ಬೆಂಗಳೂರು,ಜೂ.6-ರಾಷ್ಟ್ರದ ರೈತ ನಾಯಕ ರಾಜೇಶ್ ಟಿಕಾಯತ್ಗೆ ಮಸಿ ಬಳಿದ ಪ್ರಕರಣದಲ್ಲಿ ಮಹಿಳಾ ಸಂಘಟನೆಯೊಂದರ ಅಧ್ಯಕ್ಷೆ ಉಮಾದೇವಿಯನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಆರೋಪಿಗಳಾದ ಭರತ್ ಶೆಟ್ಟಿ, ಪ್ರದೀಪ್ ಮತ್ತು ಶಿವಕುಮಾರ್ನ ವಿಚಾರಣೆಗೆ ಒಳಪಡಿಸಿದ್ದರು. ರಾಜೇಶ್ ಟಿಕಾಯತ್ಗೆ ಮಸಿ ಬಳಿದ ಪ್ರಕರಣದ ತನಿಖೆ ವೇಳೆ ಉಮಾದೇವಿ ಕೈವಾಡ ಕಂಡು ಬಂದಿದೆ. ಹಾಗಾಗಿ, ಪೊಲೀಸರು ಉಮಾದೇವಿಯನ್ನ ಬಂಧಿಸಿದ್ದಾರೆ. ಘಟನೆ ದಿನ ಉಮಾದೇವಿ ಮುಂದೆ ನಿಂತು ಕೃತ್ಯ ನಡೆಸಿದ್ದರು. ಅಲ್ಲದೆ ಉಮಾದೇವಿ ಮನೆ ಮೇಲೆ ದಾಳಿ ನಡೆಸಿದಾಗ ಮಾರಾಕಾಸ್ತ್ರಗಳು ಕೂಡ ಪತ್ತೆಯಾಗಿವೆ ಎನ್ನಲಾಗಿದೆ. ಸದ್ಯ ಉಮಾದೇವಿಯನ್ನ ಪೊಲೀಸ್ ಕಸ್ಟಡಿಗೆ ಪಡೆದು ಘಟನೆಗೆ ಯಾರು ಕುಮ್ಮಕ್ಕು ನೀಡಿದ್ದರು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
Previous Articleಗ್ರಾಮಪಂಚಾತಿಗಳ ಗ್ರಂಥಾಲಯ ಮೇಲ್ವಿಚಾರಕರ ಗೌರವಧನವ ಹೆಚ್ಚಳ; ಸರ್ಕಾರ ಆದೇಶ
Next Article ಜುಟ್ಟು ಅಂದ್ರು… ಒದೆ ತಿಂದ್ರು…