ಬೆಂಗಳೂರು, ಜ,11- ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವುದು ರಾಮಮಂದಿರವಲ್ಲ, ರಾಷ್ಟ್ರಮಂದಿರ ಮತ್ತು ವಿಶ್ವ ಮಂದಿರವಾಗಿದೆ ಎಂದು ಹೇಳಿರುವ, ಉತ್ತರ ಪ್ರದೇಶದ ಆನಂದಧಾಮ್ ಪೀಠದ ಖ್ಯಾತ ಧಾರ್ಮಿಕ ಶಿಕ್ಷಕ, ಗುರೂಜಿ ರಿತೇಶ್ವರ್ ಜೀ ಮಹಾರಾಜ್ ಮುಂದಿನ 442 ದಿನಗಳಲ್ಲಿ ಮಥುರೆಯಲ್ಲಿ ಕೃಷ್ಣ ಮಂದಿರ ತಲೆ ಎತ್ತಲಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಥುರೆಯಲ್ಲಿ ಕೃಷ್ಣ ಮಂದಿರ ನಿರ್ಮಾಣ ಕೋಟ್ಯಾಂತರ ಭಾರತೀಯರ ಕನಸು. ಇದು ನನಸಾಗುವ ಕಾಲ ಇನ್ನೂ ದೂರವಿಲ್ಲ ಎಂದು ಹೇಳಿದರು.
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವಿರೋಧಿಸುವುದು ಅಪ ಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಉತ್ತರ ಪ್ರದೇಶದ ಆನಂದಧಾಮ್ ಪೀಠದ ಖ್ಯಾತ ಧಾರ್ಮಿಕ ಶಿಕ್ಷಕ, ಗುರೂಜಿ ರಿತೇಶ್ವರ್ ಜೀ ಮಹಾರಾಜ್ ತಿಳಿಸಿದ್ದಾರೆ.
ರಾಮಮಂದಿರವು ಭಾರತದ ದೇಶದ ಆತ್ಮವಾಗಿದ್ದು, ಸಮಸ್ತ ಭಾರತೀಯರ ಹೆಮ್ಮೆಯಾಗಿದೆ,ಇಂತಹ ಸನ್ನಿವೇಶದಲ್ಲಿ ಮರ್ಯಾದ ಪುರುಷೋತ್ತಮನ ಪ್ರತಿಷ್ಠಾಪನೆ ವಿರೋಧಿಸುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ
ದೇಶದ ಹಲವೆಡೆ ರಾಮನ ಕುರಿತು ಹಲವು ರೀತಿಯಲ್ಲಿ ಟೀಕೆಗಳನ್ನು ಮಾಡುತ್ತಿರುವುದು ರಾಮಭಕ್ತರಿಗೆ ಆಘಾತ ಉಂಟು ಮಾಡಲಾಗಿದೆ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿದ್ದು ಇದನ್ನು ಉಗ್ರವಾಗಿ ಖಂಡಿಸಲಾಗುವುದು ಎಂದು ತಿಳಿಸಿದರು.
ಸನಾತನ ಧರ್ಮ ಶ್ರೀರಾಮಚಂದ್ರನ ಆದರ್ಶಗಳಿಂದ ತುಂಬಿದೆ. ರಾಮಾಯಣದ ವೇಳೆಯೂ ಅಸುರರಂತೆ ಕೆಲಸ ಮಾಡಿದ್ದ ಸಂತತಿ ಈಗಲೂ ಮುಂದುವರೆದಿದೆ. ಇಂತಹ ಟೀಕೆ, ಟಿಪ್ಪಣಿಗಳನ್ನು ಕೈಬಿಟ್ಟು,ರಾಮಲಲ್ಲಾ ನ ಪ್ರತಿಷ್ಠಾಪನೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ಹಲವು ಹಂತಗಳಲ್ಲಿ Electionಗಳು ನಿರಂತರವಾಗಿ ನಡೆಯತ್ತವೆ. ಇದೇ ರೀತಿ ಸದ್ಯದಲ್ಲಿಯೇ ಲೋಕಸಭಾ ಚುನಾವಣೆಯೂ ಎದುರಾಗಲಿದೆ. ಇದು ಕೂಡ ಉತ್ತಮ ಬೆಳವಣಿಗೆಯಲ್ಲವೇ?. ರಾಷ್ಟ್ರೀಯ ವಾದ, ಸಾಂಸ್ಕೃತಿಕ ಮೌಲ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಯುಳ್ಳ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ತಪ್ಪೇನು? ಎಂದು ಪ್ರಶ್ನಿಸಿದರು.
ಇದು ಕೇವಲ ರಾಮಮಂದಿರವಲ್ಲ, ರಾಷ್ಟ್ರಮಂದಿರ ಮತ್ತು ವಿಶ್ವ ಮಂದಿರವಾಗಿದೆ. ಇದು ಎಲ್ಲರನ್ನು ಒಳಗೊಳ್ಳಗೊಳ್ಳುವ ಮಂದಿರವಾಗಿದೆ. ಪ್ರತಿಯೊಬ್ಬರಿಗೂ ಮಂದಿರ ಉದ್ಘಾಟನೆಗೆ ಆಹ್ವಾನವಿದೆ. ಹೆಚ್ಚಿನ ಪ್ರಮಾಣದ ಮುಸ್ಲಿಂ ಸಮುದಾಯದ ಜನ, ಸಾಹಿತಿಗಳು ಕೂಡ ಮಂದಿರ ನಿರ್ಮಾಣವನ್ನು ಸ್ವಾಗತಿಸಿದ್ದಾರೆ. ಕವಿತೆ, ಲೇಖನ ಬರೆದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯೇತರ ಸಮಾರಂಭ. ದೇಶ – ವಿದೇಶಗಳ ಜನತೆ ಮಂದಿರ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಮಂದಿರ ವಿಚಾರದಲ್ಲಿ ರಾಜಕಾರಣ ಸಲ್ಲದು ಎಂದು ಪ್ರತಿಪಾದಿಸಿದರು.