ಬೆಂಗಳೂರು,ಏ.16- ರಾಜ್ಯ ವಿಧಾನಸಭೆ ಚುನಾವಣೆ ಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯಬಾರದು ಎಂದು
ಚುನಾವಣಾ ಅಕ್ರಮದ ಮೇಲೆ ನಿಗಾವಹಿಸಿರುವ ಆಯೋಗದ ಅಧಿಕಾರಿಗಳು ರಾಜ್ಯದ ಹಲವೆಡೆ ಅಪಾರ ಪ್ರಮಾಣದ ನಗದು,ಚಿನ್ನ-ಬೆಳ್ಳಿಯ ಆಭರಣ,ಮದ್ಯ ವಶಪಡಿಸಿಕೊಂಡಿದ್ದಾರೆ.
ಚುನಾವಣಾ ಆಯೋಗವು ನಿನ್ನೆ ಒಂದೇ ದಿನ
6.32 ಕೋಟಿ ನಗದನ್ನು ವಶಪಡಿಸಿಕೊಂಡಿದೆ.
ದಾಸರಹಳ್ಳಿ ಕ್ಷೇತ್ರದಲ್ಲಿ 2.79 ಕೋಟಿ, ಶಿವಾಜಿನಗರದಲ್ಲಿ 65 ಲಕ್ಷ ರೂ, ಗೋಕಾಕ್ ಕ್ಷೇತ್ರದಲ್ಲಿ 55 ಲಕ್ಷ, ಚಿಕ್ಕಪೇಟೆಯಲ್ಲಿ 52 ಲಕ್ಷ ,ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ 44 ಲಕ್ಷ,ರಾಜರಾಜೇಶ್ವರಿ ಕ್ಷೇತ್ರದಲ್ಲಿ 63.50 ಲಕ್ಷ ರೂಪಾಯಿ ನಗದನ್ನು ಜಪ್ತಿ ಮಾಡಿದೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ 3.18 ಕೋಟಿ ಮೌಲ್ಯದ 4 ಕೆಜಿಗೂ ಅಧಿಕ ಚಿನ್ನ, ಮಲ್ಲೇಶ್ವರ ಕ್ಷೇತ್ರದಲ್ಲಿ 1.29 ಕೋಟಿ ಮೌಲ್ಯದ 2 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
![]()
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 67.34 ಕೋಟಿ ರೂ. ನಗದು, 18.44 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 33.91 ಕೋಟಿ ರೂ. ಮೌಲ್ಯದ 7.97 ಲಕ್ಷ ಲೀಟರ್ ಮದ್ಯ, 13.35 ಕೋಟಿ ರು. ಮೌಲ್ಯದ 650.32 ಕೆಜಿ ಮಾದಕ ವಸ್ತುಗಳು, 26 ಕೋಟಿ ರೂ. ಮೌಲ್ಯದ 61.21 ಕೆಜಿ ಚಿನ್ನ, 28.59 ಕೋಟಿ ರೂ. ಮೌಲ್ಯದ 441.617 ಕೆಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು ಈವರೆಗೆ ನಗದು ಸೇರಿದಂತೆ 161.66 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣೆ ಸಂಬಂಧಿಸಿದಂತೆ 1,334 ಎಫ್‌ಐಆರ್,ದಾಖಲಾಗಿದೆ. 67,478 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 3834 ಪ್ರಕರಣಗಳನ್ನು ದಾಖಲಿಸಲಾಗಿದೆ. 5,663 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 9,678 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದೆ.


3 Comments
Bli med i Betano-revolusjonen. Få opptil €500 bonus pluss free spins og spill de mest spennende spillene på nett. Sportspill, live casino https://betanogame.org/no/mobile-app/ og uendelige jackpotter – dette er der du hører hjemme.
No Mostbet vocГЄ joga com estilo e comeГ§a sempre com o pГ© direito – https://mostbetpt.pro/pagamento/ , Mostbet: o lugar certo pra quem quer jogar e ganhar de verdade .
One heartbeat away from rewriting reality – http://calcitriolc.com/big-bass-bonanza-slot-review-2026/ , Spin until the word “unlucky” needs therapy .