ಬೆಂಗಳೂರು, ಮಾ.30 – ರಾಜಧಾನಿ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸ್ಫೋಟಿಸಿದ ಬಾಂಬ್ ತಯಾರಿಸಲು ದುಷ್ಕರ್ಮಿಗಳು ಸುಮಾರು 2 ತಿಂಗಳು ಸಮಯ ತೆಗೆದುಕೊಂಡಿದ್ದು ಕೇವಲ ಐದು ಸಾವಿರ ವೆಚ್ಚದಲ್ಲಿ ಸ್ಪೋಟಕ ತಯಾರಿಸಿದ್ದರು ಎಂಬುದು ಎನ್ಐಎ ತನಿಖೆಯಲ್ಲಿ ತಿಳಿದುಬಂದಿದೆ.
ಈ ಶಂಕಿತ ಉಗ್ರರು ಬಾಂಬ್ ತಯಾರಿಸಲು ಬೇಕಾದ ಕೆಲವು ಕಚ್ಚಾವಸ್ತುಗಳನ್ನು ಆನ್ ಲೈನ್ ಮೂಲಕ ಹಾಗೂ ಮತ್ತೆ ಕೆಲವು ಸಾಮಗ್ರಿಗಳನ್ನು ಬೆಂಗಳೂರಿನ ವಿವಿಧ ಅಂಗಡಿಗಳಲ್ಲಿ ಖರೀದಿಸಿರುವುದು ಗೊತ್ತಾಗಿದೆ.
ಸ್ಪೋಟಕ ತಯಾರಿಸಲು ಆನ್ ಲೈನ್ ನಲ್ಲಿ ಡೆಟೋನೇಟರ್, ಬ್ಯಾಟರಿ, ಟೈಮರ್, ರಂಜಕ ಹಾಗೂ ಹಾರ್ಡ್ ವೇರ್ ಅಂಗಡಿಗಳಲ್ಲಿ ನಟ್ಟು, ಬೋಲ್ಟ್, ಕೆಲವು ವೈರುಗಳನ್ನು ಖರೀದಿಸಿರುವುದನ್ನು ಎನ್ಐಎ ಪತ್ತೆಹಚ್ಚಿದೆ.
ಆನ್ ಲೈನ್ ಹಾಗೂ ಅಂಗಡಿಗಳಲ್ಲಿ ಖರೀದಿಸಿದ ಈ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ, ಶಂಕಿತ ಉಗ್ರರು ನಗರ ಹೊರವಲಯದಲ್ಲಿ ಬಾಂಬ್ ಸಿದ್ಧ ಪಡಿಸಿದ್ದರು ಎಂಬುದನ್ನು ಎನ್ಐಎ ಪತ್ತೆ ಹಚ್ಚಿದೆ.ಈ ಬಾಂಬ್ ತಯಾರಿಸಲು ಶಂಕಿತ ಉಗ್ರರು ಕೇವಲ ಐದರಿಂದ ಆರು ಸಾವಿರ ರೂ. ಮಾತ್ರ ವೆಚ್ಚ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಕೆಫೆ ಸ್ಫೋಟದ ಬಗ್ಗೆ ಎನ್ಐಎ ಈಗಾಗಲೇ ಬಂಧಿಸಿರುವ ಮುಜಾಮಿಲ್ ಶರೀಫ್ ಈ ಎಲ್ಲಾ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಿ ಬಾಂಬ್ ತಯಾರಿಸಿ,ಅವುಗಳನ್ನು ಅಬ್ದುಲ್ ಮತಿನ್ ತಾಹ ಹಾಗೂ ಪ್ರಮುಖ ಆರೋಪಿ ಮುಸಾವೀರ್ ಗೆ ನೀಡುತ್ತಿದ್ದನು ಎಂಬುದು ತನಿಖೆಯಿಂದ ಗೊತ್ತಾಗಿದೆ.

1 Comment
WOW Vegas is a exceptionally rated free-play platform with thousands of slots and strong contestant rewards programs. Proper and secure, it lets users make use of wowvegasus vibes while collecting Sweepstakes Coins suited for likely actual rewards.