ಬೆಂಗಳೂರು – ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇದೀಗ ಸ್ಯಾಂಡಲ್ ವುಡ್ ಮಾತ್ರವಲ್ಲ ಸೌತ್ ಇಂಡಿಯಾ ಸಿನಿಮಾದ ಹಾಟ್ ಕೇಕ್.ಈಕೆಯ ಝಲಕ್ ಗೆ ಅಭಿಮಾನಿಗಳು ಪುಲ್ ಫಿದಾ ಆಗುತ್ತಿದ್ದಾರೆ.
ಸಿನಿಮಾದಲ್ಲಿ ಈಕೆ ಕಾಣಿಸಿಕೊಂಡಿದ್ದಾರೆ ಎಂದರೆ ಸಾಕು ಸಿನಿಮಾ ಮಿನಿಮಮ್ ಗ್ಯಾರಂಟಿ ಎಂಬ ಮಾತಿದೆ ಹೀಗಾಗಿ ನಿರ್ಮಾಪಕರು ರಶ್ಮಿಕಾ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ.
ಹೀಗಾಗಿ ರಶ್ಮಿಕಾ ಡಿಮಾಂಡ್ ದಿನೆ ದಿನೇ ಹೆಚ್ಚುತ್ತಾ ಸಾಗಿದೆ.ಜೊತೆಗೆ ಆಕೆಯ ಸಂಭಾವನೆ ಕೂಡಾ ಸಿನಿಮಾದಿಂದ ಸಿನಿಮಾಕ್ಕೆ ಬೆಳೆಯುತ್ತಾ ಸಾಗಿದೆ.
ಟಾಲಿವುಡ್ ಮೂಲಗಳ ಪ್ರಕಾರ ಆಕೆ ಸಿನಿಮಾವೊಂದರಲ್ಲಿ ಕಾಣಿಸಿಕೊಂಡ ಐದು ನಿಮಿಷದ ಪಾತ್ರಕ್ಕೆ ಆಕೆ ಪಡೆದ ಸಂಭಾವನೆ ಎಲ್ಲರನ್ನೂ ಬೆಚ್ಚುವಂತೆ ಮಾಡಿದೆ.ಅದೂ ಒಂದು ಐಟಂ ಸಾಂಗ್ ಗಾಗಿ ನಾಯಕಿಯಾಗಿ ನಟಿಸುತ್ತಿರುವಾಗಲೇ ಐಟಂ ಹಾಡಿಗೆ ಕುಣಿದವರಲ್ಲಿ ರಶ್ಮಿಕಾ ಮೊದಲಿಗರೇನೂ ಅಲ್ಲ. ನಾಯಕ ನಟಿಯರು ಐಟಂ ಹಾಡುಗಳಿಗೆ ಸೊಂಟ ಕುಣಿಸುವುದು ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದೆ. ಬಾಲಿವುಡ್‌ನಲ್ಲಿದ್ದ ಈ ಸಂಪ್ರದಾಯ ಕೆಲ ವರ್ಷಗಳಿಂದ ದಕ್ಷಿಣ ಚಿತ್ರರಂಗದಲ್ಲಿಯೂ ಕಾಣಿಸಿಕೊಂಡಿದೆ.
ಬಹು ಬೇಡಿಕೆಯ ನಟಿಯರಾದ ತಮನ್ನಾ, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್, ಪೂಜಾ ಹೆಗ್ಡೆ ಸೇರಿದಂತೆ ಇನ್ನೂ ಹಲವರು ಐಟಂ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ.
ನಟಿ ಸಮಂತಾ, ‘ಪುಷ್ಪ’ ಸಿನಿಮಾದಲ್ಲಿ ಮಾಡಿದ್ದ ಐಟಂ ಹಾಡು ಭಾರಿ ಹಿಟ್ ಆಗಿತ್ತು. ಆ ಹಾಡಿಗೆ ಸಮಂತಾ ಪಡೆದಿದ್ದ ಸಂಭಾವನೆಯೂ ಭಾರಿ ಸದ್ದು ಮಾಡಿತ್ತು.
ಇದೇ ಮಾದರಿಯಲ್ಲಿ ಇದೀಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟಿಸುತ್ತಿರುವ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಐಟಂ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ.
ಮಹೇಶ್ ಬಾಬು ನಟನೆಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣ ಈಗ ಐಟಂ ಹಾಡಿಗೆ ಮಹೇಶ್ ಬಾಬು ಜೊತೆ ಹೆಜ್ಜೆ ಹಾಕಲಿದ್ದಾರೆ. ಆದರೆ ಐದು ನಿಮಿಷದ ಈ ಹಾಡಿಗೆ ರಶ್ಮಿಕಾ ಮಂದಣ್ಣಗೆ ಭಾರಿ ಸಂಭಾವನೆಯನ್ನೇ ನೀಡಲಾಗುತ್ತಿದೆಯಂತೆ. ಅದೇ ಕಾರಣಕ್ಕೆ ರಶ್ಮಿಕಾ ಐಟಂ ಹಾಡಿಗೆ ಕುಣಿಯಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ.
ರಶ್ಮಿಕಾ ಮಂದಣ್ಣ, ಐಟಂ ಹಾಡಿಗೆ ಹೆಜ್ಜೆ ಹಾಕಲು ಬರೋಬ್ಬರಿ ಐದು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದೆರಡು ದಿನದ ರಿಹರ್ಸಲ್ ಹಾಗೂ ಒಂದೆರಡು ದಿನದ ಚಿತ್ರೀಕರಣಕ್ಕೆ ರಶ್ಮಿಕಾ ಇಷ್ಟೋಂದು ದುಬಾರಿ ಮೊತ್ತವನ್ನು ಪಡೆಯುತ್ತಿದ್ದಾರೆ. ದುಬಾರಿ ಸಂಭಾವನೆ ಕಾರಣದಿಂದಲೇ ರಶ್ಮಿಕಾ, ಐಟಂ ಹಾಡಿನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.
Previous ArticleBharat Jodo ಯಾತ್ರೆ ನಿಲ್ಲಿಸಲು ಕೇಂದ್ರ ಸೂಚನೆ
Next Article ಜನವರಿ 6ಕ್ಕೆ ಥಗ್ಸ್ ಆಫ್ ರಾಮಘಡ