ಬೆಂಗಳೂರು,ಜೂ.1- ಸಿನಿಮೀಯ ಶೈಲಿಯಲ್ಲಿ ಟೊಮೆಟೋ ಬಾಕ್ಸ್ ಕೆಳಗೆ ರಕ್ತಚಂದನ ಮರದ ತುಂಡುಗಳನ್ನಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಟಾಟಾಏಸ್ ವಾಹನವನ್ನು ಬೆನ್ನಟ್ಟಿ ವಶಪಡಿಸಿಕೊಳ್ಳುವಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಟೊಮೆಟೋ ಬಾಕ್ಸ್ ಕೆಳಗೆ ರಕ್ತಚಂದನ ಮರದ ತುಂಡುಗಳನ್ನಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ವರ್ತೂರು ಹಾಗು ಹೊಸಕೋಟೆ ಮಾರ್ಗಮಧ್ಯದಲ್ಲಿ ಟಾಟಾ ಏಸ್ ವಾಹನವನ್ನು ಬೆನ್ನಟ್ಟಿ ಬಂದಿದ್ದಾರೆ.
ಪೊಲೀಸರ ವಾಹನ ಕಂಡು ಗಾಬರಿಗೊಂಡ ಚಾಲಕ ಅಡ್ಡಾದಿಡ್ಡಿ ವಾಹನವನ್ನು ಓಡಿಸಿ ಎಮ್ಮೆಗೆ ಡಿಕ್ಕಿ ಹೊಡೆದ ಪರಿಣಾಮ ರಕ್ತಚಂದನ ದಂಧೆ ಬಹಿರಂಗಗೊಂಡಿದೆ. ಕೊನೆಗೆ ಹೊಸಕೋಟೆಯ ಕಟ್ಟಿಗೇನಹಳ್ಳಿ ಬಳಿ ವಾಹನ ಮತ್ತು ರಕ್ತ ಚಂದನವನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದು ಅಲ್ಲಿಂದ ಹೊಸಕೋಟೆ ಮಾಲೂರು ರಸ್ತೆಯ ಮೂಲಕ ನೆರೆಯ ಆಂಧ್ರದಿಂದ ಸಾಗಿಸಲು ಯತ್ನಿಸಿದ್ದಾರೆ.
ಅರಣ್ಯ ಇಲಾಖೆ ವಿಜಿಲೇನ್ಸ್ ಡಿಸಿಎಫ್ ಗಂಗಾಧರ್ ನೇತೃತ್ವದ ತಂಡ ದಾಳಿ ಮಾಡಿ 600 ಕೆಜಿಯ 28 ರಕ್ತ ಚಂದನ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 28 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಪ್ರಕಾರಣ ಭೇದಿಸಲು ಪೊಲೀಸರು ಸ್ನೀಪರ್ ಡಾಗ್ ಅನ್ನು ಬಳಕೆ ಮಾಡಿದ್ದು, ಅಕ್ರಮ ರಕ್ತಚಂದನ ಸಾಗಣಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.