ಜನವರಿ 10 ರಂದು ಬಿಡುಗಡೆಗೊಳ್ಳಬೇಕಿದ್ದ ಪ್ರಿನ್ಸ್ ಹ್ಯಾರಿ ಅವರ ಆತ್ಮಚರಿತ್ರೆ “ಸ್ಪೇರ್” ಗುರುವಾರವೇ ಸೋರಿಕೆಯಾಗಿದೆ. ಆತ್ಮಚರಿತ್ರೆಯ ಸ್ಪ್ಯಾನಿಷ್ ಭಾಷೆಯ ಆವೃತ್ತಿಯು ತಪ್ಪಾಗಿ ಮಾರಾಟಗೊಂಡು ಎಡವಟ್ಟಾಗಿದೆ . ಆಗಿಂದಾಗ್ಗೆ ಸ್ಪೇನ್ ನ ಪುಸ್ತಕ ಮಳಿಗೆಗಳಿಂದ ಆತ್ಮಚರಿತ್ರೆಯನ್ನು ತೆಗೆಯಲಾಯಿತಾದರೂ, ಅಷ್ಟರಲ್ಲಾಗಲೇ ಕೆಲವು ಪ್ರತಿಗಳು ಮಾಧ್ಯಮದ ಕೈಸೇರಿದ್ದವು. ಬಹಿರಂಗಗೊಂಡ ಆತ್ಮಚರಿತ್ರೆಯ ಕೆಲವು ಆಸಕ್ತಿಕರ ವಿಷಯಗಳು ಇಲ್ಲಿವೆ.
* ವಿಲಿಯಂ ತನ್ನ ಮೇಲೆ ದೈಹಿಕವಾಗಿ ದಾಳಿ ಮಾಡಿದ್ದನೆಂದು ಹೇಳಿಕೊಂಡಿರುವ ಹ್ಯಾರಿ.
* ಸಹೋದರರು ಪರಸ್ಪರರನ್ನು ವಿಲ್ಲಿ ಮತ್ತು ಹಾರೊಲ್ಡ್ ಎಂದು ಕರೆದುಕೊಳ್ಳುತ್ತಿದ್ದರು.
* ತಾನು ಅಫ಼್ಘಾನಿಸ್ಥಾನದಲ್ಲಿ ೨೫ ಜನರನ್ನು ಕೊಂದಿರುವೆ ಎಂದು ಹೇಳಿಕೊಂಡಿರುವ ಹ್ಯಾರಿ.
* ನಾನು ಕೊಕೇನ್ ಸೇವಿಸಿದ್ದೆ, ಆದರೆ ಇಷ್ಟವಾಗಲಿಲ್ಲ.
*ಅಣ್ಣನೊಂದಿಗಿನ ಜಗಳದ ಬಗ್ಗೆ ಪತ್ನಿಗಿಂತ ಮೊದಲು ಥೆರಪಿಸ್ಟ್ ಗೆ ಹೇಳಿದ್ದ ಹ್ಯಾರಿ.
* ವಿಲಿಯಮ್ ಮತ್ತು ಕೇಟ್ ತನ್ನನ್ನು ನಾಜಿ ಸಮವಸ್ತ್ರ ಧರಿಸುವಂತೆ ಉತ್ತೇಜಿಸುತ್ತಿದ್ದರು ಎಂದು ಹ್ಯಾರಿ ಹೇಳಿಕೊಂಡಿದ್ದಾರೆ.
* ತಮ್ಮ ಜೀವನದ ಏಳು ಬೀಳುಗಳನ್ನು, ರಾಜಮನೆತನದ ನಿರ್ಭಂಧಗಳನ್ನು, ಐಷಾರಾಮಿ ಜೀವನವನ್ನು ತಮ್ಮ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
* ತಾಯಿಯ ಸಾವಿನ ಬಗ್ಗೆ ತಿಳಿದ ಕ್ಷಣದ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
* ಕ್ಯಾಮಿಲ್ಲಾರನ್ನು ಮದುವೆಯಾಗಬೇಡಿ ಎಂದು ಚಾರ್ಲ್ಸ್ ರನ್ನು ಬೇಡಿಕೊಂಡಿದ್ದ ಹ್ಯಾರಿ ಮತ್ತು ವಿಲಿಯಮ್
* ಜಗಳವಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದ ಚಾರ್ಲ್ಸ್
* ವರ್ಜಿನಿಟಿ ಕಳೆದುಕೊಂಡ ಆ ದಿನದ ಬಗ್ಗೆಯೂ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ ಹ್ಯಾರಿ.