ಬೆಂಗಳೂರು, ನ.23- ಸಿನಿಮಾ ನಿರ್ಮಾಪಕರನ್ನು ಅನ್ನದಾತ ಎಂದು ಚಿತ್ರರಂಗ ಗೌರವಿಸುತ್ತದೆ. ಆದರೆ ಇಲ್ಲೊಬ್ಬ ನಿರ್ದೇಶಕ ಹಣಕ್ಕಾಗಿ ನಿರ್ಮಾಪಕರೊಬ್ಬರನ್ನು ಹನಿಟ್ರ್ಯಾಪ್ (Honey Trap) ಜಾಲಕ್ಕೆ ಸಿಲುಕುವಂತೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹನಿಟ್ರ್ಯಾಪ್ ಮಾಡಿ ಯುವತಿಯರ ಮೂಲಕ ನಿರ್ಮಾಪಕರೊಬ್ಬರಿಂದ ಹಣ ಸುಲಿಗೆ ಮಾಡಿದ ನಿರ್ದೇಶಕನನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ನಿರ್ದೇಶಕ ರವೀಂದ್ರ ಬಂಧಿತ ಆರೋಪಿಯಾಗಿದ್ದು, ನಿರ್ಮಾಪಕ ಚಿಂಗಾರಿ ಮಹಾದೇವ್ ಹನಿಟ್ರ್ಯಾಪ್ ಗೆ ಒಳಗಾದವರು.
ಅವರಿಗೆ ಹುಡುಗಿಯರ ಮುಖಾಂತರ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ರವೀಂದ್ರ. ಮಾತ್ರವಲ್ಲ ಹಲವು ನಿರ್ಮಾಪಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿಯೂ ತಿಳಿದು ಬಂದಿದೆ.
ನಿರ್ಮಾಪಕ ಚಿ೦ಗಾರಿ ಮಹಾದೇವ ಅನ್ನಪೂರ್ಣೇಶ್ಮರಿ ನಗರ ಠಾಣೆಯಲ್ಲಿ ನಿರ್ದೇಶಕ ರವೀ೦ದ್ರ ವಿರುದ್ಧ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಹಾದೇವ್ ಚಿ೦ಗಾರಿ’, “ಶ್ರೀಕ೦ಠ’, ‘ಶಿಶಿರ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಬಾರಬಾತ್’ ಸಿನಿಮಾ ನಿರ್ದೇಶಕ ರವೀಂದ್ರ ಯುವತಿಯರ ಮೂಲಕ ಹನಿಟ್ರ್ಯಾಪ್ ಮಾಡಿ ಬೆದರಿಸಿ ಹಣ ಪಡೆದ ಆರೋಪ ಕೇಳಿಬ೦ದಿದ್ದು, ಪೊಲೀಸರು ಕ್ರಮಕೈಗೊಂಡಿದ್ದಾರೆ.
4 Comments
фоновое озвучивание фоновое озвучивание .
фоновое озвучивание помещений фоновое озвучивание помещений .
идеи для бизнеса идеи для бизнеса .
куплю диплом первом 1russa-diploms.ru .