ಬೆಂಗಳೂರು, ಸೆ.5 – ಪೊಲೀಸ್ (Karnataka State Police) ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ 35 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಈ ಮೂಲಕ ಬಹು ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಐಪಿಎಸ್ ಅಧಿಕಾರಿಗಳ ವರ್ಗಾವಣೆಯ ಸುದ್ದಿ ನೀಡಲಾಗಿದೆ.
ಕಳೆದ ಎರಡು ದಿನಗಳ ಹಿಂದೆ 2018, 2019 ಮತ್ತು 2020ರ ಬ್ಯಾಚ್‌ನ 10 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು ಇದರ ಬೆನ್ನಲ್ಲೇ ಇದೀಗ ಡಿಐಜಿಪಿ ಗಳು ಸೇರಿ 35 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.ಇನ್ನೆರಡು ದಿನಗಳಲ್ಲಿ ವರ್ಗಾವಣೆಗೊಂಡು ಖಾಲಿ ಇರುವ ಹುದ್ದೆಗಳಿಗೆ ಮತ್ತೆ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಲಾಗಿದ್ದು,ಆಯಕಟ್ಟಿನ ಹುದ್ದೆಗಳಿಗೆ ಭಾರಿ ಪೈಪೋಟಿ ನಡೆದಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ:
ಅನುಪಮ್ ಅಗರ್ವಾಲ್ – ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಎಸ್ ಡಿ ಶರಣಪ್ಪ ನಿರ್ದೇಶಕರು- ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು. ವರ್ತಿಕಾ ಕಟಿಯಾರ್ – ಎಸ್.ಪಿ ರಾಜ್ಯ ಅಪರಾಧ ದಾಖಲೆಗಳ ಘಟಕ.
ಎಸ್.ಗಿರೀಶ್- ಡಿಸಿಪಿ ಪಶ್ಚಿಮ ಬೆಂಗಳೂರು, ಸಂಜೀವ್ ಎಂ.ಪಾಟೀಲ್- ಡಿಸಿಪಿ ವೈಟ್ ಫೀಲ್ಡ್ ,ಕೆ.ಸಂತೋಷ್ ಬಾಬು – ಡಿಸಿಪಿ ಆಡಳಿತ ಬೆಂಗಳೂರು,ರಾಹುಲ್ ಕುಮಾರ್ ಶಹಾಪುರವಾಡ್- ಡಿಸಿಪಿ ದಕ್ಷಿಣ ವಿಭಾಗ ಬೆಂಗಳೂರು,ಡಿ.ದೇವರಾಜ್- ಡಿಸಿಪಿ ಪೂರ್ವ ಬೆಂಗಳೂರು,ಕಾರ್ತಿಕ್ ರೆಡ್ಡಿ- ಡಿಸಿಪಿ ಬೆಂಗಳೂರು ಸಂಚಾರ ದಕ್ಷಿಣ ವಿಭಾಗ ಅಬ್ದುಲ್ ಅಹದ್- ಡಿಸಿಪಿ ಬೆಂಗಳೂರು ಕೇಂದ್ರ ವಿಭಾಗ ಯತೀಶ್ ಚಂದ್ರ ಜಿ.ಹೆಚ್- ಎಸ್.ಪಿ- ಆಂತರಿಕ ಭದ್ರತಾ ವಿಭಾಗ ಡಾ.ಭೀಮಾ ಶಂಕರ ಗುಳೇದ್ – ಎಸ್‌ಪಿ, ಬೆಳಗಾವಿ,ನಿಕಂ ಪ್ರಕಾಶ್ ಅಮ್ರಿತ್- ಎಸ್ಪಿ ವೈರ್‌ಲೆಸ್,ಕೆ.ಪರಶುರಾಮ್- ಎಸ್.ಪಿ. ಇಂಟಲಿಜೆನ್ಸ್.ಹೆಚ್.ಡಿ ಆನಂದ್ ಕುಮಾರ್- ಎಸ್.ಪಿ, ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯ.
