Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದ್ವಿತೀಯ ಪಿಯುಸಿ ದಾಖಲೆಯ ಫಲಿತಾಂಶ | 2nd PUC
    Trending

    ದ್ವಿತೀಯ ಪಿಯುಸಿ ದಾಖಲೆಯ ಫಲಿತಾಂಶ | 2nd PUC

    vartha chakraBy vartha chakraApril 10, 2024No Comments2 Mins Read
    Facebook Twitter WhatsApp Pinterest LinkedIn Tumblr Email
    xr:d:DAFf3rfK_XU:1009,j:2942400908595263987,t:24041017
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಏ.10- ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವೆಂದೇ ಪರಿಗಣಿಸಲಾದ ದ್ವಿತೀಯ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ದಾಖಲೆಯ ಶೇಕಡಾ 81.15 ರಷ್ಟು ಫಲಿತಾಂಶ ಬಂದಿದ್ದು,ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರೇ (80.25%)ಮೇಲುಗೈ ಸಾಧಿಸಿದ್ದಾರೆ.
    ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಫಲಿತಾಂಶ ಏರಿಕೆಯಾಗಿದೆ.ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ.

    ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್. ಮಂಜುಶ್ರೀ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿ,ಈ ಬಾರಿ ರಾಜ್ಯದಾದ್ಯಂತ ಸುಮಾರು 1,124 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿತ್ತು. ಸುಮಾರು 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದರು.
    2023 ರಲ್ಲಿ 74.67 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ.6.4 ರಷ್ಟು ಏರಿಕೆಯಾಗಿದ್ದು, ದಾಖಲೆಯ 81.15 ರಷ್ಟು ಫಲಿತಾಂಶ ದಾಖಲಾಗಿರುವುದು ವರ್ಷದಿಂದ ವರ್ಷಕ್ಕೆ ಫಲಿತಾಂಶ ಏರಿಕೆಯಾಗುತ್ತಿರುವುದರ ಸಕಾರಾತ್ಮಕ ಬೆಳವಣಿಗೆಯಾಗಿದೆ.ಕಳೆದ ಮಾರ್ಚ್ 1 ರಿಂದ 27 ರವರೆಗೆ ರಾಜ್ಯದ 1,124 ಕೇಂದ್ರಗಳಲ್ಲಿ ನಡೆದ ದ್ವಿತೀಯ ಪಿಯುಸಿ-1 ರ ಪರೀಕ್ಷೆಗೆ ಒಟ್ಟು 6,81,079 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 5,22,690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ‌ ಎಂದು ವಿವರಿಸಿದರು.

    ಕಲಾ ವಿಭಾಗದಲ್ಲಿ 1,87,891 ಹಾಜರಾದ ವಿದ್ಯಾರ್ಥಿಗಳ ಪೈಕಿ 1,28,448 (68.36), ವಾಣಿಜ್ಯ ವಿಭಾಗದಲ್ಲಿ 2,15,357 ಹಾಜರಾದವರ ಪೈಕಿ 1,74,315 (80.94), ವಿಜ್ಞಾನ ವಿಭಾಗದಲ್ಲಿ 2,77,831 ಹಾಜರಾದವರ ಪೈಕಿ 249927 (89.96) ಫಲಿತಾಂಶ ಪ್ರಕಟಗೊಂಡಿದೆ.ಬಾಲಕರ ಪೈಕಿ ಪರೀಕ್ಷೆಗೆ 3,21,467 ಹಾಜರಾದವರ ಪೈಕಿ 2,47,478 (76.98), ಅದೇ ರೀತಿ ಬಾಲಕಿಯರಲ್ಲಿ 3,59,612 ವಿದ್ಯಾರ್ಥಿನಿಯರಲ್ಲಿ 3,05,212 (84.87) ಫಲಿತಾಂಶ ಹೊರಬಂದಿದೆ ಎಂದು ತಿಳಿಸಿದರು.
    ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ. ಗದಗ (72.86%) ಕೊನೆಯ ಸ್ಥಾನ ಪಡೆದಿದೆ.
    ಕಲಾ ವಿಭಾಗದಲ್ಲಿ ಬೆಂಗಳೂರಿನ ಎಂ ಎನ್‍ ಕೆ ಆರ್ ವಿ ಪಿಯು ಕಾಲೇಜಿನ ಮೇಧಾ ಡಿ. 596, ವಿಜಯಪುರದ ಎಸ್‍ಎಸ್ ಪಿಯು ಕಾಲೇಜಿನ ವೇದಾಂತ್ ಜಯನುಬಾನವಿ 596, ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಕೂಡ್ಲಗಿಯ ಇಂದು ಪಿಯು ಕಾಲೇಜಿನ ಕವಿತಾ ಬಿ.ವಿ. 596 ಅಂಕಗಳನ್ನು ಪಡೆದಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾಲಕ್ಷ್ಮಿ 598 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.
    ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ವಿದ್ಯಾನಿಕೇತನ ಪಿಯು ಕಾಲೇಜಿನ ಜ್ಞಾನವಿ ಎಂ. 597, ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಕುಮದ್ವತಿ ಕಾಲೇಜಿನ ಪವನ್ ಎಂ.ಎಸ್. 596, ಉಡುಪಿಯ ಪೂರ್ಣ ಪ್ರಜ್ಞಾ ಪಿಯು ಕಾಲೇಜಿನ ಹರ್ಷಿತಾ ಎಸ್.ಎಚ್. 596 ಅಂಕ ಪಡೆದಿದ್ದಾರೆ.
    ಈ ಬಾರಿ ಶೇ.85 ಅಥವಾ ಅದಕ್ಕಿಂತ ಹೆಚ್ಚಿನ ಅಂಗಳನ್ನು 1,53,370 ವಿದ್ಯಾರ್ಥಿಗಳು ಪಡೆದಿದ್ದರೆ ಶೇ.85 ಕ್ಕಿಂತ ಕಡಿಮೆ ಹಾಗೂ ಶೇ. 60 ಅಥವಾ ಶೇ.60 ಕ್ಕಿಂತ ಕಡಿಮೆ ಅಂಕವನ್ನು 2,89,733 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
    ಶೇ.60 ಕ್ಕಿಂತ ಕಡಿಮೆ, ಶೇ.50 ಅಥವಾ ಶೇ.50 ಕ್ಕಿಂತ ಹೆಚ್ಚು ಅಂಕಗಳನ್ನು 72,098, ಶೇ.50 ಕ್ಕಿಂತ ಕಡಿಮೆ ಅಂಕಗಳನ್ನು 37,489 ವಿದ್ಯಾರ್ಥಿಗಳು ಪಡೆದಿದ್ದಾರೆ.ಈ ಬಾರಿ ಅಚ್ಚರಿಯೆಂಬಂತೆ 91 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದ್ದರೆ, 2 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

