ಬೆಂಗಳೂರು, ಜೂ.12-ಸುಮಾರು 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಭ್ರಷ್ಟಾಚಾರ ಪ್ರಕರಣ ಹಿನ್ನೆಲೆಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಧಾರವಾಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ ಇಸ್ಮಾಯಿಲ್ನನ್ನು ಬಂಧಿಸಲಾಗಿದೆ.
ಇನ್ಸರ್ವೀಸ್ ಕೋಟಾದಲ್ಲಿ ಇಸ್ಮಾಯಿಲ್ ಜಮಾದಾರ್ ಆಯ್ಕೆಯಾಗಿದ್ದು, ಮಹಾರಾಷ್ಟ್ರದ ಪುಣೆಯಲ್ಲಿ ಕಳೆದ ರಾತ್ರಿ ಇಸ್ಮಾಯಿಲ್ ಜಮಾದಾರ್ನನ್ನ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆ, ಸಿಐಡಿ ಪೊಲೀಸರಿಂದ ಸೆರೆ ಹಿಡಿಯಲಾಗಿದೆ. ಇಸ್ಮಾಯಿಲ್ ಜಮಾದಾರ್ ಸೇರಿ 6 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ಸಿಐಡಿ ಡಿವೈಎಸ್ಪಿ ಪ್ರಕಾಶ್ ರಾಠೋಡ್ ಠಾಣೆಗೆ ದೂರು ನೀಡಿದ್ದರು. ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಸಿ ಇಸ್ಮಾಯಿಲ್ ಗೋವಾದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಡಿಎಆರ್ ಪೇದೆ ಇಸ್ಮಾಯಿಲ್ ಜಮಾದಾರ್ಗಾಗಿ ಸಿಐಡಿ ಶೋಧ ನಡೆಸಿದ್ದರು.
ಜಾಮೀನು ತಿರಸ್ಕೃತ:
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕಠಿಣ ಶ್ರಮ ವಹಿಸಿದ್ದು, ಆರೋಪಿಗಳ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ಅಲ್ಲದೆ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪಿಗಳು ನಿರಂತರವಾಗಿ ಬಂಧಿಸಲಾಗುತ್ತಿದೆ.
ಇನ್ನು ಅಧಿಕಾರಿಗಳ ಹಾರ್ಡ್ವರ್ಕ್ನಿಂದ ಬಂಧನಕ್ಕೆ ಒಳಗಾಗಿರುವ ಯಾರಿಗೂ ಜಾಮೀನು ಸಿಗುತ್ತಿಲ್ಲ. ದಿವ್ಯಾ ಹಾಗರಗಿ, ಮಹಾಂತೇಶ್ ಪಾಟೀಲ್ ಸೇರಿ 8 ಆರೋಪಿಗಳ ಜಾಮೀನು ಅರ್ಜಿಗಳು ತಿರಸ್ಕೃತವಾಗಿವೆ. ನಿನ್ನೆ ಜಾಮೀನು ಅರ್ಜಿ ತಿರಸ್ಕೃತಗೊಳಿಸಿ ಕಲಬುರಗಿ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಮತ್ತೊಂದು ಅಕ್ರಮ ಬಯಲು:
ಕಲಬುರಗಿಯ ನೊಬೆಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿದ್ದ ಪರೀಕ್ಷಾ ಕೇಂದ್ರದಲ್ಲಿ ಇಸ್ಮಾಯಿಲ್ ಖಾದೀರ್ ಅಕ್ರಮವಾಗಿ ಪರೀಕ್ಷೆ ಬರೆದಿದ್ದ. ಕಿಂಗ್ ಪಿನ್ ರುದ್ರಗೌಡ ಪಾಟೀಲ್ ನೀಡಿದ್ದ ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದು ಇನ್ ಸರ್ವಿಸ್ ಕೋಟಾದಲ್ಲಿ ಆಯ್ಕೆಯಾಗಿದ್ದ. ಸದ್ಯ ಧಾರವಾಡದಲ್ಲಿ ಮೀಸಲು ಪೊಲೀಸ್ ಪೇದೆಯಾಗಿ ಕೆಲಸ ನಿರ್ವಹಿಸುತ್ತಿರುವ ಇಸ್ಮಾಯಿಲ್, ರುದ್ರಗೌಡ ಪಾಟೀಲ್ ಸೇರಿ ಆರು ಜನರ ವಿರುದ್ಧ ಕಲಬುರಗಿ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಸಿಐಡಿ ಡಿವೈಎಸ್ಪಿ ಪ್ರಕಾಶ್ ರಾಠೋಡ್ ರಿಂದ ದೂರು ದಾಖಲಾಗಿದೆ. ಕಳೆದ ಒಂದು ವಾರದಿಂದ ಇಸ್ಮಾಯಿಲ್ ಖಾದೀರ್ ನಾಪತ್ತೆಯಾಗಿದ್ದಾನೆ.
Previous Articleಇಲ್ಲಿ ಕಾಂಡೋಮ್ ಭಾರೀ ಕಾಸ್ಟ್ಲಿ, ಆದ್ರೂ ಮುಗಿಬೀಳ್ತಾರೆ!
Next Article ಹೀಗಿದ್ದ ತಾಲಿಬಾನ್ ಉಗ್ರ..