ನವದೆಹಲಿ.
ಲೋಕಸಭೆಯ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಹಲವಾರು ವಿಚಾರಗಳು ಈ ಅಧಿವೇಶನದಲ್ಲಿ ಗಮನ ಸೆಳೆದಿದೆ. ಆದರೆ ರಾಜಕೀಯವಾಗಿ ಈ ಅಧಿವೇಶನದಲ್ಲಿ ಅತಿ ಹೆಚ್ಚು ಗಮನ ಸೆಳೆದಿರುವುದು ಪ್ರಿಯಾಂಕಾ ಗಾಂಧಿ.
ಇಂದಿರಾ ಗಾಂಧಿ ಅವರ ಕುಟುಂಬಕ್ಕೆ ಸೇರಿದವರು ಎಂಬ ಕಾರಣಕ್ಕಾಗಿಯೋ ಏನೋ ಮೊದಲ ಬಾರಿ ಸಂಸದರಾಗಿರುವ ಇವರಿಗೆ ಸಂಸತ್ತಿನ ಪ್ರತಿಪಕ್ಷಗಳ ಪ್ರಮುಖ ನಾಯಕರ ಜೊತೆಗೆ ಮೊದಲ ಸಾಲಿನಲ್ಲೇ ಇವರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.
ವಿಶೇಷವೆಂದರೆ ಸಂಸತ್ ನಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಮೂರು ಬಾರಿ ಸತತವಾಗಿ ಆಯ್ಕೆಯಾಗಿರುವ ಎನ್.ಸಿ.ಪಿ.ಯ ಸುಪ್ರಿಯಾ ಸುಳೆ ಅವರಿಗೆ ಹಿಂದಿನ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ.
ಹಿರಿಯರ ಜೊತೆಗೆ ಮೊದಲ ಸಾಲಿನಲ್ಲಿ ಆಸೀನರಾಗುವ ಪ್ರಿಯಾಂಕಾ ಸರ್ಕಾರದ ವಿರುದ್ಧ ಮೊನಚು ಮಾತುಗಳ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ನಗು ನಗುತ್ತಾ ಸರ್ಕಾರದ ಲೋಕ ದೋಷಗಳನ್ನು ಎತ್ತಿ ಹಿಡಿದ ಪ್ರಿಯಾಂಕಾ ಗಾಂಧಿ ಅವಕಾಶ ಸಿಕ್ಕಾಗೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳದರು. ವಂದೇ ಮಾತರಂ ಕುರಿತಾದ ಚರ್ಚೆಯಲ್ಲಿ ಪ್ರಿಯಾಂಕ ಮಾಡಿದ ಭಾಷಣ ಪ್ರತಿಪಕ್ಷಗಳ ಸದಸ್ಯರು ಕೂಡಾ ಮೆಚ್ಚಿದರು.
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ಪಕ್ಷದ ನಾಯಕಿಯಾಗಿ ಹೊರಹೊಮ್ಮುವ ಮೂಲಕ ಎಲ್ಲರ ಗಮನ ಸೆಳೆದರು. ಇವರ ಚಟುವಟಿಕೆ ಕೇವಲ ಸರ್ಕಾರವನ್ನು ಟೀಕಿಸುವುದಕ್ಕಷ್ಟೇ ಸೀಮಿತವಾಗಲಿಲ್ಲ ಬದಲಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಸರ್ಕಾರದ ಗಮನ ಸೆಳೆದರು ಮಂತ್ರಿಗಳನ್ನು ಭೇಟಿ ಮಾಡಿದರು. ಸಂಸತ್ ಕಲಾಪದ ನಡುವೆ ತಮ್ಮ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನ ಸೆಳೆದ ಪ್ರಿಯಾಂಕಾ ಗಾಂಧಿ ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹಲವಾರು ವಿಚಾರಗಳು ಚರ್ಚಿಸಬೇಕು ನಿಮ್ಮ ಕಚೇರಿಗೆ ಬರುತ್ತೇನೆ ಸಮಯ ಕೊಡಿ ಎಂದು ಕೇಳುವ ಮೂಲಕ ಗಮನ ಸೆಳೆದರು ಅಷ್ಟೇ ಅಲ್ಲ ಮೂರು ಕ್ಷಣವೇ ನಿತಿನ್ ಗಡ್ಕರಿ ಅವರ ಕಚೇರಿಯಲ್ಲಿ ಕಾಣಿಸಿಕೊಂಡು ನಗುನಗುತ್ತಲೇ ತಮ್ಮ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಂಡು ಹೊರಬಂದರು.
ಇನ್ನು ತಮ್ಮ ಪಕ್ಷದ ಸಂಸದರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ತತ್ವಕ್ಕೆ ಬದ್ಧರಾದ ಅವರು ಪಕ್ಷದ ಚಟುವಟಿಕೆಗಳ ಬಗ್ಗೆ ಅಷ್ಟಕಷ್ಟ ಎನ್ನುವಂತಿರುವ ಮನೀಶ್ ತಿವಾರಿ, ಶಶಿ ತರೂರ್ ಅವರ ಜೊತೆಗೆ ಮಾತನಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿ ಒಂದು ಹಂತಕ್ಕೆ ಯಶಸ್ವಿಯೂ ಆಗಿದ್ದಾರೆ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾಯಿಸುವ ಸರ್ಕಾರದ ನಿರ್ಧಾರದ ವಿರುದ್ಧ ಶಶಿ ತರೂರ್ ಮತ್ತು ಮನೀಶ್ ತಿವಾರಿ ದೊಡ್ಡದಾಗಿ ಧ್ವನಿ ಎತ್ತಿರುವುದೇ ಇದಕ್ಕೆ ಸಾಕ್ಷಿ.
