ಬೆಂಗಳೂರು, ಜ.20 : ಸೋಮವಾರ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ, ಬೆಂಗಳೂರು ದಕ್ಷಿಣ (Bengaluru South) ಲೋಕಸಭಾ ಕ್ಷೇತ್ರದಲ್ಲಿ ಹತ್ತು ಹಲವು ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಲಕ್ಷ ದೀಪೋತ್ಸವ, ಭಜನೆ, ಮಕ್ಕಳಿಗೆ ರಾಮ, ಸೀತೆ, ಲಕ್ಷ್ಮಣ , ಹನುಮಾನ್ ವೇಷಭೂಷಣ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ತೇಜಸ್ವೀ ಸೂರ್ಯ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಪದ್ಮನಾಭ ನಗರದ ಕಾರ್ಮೆಲ್ ಸ್ಕೂಲ್ ಮೈದಾನದಲ್ಲಿ, ಶಾಸಕರಾದ ಶ್ರೀ ಆರ್ ಅಶೋಕ್ & ಸಂಸದ ಶ್ರೀ ತೇಜಸ್ವೀ ಸೂರ್ಯ ರವರ ನೇತೃತ್ವದಲ್ಲಿ, ಸೋಮವಾರ ಸಂಜೆ 5 ಗಂಟೆಯಿಂದ ಖ್ಯಾತ ಗಾಯಕರಾದ ಶ್ರೀ ವಿಜಯ್ ಪ್ರಕಾಶ್, ಶ್ರೀ ಅರುಣ್ ಡಿ ರಾವ್, ಶ್ರೀ ಸಿದ್ಧಾರ್ಥ ಬೆಳ್ಮಣ್ಣು ರವರಿಂದ ಭಜನೆ & ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
500ಕ್ಕೂ ಅಧಿಕ ಮಕ್ಕಳು, ರಾಮ, ಸೀತೆ, ಲಕ್ಷ್ಮಣ & ಹನುಮಂತ ವೇಷಧಾರಿಯಾಗಿ ನೃತ್ಯ ಮಾಡಲಿರುವುದು ವಿಶೇಷ.
ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡು ಮಾತನಾಡಿದ ಸಂಸದ ಸೂರ್ಯ ರವರು, ” ಶ್ರೀರಾಮನ ಪುನರಾಗಮನಕ್ಕೆ 500 ವರ್ಷಗಳ ಕಾಯುವಿಕೆಯ ನಂತರ ಜನವರಿ 22ರಂದು ಇಡೀ ದೇಶ ಸಂಭ್ರಮದ ವಾತಾವರಣದಲ್ಲಿದೆ. ಹಲವಾರು ಕರಸೇವಕರ ತ್ಯಾಗ, ಬಲಿದಾನ, ರಾಮನ ಎಡೆಗಿನ ಅಚಲ ಶೃದ್ಧೆ, ಕಾಯುವಿಕೆಗೆ ಜನವರಿ 22ರ ಸೋಮವಾರದಂದು ಭವ್ಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಈ ಐತಿಹಾಸಿಕ ಘಳಿಗೆಯಲ್ಲಿ ಇಡೀ ಭಾರತ ಹಬ್ಬದ ಖುಷಿಯಲ್ಲಿ ಇದೆ. ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣದ ಅನೇಕ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿವೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ರವರ ಸಲಹೆಯಂತೆ ಇಲ್ಲಿನ ಹ
ಲವಾರು ದೇವಾಲಯಗಳಲ್ಲಿ ಸ್ವಚ್ಚ ತೀರ್ಥ ಅಭಿಯಾನವನ್ನು ಕೂಡ ಹಮ್ಮಿಕೊಳ್ಳಲಾಗಿದೆ” ಎಂದು ವಿವರಿಸಿದರು.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಾಮ, ಲಕ್ಷ್ಮಣ, ಸೀತೆ, ಹನುಮಾನ್ ವೇಷಭೂಷಣಗಳನ್ನು ಹಾಕಿಸಿಕೊಂಡು ಬರುವಂತೆ ಸಾರ್ವಜನಿಕರಲ್ಲಿ ಮನವಿ ಕೂಡ ಮಾಡಲಾಗಿದ್ದು, ಕಾರ್ಯಕ್ರಮದ ಬಹುಮುಖ್ಯ ಆಕರ್ಷಣೆಯಾಗಿ ನೂರಾರು ಬಾಲ ರಾಮರಿಗೆ ಆರತಿ ಬೆಳಗುವ ಮೂಲಕ ಶ್ರೀರಾಮನನ್ನು ಸ್ವಾಗತಿಸುವ ಕಾರ್ಯ ಕೂಡ ನಡೆಯಲಿದೆ.
ಜನವರಿ 22ರ ಸಂಜೆ 5 ಘಂಟೆಯಿಂದ 8.30ರ ವರೆಗೆ ಕರ್ನಾಟಕದ ಖ್ಯಾತ ಗಾಯಕರಾದ ಶ್ರೀ ವಿಜಯ್ ಪ್ರಕಾಶ್ & ಇತರರಿಂದ ಶ್ರೀರಾಮ ಸಂಕೀರ್ತನೆ, ಭಜನೆ ಕೂಡ ನಡೆಯಲಿದೆ. ನಂತರ ಲಕ್ಷ ದೀಪೋತ್ಸವ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಇದೇ ಸಂದರ್ಭದಲ್ಲಿ ಮಾನ್ಯ ಸಂಸದ ಸೂರ್ಯ ರವರು ಮನವಿ ಮಾಡಿದ್ದು ವಿಶೇಷ.
ನಾವು ಬದುಕಿದ್ದ ಅವಧಿಯಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಜೀವಮಾನದಲ್ಲಿ ಒಮ್ಮೆ ಸಿಗುವ ಇಂತಹ ಅವಕಾಶವನ್ನು ಅತ್ಯಂತ ಸಂಭ್ರಮ, ವಿಜೃಂಭಣೆಯಿಂದ ಆಚರಿಸಲು ಸಾರ್ವಜನಿಕರಿಗೆ ಸಂಸದ ಸೂರ್ಯ ರವರು ಕರೆ ನೀಡಿರುತ್ತಾರೆ.
5 Comments
онлайн гадание индийский пасьянс онлайн гадание индийский пасьянс .
автоматические карнизы http://www.provorota.su/ .
вывод из запоя в стационаре воронежа https://www.vyvod-iz-zapoya-v-stacionare-voronezh.ru .
вывод из запоя на дому санкт петербург вывод из запоя на дому санкт петербург .
снятие ломки нарколог снятие ломки нарколог .