ಬೆಂಗಳೂರು, ಫೆ. 9-
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ಪ್ರಮಾಣ ಹೆಚ್ಚಿಸಿ ಈಗಾಗಲೇ ತೆಗೆದುಕೊಂಡ ನಿರ್ಣಯವನ್ನು ಸಂವಿಧಾನದ ಷೆಡ್ಯೂಲ್ 9 (Ninth schedule) ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸಭೆಯ ವಿವರಗಳನ್ನು ನೀಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ (J C Madhuswamy) ರಾಜ್ಯ ಸರ್ಕಾರದ ಪ್ರಸ್ತಾವನೆ ಸಂವಿಧಾನದ ಷೆಡ್ಯೂಲ್ ನಲ್ಲಿ ಸೇರ್ಪಡೆಯಾದರೆ, ಉದ್ಯೋಗ ಮತ್ತು ಶಿಕ್ಷಣ ದಲ್ಲಿ ಒಟ್ಟು ಮೀಸಲಾತಿ ಪ್ರಮಾಣವನ್ನು ಪ.ಜಾತಿಗೆ ಶೇ 15 ರಿಂದ ಶೇ 17, ಪ.ವರ್ಗಕ್ಕೆ ಶೇ 3 ರಿಂದ ಶೇ 7ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ರಾಜ್ಯದ ಸರ್ಕಾರಿ ITI ಗಳನ್ನು ಟಾಟಾ (TATA) ಸಂಸ್ಥೆಯ ಸಹಭಾಗಿತ್ವದಲ್ಲಿ ಉನ್ನತೀಕರಣಗೊಳಿಸಲು ಸಂಪುಟ ಅನುಮೋದನೆ ನೀಡಿದೆ. 155 ಸರ್ಕಾರಿ ITI ಗಳ ಪೈಕಿ 3೦ ITI ಗಳನ್ನು 972 ಕೋಟಿ ರೂಪಾಯಿ ವೆಚ್ಚದಲ್ಲಿ ಉನ್ನತೀಕರಿಸಲಾಗುವುದು. ಇದರಲ್ಲಿ 816 ಕೋಟಿ ರೂಪಾಯಿಗಳನ್ನು ಸಂಸ್ಥೆ ಭರಿಸಲಿದೆ ಉಳಿದ 111 ಕೋಟಿ ರೂ.ಗಳನ್ನು ಸರ್ಕಾರ ಭರಿಸಲಿದೆ. ಪ್ರತಿ ITI ಗಳನ್ನು 72 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದೆ ಎಂದರು.
ಹಾವೇರಿ ಜಿಲ್ಲೆಯ ಹಿರೆಕೆರೂರಿನ ಸರ್ವಜ್ಞ ಪ್ರಾಧಿಕಾರದ ವತಿಯಿಂದ ಹಾವೇರಿ, ಹಿರೆಕೆರೂರು, ಮಾಸೂರು, ಅಬಲೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು 25 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.
ಸಂಪುಟ ಸಭೆಯ ಇತರೆ ನಿರ್ಣಯಗಳು :
- ಚಾಮರಾಜನಗರ ಜಿಲ್ಲೆಯ 166 ಗ್ರಾಮಗಳಿಗೆ ಜಲ ಜೀವನ್ ಮಿಷನ್ (Jal Jeevan Mission) ಯೋಜನೆಯಡಿ ಕುಡಿಯುವ ನೀರು ಒದಗಿಸಲು 26 ಕೋಟಿ ರೂ. ವೆಚ್ಚದ ಯೋಜನೆ
- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರದ 15 ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಒದಗಿಸಲು 28 ಕೋಟಿ ರೂ. ಯೋಜನೆ
- ಉತ್ತರ ಕನ್ನಡದ ಯಲ್ಲಾಪುರ ಹೋಬಳಿಯಲ್ಲಿ ಬಡುಕಟ್ಟು ಜನರಿಗೆ ವನವಾಸಿ ಶಾಲೆಗಾಗಿ 1 ಎಕರೆ ಜಮೀನನ್ನು ಮಂಜೂರು
- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೈನಾಪುರ ಸೇರಿದಂತೆ 12 ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರುವ ಒದಗಿಸುವ 32 ಕೋಟಿ ರೂ.ಯೋಜನೆ
- ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ಪೊಲೀಸ್ ವಸತಿ ಸಂಕೀರ್ಣ ನಿರ್ಮಾಣದ 12 ಕೋಟಿ ರೂ. ವೆಚ್ಚದ ಯೋಜನೆ
- ಕಲಬುರುಗಿಯಲ್ಲಿ ಪಿಪಿ ಮಾದರಿಯಲ್ಲಿ ಬಸ್ ಸ್ಟ್ಯಾಂಡ್ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ
- ಲೋಕಸೇವಾ ಆಯೋದಗದಲ್ಲಿ ಖಾಲಿ ಇರುವ ಒಬ್ಬ ಸದಸ್ಯರನ್ನು ಭರ್ತಿ ಮಾಡುವ ಅಧಿಕಾರವನ್ನು ಸಂಪುಟ ಸಭೆ ಮುಖ್ಯಂತ್ರಿಗಳಿಗೆ ನೀಡಿದೆ
- ಗದಗ್ ಜಿಲ್ಲೆಯಲ್ಲಿ ವೀರರಾಣಿ ಚನ್ನಮ್ಮ ಹೆಸರಿನ ಸಮುದಾಯ ಭವನ ನಿರ್ಮಾಣಕ್ಕೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ನರಗುಂದ ಇವರಿಗೆ ಎರಡು ಎಕರೆ ಜಮೀನು ಮಂಜೂರು
- ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರ ಸೇರಿದಂತೆ 363 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ 350 ಕೋಟಿ ರೂ. ವೆಚ್ಚದ ಯೋಜನೆ
- ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ತಾಲ್ಲೂಕು ಆಸ್ಪತ್ರೆಯನ್ನು 100 ಹಾಸಿಗೆಯಿಂದ 2೦೦ ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ ನೀಡಿದ್ದು, ಇದಕ್ಕೆ 23 ಕೋಟಿ ರೂ.ಗಳ ಬಿಡುಗಡೆ
- ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ 3೦೦ ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಉಪಕರಣಗಳನ್ನು ಖರೀದಿಸಲು 24 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ
- ರಾಯಚೂರಿನ ಹಗರಬೊಮ್ಮನಹಳ್ಳಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕೃಷಿ ಕಾಲೇಜು ಸ್ಥಾಪಿಸಲು ಸಂಪುಟ ಅನುಮೋದನೆ
- ಸೊರಬ ತಾಲ್ಲೂಕಿನಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳನ್ನು ಒಂದೆ ಸೂರಿನಡಿ ತರಲು 18 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸುವ 49.66 ಕೋಟಿ ರೂ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ
- ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಸರ್ಕಾರಿ ಟೂಲ್ ರೂಂ ಸ್ಥಾಪಿಸುವ 73.75 ಕೋಟಿ ರೂ. ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ.
- ನೆಲಗಾಳದಲ್ಲಿರುವ ಟೂಲ್ ರೂಂನ್ನು 37.55 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜಗೇರಿಸುವ ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ ಎಂದರು


1 Comment
скачать бк мелбет
Установить Melbet: APK, iOS и ПК
Мобильная версия Melbet включает ставки и казино в едином приложении. Пользователю доступны live-ставки, казино-игры, онлайн-трансляции, аналитика и операции по счёту. Установка занимает несколько минут.
Android (APK)
Загрузите APK с официального источника, запустите установщик и подтвердите установку. Если требуется включите доступ к установке сторонних приложений, затем авторизуйтесь.
iOS (iPhone)
Перейдите в App Store, введите в поиске «Melbet», выберите «Получить», после установки выполните вход.
ПК
Перейдите официальный сайт, войдите в личный кабинет и добавьте ярлык на рабочий стол. Браузерная версия функционирует как отдельное приложение.
Функционал
Live-ставки с мгновенным обновлением линии, казино и слоты, просмотр матчей, подробная статистика, уведомления о матчах, быстрая регистрация и поддержка 24/7.
Бонусы
После установки доступны приветственный бонус, промокоды и фрибеты. Правила начисления определяются регионом.
Безопасность
Скачивайте только с официального сайта, контролируйте адрес сайта, не сообщайте данные доступа третьим лицам и включите 2FA.
Установка занимает несколько минут, после чего доступен весь функционал Melbet.