    26 ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದ್ದರೆ, 6 ಕಾಲೇಜುಗಳಲ್ಲಿ ಶೂನ್ಯ, 345 ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.100 ರಷ್ಟು ಹಾಗೂ 26 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಹಾಗೂ ಒಂದು ವಿಭಜಿತ ಪದವಿ ಪೂರ್ವ ಕಾಲೇಜಿನಲ್ಲಿ ಶೇ.100 ರಷ್ಟು ಹಾಗೂ ಒಂದು ಕಾಲೇಜಿನಲ್ಲಿ ಶೂನ್ಯ ಫಲಿತಾಂಶ ಸೇರಿದಂತೆ ಒಟ್ಟು 463 ಕಾಲೇಜಿನಲ್ಲಿ ಶೇ.100 ರಷ್ಟು ಫಲಿತಾಂಶ ಮತ್ತು 35 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.

    Verbattle
    Verbattle
    Verbattle
    ಉಡುಪಿ ಕಾಲೇಜು ವಾಣಿಜ್ಯ ವಿದ್ಯಾರ್ಥಿ ಹುಬ್ಬಳ್ಳಿ
    Share. Facebook Twitter Pinterest LinkedIn Tumblr Email WhatsApp
    Previous Articleಸಿಕ್ಕೇ ಬಿಡ್ತು ಇಂಜಿನಿಯರ್ ನೇಮಕಾತಿ ಪಟ್ಟಿ | KPSC
    Next Article ಇವರೇ ನೋಡಿ ಪಿಯುಸಿ Toppers
    vartha chakra
    • Website

    Related Posts

    ಈಶ್ವರ ಖಂಡ್ರೆ ಅವರಿಗೆ ಹೊಸ ಜವಾಬ್ದಾರಿ

    January 22, 2026

    ಬಿಗ್‌ ಬಾಸ್‌ ಫಿನಾಲೆ ಎಂದರೆ ದೇಶದ ಅಧ್ಯಕ್ಷರ ಚುನಾವಣೆನಾ..?!

    January 18, 2026

    ದೆಹಲಿಯಲ್ಲಿ ದಟ್ಟ ಮಂಜು: ವಿಮಾನ, ರೈಲು ಸಂಚಾರ ಅಸ್ತವ್ಯಸ್ತ

    January 18, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Georgemen on ದಾಸನ ಕಂಡು ಕಣ್ಣೀರು ಹಾಕಿದ ಪವಿತ್ರಾ ಗೌಡ
    • RicardoCor on ಬಲೆಗೆ ಬಿದ್ದ ಡ್ರಗ್ ಫೆಡ್ಲರ್ ಗಳು
    • Daviddek on May 3, 2023 51st Year Free Mass Marriage at Sri Kshetra Dharmasthala
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    January 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    January 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.