ಕಲಾಪದ ಸಮಯದಲ್ಲಿ ಸದನದಲ್ಲಿ ಎಲ್ಲರ ವಿಶ್ವಾಸದೊಂದಿಗೆ ಮುನ್ನಡೆಯುತ್ತಿರುವ ಪ್ರಿಯಾಂಕಾ ಗಾಂಧಿ ಕಲಾಪದ ಬಿಡುವಿನ ವೇಳೆಯಲ್ಲಿ ತಮ್ಮ ಪಕ್ಷದ ಸದಸ್ಯರೊಂದಿಗೆ ಸಮಾಲೋಚನೆ ನಡೆಸುವುದು ಸರ್ಕಾರದ ಪ್ರತಿನಿಧಿಗಳ ಜೊತೆ ಚರ್ಚಿಸುವ ಮೂಲಕ ಗಮನಸೆಳೆಯುತ್ತಿದ್ದಾರೆ.
ಇನ್ನು ಕಲಾಪ ಮುಂದುವರಿದ ನಂತರ ಪ್ರಧಾನಿ ಮತ್ತು ಲೋಕಸಭೆಯ ಅಧ್ಯಕ್ಷರು ಎಲ್ಲ ಸದಸ್ಯರಿಗೆ ಚಹಾ ಕೂಟ ಏರ್ಪಡಿಸಿ ಧನ್ಯವಾದ ಅರ್ಪಿಸುವುದು ಸಂಪ್ರದಾಯ ಈ ಬಾರಿ ಈ ಚಹಾ ಕೂಟದಲ್ಲಿ ಪ್ರಿಯಾಂಕ ಗಾಂಧಿ ಸಕ್ರಿಯವಾಗಿ ಪಾಲ್ಗೊಂಡು ಪ್ರಧಾನಿ ಅವರ ಜೊತೆಯಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಾ ಗಮನ ಸೆಳೆದರು ವಿಶೇಷವೆಂದರೆ ಇಲ್ಲಿಯವರೆಗೆ ರಾಹುಲ್ ಗಾಂಧಿ ಇಂತಹ ಒಂದೇ ಒಂದು ಚಹಾ ಕೂಟದಲ್ಲಿ ಪಾಲ್ಗೊಂಡಿಲ್ಲ.
ಹೆಜ್ಜೆ ಹೆಜ್ಜೆಗೂ ತಮ್ಮ ಸಹೋದರನನ್ನು ಸಮರ್ಥಿಸುತ್ತಾ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರು ರಾಹುಲ್ ಗಾಂಧಿ ಅವರ ಗೈರುಹಾಜರಿಯಲ್ಲಿ ಪಕ್ಷವನ್ನು ಸಾಮೂಹಿಕ ನಾಯಕತ್ವದ ಆಧಾರದಲ್ಲಿ ಮುನ್ನಡೆಸುತಿದ್ದಾರೆ.
ಇದರೊಂದಿಗೆ ಈಗ ಹೈಕಮಾಂಡ್ ನಲ್ಲಿ ಎರಡು ಅಧಿಕಾರಕ್ಕೆ ಕೇಂದ್ರ ಗಳು ನಿರ್ಮಾಣವಾಗಿವೆ ಎಂದು ರಾಜಕೀಯ ಪಂಡಿತರು ಮತ್ತು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಮೊದಲನೆಯ ಅಧಿಕಾರ ಕೇಂದ್ರ ರಾಹುಲ್ ಗಾಂಧಿ ಇವರು ಪಕ್ಷದ ತತ್ವ ಸಿದ್ಧಾಂತಗಳು ಪ್ರಬಲ ಪ್ರತಿಪಾದಕರಾಗಿದ್ದಾರೆ ಇನ್ನು ಎರಡನೆಯ ಅಧಿಕಾರ ಕೇಂದ್ರ ಪ್ರಿಯಾಂಕಾ ಗಾಂಧಿ. ಇವರು ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಮುನ್ನಡೆಸುವ ತತ್ವ ಪ್ರತಿಪಾದಕರಾಗಿದ್ದಾರೆ ಪ್ರತಿಪಕ್ಷ ಮತ್ತು ಆಡಳಿತ ಪಕ್ಷ ಜೊತೆ ಜೊತೆಯಾಗಿ ಸಾಗಬೇಕು ಈ ಮೂಲಕ ರಚನಾತ್ಮಕ ರಾಜಕಾರಣ ಮಾಡಬೇಕು ಎನ್ನುವ ನಿಲುವು ಹೊಂದಿದ್ದಾರೆ ಎಂದು ವಿಶ್ಲೇಷಸಲಾಗುತ್ತಿದೆ ಹೀಗಾಗಿ ರಾಹುಲ್ ಗಾಂಧಿ ಪಕ್ಷದ ಸಿದ್ಧಾಂತದ ಪ್ರಬಲ ಪ್ರತಿಪಾದಕರಾಗಿ ಮುಂದುವರೆಯಲಿ ಪ್ರಿಯಾಂಕ ಗಾಂಧಿ ಸಂಘಟನಾತ್ಮಕವಾಗಿ ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಮುನ್ನಡೆಸಲಿ ಎಂಬ ಆಗ್ರಹ ಕೇಳಿ ಬರತೊಡಗಿದೆ.

