ಹುಬ್ಬಳ್ಳಿ: ಅಮರಗೋಳ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಹರಿದ ಹಳ್ಳವೀಗ ಉಕ್ಕಿ ಹರಿಯುತ್ತಿದೆ. ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 150 ವಿದ್ಯಾರ್ಥಿಗಳು ಸಿಲುಕಿ ಪರದಾಡುವಂತಾಗಿದ್ದು,
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಅಮರಗೋಳ ಗ್ರಾಮ ಬೆಳವಟಗಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಹಳ್ಳದಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗು ಗ್ರಾಮಸ್ಥರು ಮಕ್ಕಳ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಗುರುವಾರ ಸಂಜೆಯಿಂದಲೇ ಮಳೆ ಆರಂಭವಾಗಿದೆ.
ತಾಲ್ಲೂಕಿನ ಅಮರಗೋಳ ದಲ್ಲಿ ಹಾದುಹೋಗುವ ಹಳ್ಳವೊಂದು ಉಕ್ಕಿ ಹರಿಯುತ್ತಿದ್ದು, ನೀರು ಗ್ರಾಮದಲ್ಲಿನ ಸರಕಾರಿ ಪ್ರೌಢಶಾಲೆಯ ಸುತ್ತಲು ಆವರಿಸದೆ.
Previous Articleಚಾರ್ಲಿ ನೋಡಿ ರಾಕುಲ್ ಪ್ರೀತ್ ಕಣ್ಣೀರು!
Next Article ಚಾಮುಂಡಿಬೆಟ್ಟದಲ್ಲಿ ಹೈ ಅಲರ್ಟ್..!