ಬೆಂಗಳೂರು,ಫೆ.11- ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಯಾವುದೇ ಭಯವಿಲ್ಲದೆ, ಹೆಲ್ಮಟ್ ಧರಿಸದೆ, ಸಿಗ್ನಲ್ ಜಂಪ್, ಒನ್ ವೇಯಲ್ಲಿ ಮೊಬೈಲ್ ಬಳಕೆ ಸೇರಿದಂತೆ ನಗರದಲ್ಲಿ 300ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಸ್ಕೂಟರ್ ಸವಾರನೊಬ್ಬನಿಗೆ 3.20 ಲಕ್ಷ ರೂ ದಂಡ ವಿಧಿಸಲಾಗಿದೆ.
ಸುಧಾಮನಗರದ ವೆಂಕಟರಾಮನ್ ಅವರ ಕೆಎ05ಕೆಎಫ್ 7969 ನಂಬರಿನ ಆಕ್ಟಿವ್ ಹೊಂಡಾ ಸ್ಕೂಟರ್ ಮೇಲೆ 300ಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿವೆ. ಇದಕ್ಕೆ ಸಂಚಾರ ಪೊಲೀಸರು 3.20 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇವರು ಎಸ್.ಆರ್. ನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿ,ವಾಹನ ಚಲಾಯಿಸಿದ್ದಾರೆ.
ವೆಂಕಟರಾಮನ್ ಅವರು 3.29 ಲಕ್ಷ ರೂ. ದಂಡ ಕಟ್ಟಬೇಕಾಗಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಅವರ ಮನೆಗೆ ತೆರಳಿದ್ದು, ದಂಡ ಕಟ್ಟುವಂತೆ ಸೂಚಿಸಿದ್ದಾರೆ.
ಇದಕ್ಕೆ ಒಪ್ಪದ ವೆಂಕಟರಾಮನ್ ಅವರು ಇಷ್ಟು ದಂಡ ಕಟ್ಟಲು ಸಾಧ್ಯವಿಲ್ಲ.ಬೇಕಿದ್ದರೆ ಸ್ಕೂಟರ್ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಆಗ ಪೊಲೀಸರು ನಮಗೆ ಸ್ಕೂಟರ್ ಬೇಡ, ದಂಡ ಕಟ್ಟಿ ಇಲ್ಲ ಕೇಸ್ ಮಾಡುತ್ತೇವೆ ಎಂದಿದ್ದಾರೆ. ಸಂಚಾರ ಪೊಲೀಸರು ನೊಟೀಸ್ ನೀಡಿದ್ದು, ದಂಡ ಕಟ್ಟಿಲ್ಲ ಅಂದರೆ ಕೇಸ್ ಹಾಕಲು ನಿರ್ಧರಿಸಿದ್ದಾರೆ.
ಪೆಪ್ ಗೆ3.22 ಲಕ್ಷ ದಂಡ:
ಮತ್ತೊಂದೆಡೆ ಆರ್.ಟಿ.ನಗರದ ಗಂಗಾನಗರ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಪೆಪ್ ಮೇಲೆ 2023ರ ಡಿಸೆಂಬರ್ನಲ್ಲಿ ಬರೊಬ್ಬರಿ 3.22ಲಕ್ಷ ದಂಡ ಬಿದ್ದಿತ್ತು. ಮಾಲಾ ಎಂಬುವವರಿಗೆ ಸೇರಿದ ಸ್ಕೂಟಿ ಮೇಲೆ 643 ಸಂಚಾರ ನಿಯಮ ಉಲ್ಲಂಘನೆ ಕೇಸ್ಗಳು ದಾಖಲಾಗಿದ್ದವು. ಸ್ಕೂಟಿ ಬೆಲೆಯೇ 70 ರಿಂದ 80 ಸಾವಿರ, ಆದರೆ ದಂಡದ ಮೊತ್ತ ನಾಲ್ಕು ಪಟ್ಟು ಹೆಚ್ಚಿದೆ. ಕೆಎ04 ಕೆಎಫ್ 9072 ನಂಬರ್ನ ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸಿ ನಿಯಮ ಉಲ್ಲಂಘಿಸಿದ್ದರು.
ಬೆಂಗಳೂರು ಸಂಚಾರ ಪೊಲೀಸರು ಟ್ರಾಫಿಕ್ ರೂಲ್ಸ್ ಬಗ್ಗೆ ಅರಿವು ಮೂಡಿಸುತ್ತಿದ್ದರೂ, ಕೆಲವರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ದಂಡ ಪಾವತಿ ಮಾಡದವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅದು 50 ಸಾವಿರ ರೂ ಹೆಚ್ಚು ದಂಡ ಇದ್ದರೂ, ಕಟ್ಟದೆ ಇರುವವರ ಮನೆ ಮನೆಗೆ ತೆರಳಿ ಹಣ ಸಂಗ್ರಹ ಮಾಡಲಿದ್ದಾರೆ.

5 Comments
betmgm Missouri betmgm-play betmgm offers
Sweet Bonanza turns simple spins into spectacular win streaks thanks to its unique tumble mechanic. Multiplier sweet bonanza mobile bombs make every bonus round unforgettable. Get spinning!
Feel the primal pulse of pure payout power. how to win buffalo slots features 1024 lines, retriggers, and buffalo gold jackpots. Conquer!
Join 5 minutes ago, already cashing out? That’s a normal Tuesday on sweet bonanza stake .
Experience DraftKings casino promo Casino royalty. Wager $5 for 500 bonus spins and up to $1,000 credits back. Win the day, every day!