ಬೆಂಗಳೂರು, ಮಾ.6- ಮುಜರಾಯಿ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಸಚಿವ ರಾಮಲಿಂಗಾರೆಡ್ಡಿ ಹಲವಾರು ಕ್ರಾಂತಿಕಾರಕ ನಿರ್ಧಾರ ಕೈಗೊಂಡಿದ್ದಾರೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ ಕೋರಿ ಕೆಲವು ವರ್ಷಗಳಿಂದ ಹಲವಾರು ಧಾರ್ಮಿಕ ಸಂಸ್ಥೆಗಳು ಮನವಿ ಸಲ್ಲಿಸಿದ್ದವು.ಆದರೆ ಯಾವುದೇ ಪ್ರಸ್ತಾವನೆಗಳಿಗೆ ಹಿಂದಿನ ಸರ್ಕಾರ ಅನುಮೋದನೆ ನೀಡಿರಲಿಲ್ಲ.
ಇದೀಗ ರಾಮಲಿಂಗಾರೆಡ್ಡಿ (Ramalinga Reddy) ಅವರು ಇಲಾಖೆಯ ಮಂತ್ರಿಯಾದ ನಂತರ ಈ ರೀತಿಯ ಮನವಿ ಸಲ್ಲಿಸಿದ ಸಂಸ್ಥೆಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ದೇವಾಲಯ ಪುನರುಜ್ಜೀವನ,ಸಮುದಾಯ ಭವನಗಳ ನಿರ್ಮಾಣ, ಆಧುನೀಕರಣಕ್ಕಾಗಿ ನೆರವು ಕೋರಿದ
ರಾಜ್ಯದ 137 ಧಾರ್ಮಿಕ ಸಂಸ್ಥೆಗಳಿಗೆ 786.50 ಲಕ್ಷ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಧಾರ್ಮಿಕ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಸೃಷ್ಟಿ ವಸತಿ ವ್ಯವಸ್ಥೆ ಶೌಚಾಲಯ ನಿರ್ಮಾಣ ಮೊದಲಾದ ಕಾಮಗಾರಿಗಳಿಗಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಆಯುಕ್ತರಿಗೆ ಷರತ್ತುಗೊಳಪಟ್ಟು ಅನುದಾನ ಬಿಡುಗಡೆ ಮಾಡಲು ಮಂಜೂರಾತಿ ನೀಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ವಿವಿಧ ಗಣ್ಯರು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳಿಂದ ಅನುದಾನ ಕೋರಿ ಸ್ವೀಕೃತವಾದ ಪ್ರಸ್ತಾವನೆಗಳನ್ನು ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯ ಮೇರೆಗೆ
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪರಿಶೀಲಿಸಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ದುರಸ್ಥಿ, ಜೀರ್ಣೋದ್ಧಾರ, ನಿರ್ಮಾಣ ಯೋಜನೆಯಡಿಯಲ್ಲಿ ವಿವಿಧ ಜಿಲ್ಲೆಗಳ ದೇವಸ್ಥಾನ, ಮಠ, ಸಂಘ ಸಂಸ್ಥೆಗಳ ದುರಸ್ಥಿ, ಜೀರ್ಣೋದ್ಧಾರ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಯುಕ್ತರು ಕೋರಿದ್ದರು.
ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕೆಲವು ಷರತ್ತುಗಳನ್ನ ವಿಸಿ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಧಾರ್ಮಿಕ ಸಂಸ್ಥೆಗಳಿಗೆ ಮಂಜೂರು ಮಾಡಲಾದ ಅನುದಾನವನ್ನು ಖಜಾನೆ-2 ರ ಮೂಲಕ ಜಿಲ್ಲಾಕಾರಿಗಳ ಡಿಡಿಓ ಸಂಕೇತಕ್ಕೆ ಅಪ್ಲೋಡ್ ಮಾಡುವುದು, ಜಿಲ್ಲಾಕಾರಿಗಳು ನಿಯಮಾನುಸಾರ ಈ ಅನುದಾನವನ್ನು ಡ್ರಾ ಮಾಡಲು ಕ್ರಮ ವಹಿಸಬೇಕು ಎಂದು ಸೂಚಿಸಿದೆ.
ಅನುದಾನ ಬಿಡುಗಡೆ ಮಾಡಿರುವ ಸಂಸ್ಥೆಯು ನಿಯಮಾನುಸಾರ ನೀಡಬಹುದಾದ ಮೊತ್ತವನ್ನು ಮುಂಗಡ ರಸೀದಿ ಪಡೆದು ಬಿಲ್ ಪಾವತಿಸಬೇಕು ಎಂಬುದು ಸೇರಿದಂತೆ ಕೆಲವು ಷರತ್ತುಗಳನ್ನು ಆದೇಶದಲ್ಲಿ ವಿಸಲಾಗಿದೆ. 2 ಲಕ್ಷದಿಂದ 50 ಲಕ್ಷ ರೂ.ವರೆಗೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.


2 Comments
L’emozione ГЁ reale su Betano. Rivendica il 100% fino a €500 https://betanogame.org/it/ ed esplora la nostra enorme libreria di giochi. Croupier live, scommesse sportive e jackpot enormi ti aspettano. Unisciti al divertimento ora.
No Mostbet a sorte encontra quem sabe aproveitar as melhores condiГ§Гµes – https://mostbetpt.pro/mostbet-app/ , Entre no Mostbet e aproveite um comeГ§o de jogador VIP .