ಡಾ.ಸುಮನ್ ಡಿ. ಪೆನ್ನೇಕರ್- ಎಐಜಿಪಿ, ಹೆಡ್ ಕ್ವಾಟ್ವಾರ್ಸ್-1 ಡೆಕಾ ಕಿಶೋರ್ ಬಾಬು- ಎಸ್ಪಿ ಪ್ರಿನ್ಸಿಪಲ್, ಪೊಲೀಸ್ ತರಬೇತಿ ಕೇಂದ್ರ, ಕಲಬುರಗಿ, ಡಾ.ಕೋನಾ ವಂಶಿಕೃಷ್ಣ – ಡಿಸಿಪಿ, ಕಮಾಂಡ್ ಸೆಂಟರ್ ಬೆಂಗಳೂರು,ಲಕ್ಷ್ಮಣ್ ನಿಂಬರಗಿ- ಎಸ್ಪಿ, ರಾಜ್ಯ ಅಪರಾಧ ದಾಖಲೆಗಳ ಘಟಕ,ಡಾ.ಅರುಣ್.ಕೆ- ಎಸ್ಪಿ, ಉಡುಪಿ,ಮಹಮ್ಮದ್ ಸುಜೀತಾ.ಎಂ.ಎಸ್- ಎಸ್ಪಿ ಹಾಸನ,ಜಯಪ್ರಕಾಶ್- ಎಸ್ಪಿ ಇಂಟಲಿಜನ್ಸ್,ಶೇಖರ್.ಹೆಚ್. ತೆಕ್ಕನ್ನವರ್- ಡಿಸಿಪಿ, ಸಿಸಿಬಿ ಬೆಂಗಳೂರು,
ಸಾರಾ ಫಾತೀಮಾ- ಡಿಸಿಪಿ ಸಂಚಾರ ಪಶ್ಚಿಮ ವಿಭಾಗ ಬೆಂಗಳೂರು,ಸೋನಾವಾನೆ ರಿಷಿಕೇಶ್ ಭಗವಾನ್- ಎಸ್.ಪಿ ವಿಜಯಪುರ,ಲೋಕೇಶ್ ಭರಮಪ್ಪ ಜಗಲ್ಸರ್- ಎಸ್ಪಿ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು.
ಆರ್.ಶ್ರೀನಿವಾಸ್ ಗೌಡ- ಡಿಸಿಪಿ-2, ಸಿಸಿಬಿ ಬೆಂಗಳೂರು,ಪಿ.ಕೃಷ್ಣಕಾಂತ್- ಎಐಜಿಪಿ (ಆಡಳಿತ).ಅಮರನಾಥ್ ರೆಡ್ಡಿ.ವೈ- ಎಸ್ಪಿ ಬಾಗಲಕೋಟೆ,ಹರಿರಾಮ್ ಶಂಕರ್- ಎಸ್ಪಿ, ಇಂಟೆಲಿಜೆನ್ಸ್,ಅದ್ದೂರು ಶ್ರೀನಿವಾಸುಲು- ಎಸ್ಪಿ ಕಲಬುರಗಿ,
ಅನ್ಶು ಕುಮಾರ್ – ಎಸ್ಪಿ, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಉಡುಪಿ,ಕನ್ನಿಕಾ ಸಿಕ್ರಿವಾಲ್ – ಡಿಸಿಪಿ, ಕಾನೂನು ಸುವ್ಯವಸ್ಥೆ, ಕಲಬುರಗಿ,ಕುಶಾಲ್ ಚೌಕ್ಸಿ – ಜಂಟಿ ನಿರ್ದೇಶಕರು, ವಿಧಿ ವಿಜ್ಞಾನ ಪ್ರಯೋಗಾಲಯ ಬೆಂಗಳೂರು,ರವೀಂದ್ರ ಕಾಶಿನಾಥ್ ಗಡದಿ – ಎಸ್.ಪಿ ಇಂಟಲಿಜೆನ್ಸ್.