್ರಮದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ. ಇದಕ್ಕೆ ಸಾಕ್ಷಿ ರಾತ್ರೋ ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ ದೀಢೀರ್ ಪತ್ರಿಕಾಗೋಷ್ಠಿ ಕರೆದು ಜನೋತ್ಸವದ ಉತ್ಸಾವೇ ಕಳೆದುಕೊಳ್ಳುವಂತೆ ಮಾತನಾಡಿದ್ದಾರೆ. ನಿರಂತರ ಹಿಂದುಗಳ ಹತ್ಯೆಗೆ ಕಟ್ಟುನಿಟ್ಟಿನ ಕಾನೂನು ಜರುಗಿಸುವ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಈಗಾಗಲೇ ಕೇರಳದಲ್ಲಿ ಇಬ್ಬರನ್ನು ಬಂಧಿಸಿರುವ ಪೊಲೀಸರು 20 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ. ನೆನ್ನೆ ಮಂಗಳೂರಿನಲ್ಲಿ ಯುವ ಮೋರ್ಚಾ ರಾಜೀನಾಮೆ ಘೋಷಣೆ ಮಾಡಿ ಬಳಿಕ ವಾಪಸ್ ಪಡೆದಿತ್ತು. ತುಮಕೂರಿನಲ್ಲೂ ರಾಜೀನಾಮೆ ಕೇವಲ ಪ್ರಚಾರಕ್ಕೆ ಸೀಮಿತಾಗಿರುತ್ತಾ ಅನ್ನೋದನ್ನ ಕೆಲವೇ ದಿನಗಳಲ್ಲಿ ಬಯಲಾಗಲಿದೆ. ಬಿಜೆಪಿ ಬಲ ಪ್ರವೀಣ್ ಹತ್ಯೆ ಬೆನ್ನಲ್ಲೇ ಕುಸಿದು ಹೋಯ್ತಾ ಅನ್ನೋ ಅನುಮಾನ ಕಾಡಲಾರಂಭಿಸಿದೆ ಕಮಲ ಪಾಳಯಕ್ಕೆ.
ಪ್ರವೀಣ್ ಹತ್ಯೆ: ತುಮಕೂರಿನಲ್ಲಿ ವಿವಿಧ ಮೋರ್ಚಾಗಳಿಗೆ ಸಾಮೂಹಿಕ ರಾಜೀನಾಮೆ
Previous Articleಬಾಟಲಿಯಿಂದ ಮಾರಣಾಂತಿ ಹಲ್ಲೆ ಜೀವತೆತ್ತ ಯುವಕ
Next Article ತುಮಕೂರಿನ ರೋಡ್ ರೋಮಿಯೋಗಳಿಗೆ ಖಾಕಿ ಪಾಠ