ಬೆಂಗಳೂರು,ಜ.30:
ಮಹಾನಗರ ಬೆಂಗಳೂರಿನ ರಸ್ತೆಗಳ ಬಗ್ಗೆ ತಕರಾರು ಎತ್ತುತ್ತಿರುವ ಉದ್ಯಮಿ ಮೋಹನ್ ದಾಸ್ ಪೈ ಇದೀಗ ನಗರದ ಸಾರಿಗೆ ವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಇದಕ್ಕೆ ತಿರುಗೇಟು ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯವಸ್ಥೆಯ ಬಗ್ಗೆ ಟ್ರೀಟ್ ಮೂಲಕ ಅಭಿಪ್ರಾಯ ಹೇಳುವ ಬದಲಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.
ಬಿಎಂಟಿಸಿ ಬಸ್ ಕುರಿತಂತೆ ಮೋಹನ್ ದಾಸ್ ಪೈ ಅವರು ಮಾಡಿರುವ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ರಾಮಲಿಂಗಾರೆಡ್ಡಿ ರೆಡ್ಡಿ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಯಾವುದೇ ನಿಯಮಗಳಿಗೆ ಹೊಸ ಬಸ್‌ಗಳ ಸೇರ್ಪಡೆ ಸ್ಥಗಿತಗೊಂಡಿದ್ದಾಗ ಮತ್ತು ನಿಗಮಗಳು ಸೊರಗುತ್ತಿದ್ದಾಗ ನೀವು ಒಂದೇ ಒಂದು ಪ್ರಶ್ನೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ
ಜನಪರ ಸರ್ಕಾರವು ಉತ್ತಮ ಕೆಲಸ ಮಾಡುತ್ತಿರುವಾಗ ಮಾತ್ರ ನಿಮ್ಮ ಈ ‘ಕಾರ್ಪೊರೇಟ್ ಕಾಳಜಿ’ ಎಚ್ಚರಗೊಳ್ಳುವುದು ಏಕೆ? ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ ಸೇರಿದಂತೆ, ಬಿಜೆಪಿಯ ಯಾವುದಾದರೂ ಒಂದು ರಾಜ್ಯ ಅಥವಾ ನಗರ ಈ ಮಟ್ಟದ ಸಾರಿಗೆ ವ್ಯಾಪ್ತಿ ಮತ್ತು ದಕ್ಷತೆಯನ್ನು ಹೊಂದಿದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ
ಕಳೆದ ಕೇವಲ 2 ವರ್ಷಗಳಲ್ಲಿ ನಾವು 5,800ಕ್ಕೂ ಹೆಚ್ಚು ಹೊಸ ಬಸ್‌ಗಳನ್ನು ಸೇರಿಸಿದ್ದೇವೆ. ಮಾರ್ಚ್ 2026ರ ವೇಳೆಗೆ ಇನ್ನೂ 2,000 ಬಸ್‌ಗಳು ರಸ್ತೆಗಿಳಿಯಲಿವೆ.ನಿಮ್ಮ ದೃಷ್ಟಿಕೋನವು ಕೇವಲ ಪೂರ್ವಾಗ್ರಹ ಪೀಡಿತವಲ್ಲ. ನೀವು ಸಾರ್ವಜನಿಕ ಸೇವೆಯನ್ನು ಕೇವಲ ಲಾಭ-ನಷ್ಟದ ‘ಬ್ಯಾಲೆನ್ಸ್ ಶೀಟ್’ ಮೂಲಕ ನೋಡುತ್ತೀರಿ; ಆದರೆ ನಾನು ಅದನ್ನು 1.5 ಕೋಟಿ ನಾಗರಿಕರ ಸೇವೆಯ ದೃಷ್ಟಿಯಿಂದ ನೋಡುತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ
ರಾಜ್ಯದಲ್ಲಿ ಶೇಕಡಾ 30ರಷ್ಟು ಮಾರ್ಗಗಳು ನಷ್ಟದಲ್ಲಿದ್ದರೂ, ಹಳ್ಳಿಯ ಸಾಮಾನ್ಯ ಮನುಷ್ಯ ಮತ್ತು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಸುಲಭವಾಗಿ ಸಿಗಲಿ ಎನ್ನುವುದು ನಮ್ಮ ಆಶಯ, ಎಲ್ಲರಿಗೂ ಸುಗಮ ಸಂಚಾರ ವ್ಯವಸ್ಥೆ ಸಿಗಲಿ ಎಂಬ ಕಾರಣಕ್ಕೆ ನಾವು ಅವುಗಳನ್ನು ನಡೆಸುತ್ತಿದ್ದೇವೆ. ಶೇ. 30ರಷ್ಟು ಮಾರ್ಗಗಳು ಲಾಭವೂ ಇಲ್ಲದ, ನಷ್ಟವೂ ಇಲ್ಲದ ಸ್ಥಿತಿಯಲ್ಲಿವೆ. ದೂರ ಪ್ರಯಾಣಿಸುವ ಬಸ್‌ಗಳಿಂದಾಗಿ ಶೇ. 40ರಷ್ಟು ಲಾಭ ಸಿಗಲಿದೆ. ರಾಜ್ಯದ ಶೇ. 98ರಷ್ಟು ಹಳ್ಳಿಗಳಿಗೆ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಸಮಾಜಕ್ಕೆ ಸೇವೆ ಸಲ್ಲಿಸುವುದು ಹೀಗೆಯೇ ಹೊರತು, ಕೇವಲ ಬೋರ್ಡ್ ಆಫ್ ಡೈರೆಕ್ಟರ್‌ಗಳ ಲಾಭಕ್ಕಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ
ಕರ್ನಾಟಕವು ಒಟ್ಟು 26,054 ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಮಾತ್ರವೇ ನಾವು ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದೇವೆ. 7,108 ಬಸ್‌ಗಳ ಪೈಕಿ 1,686 ಎಲೆಕ್ಟ್ರಿಕ್ ಬಸ್‌ಗಳಿದ್ದು, ದಿನಕ್ಕೆ 13 ಲಕ್ಷ ಕಿ.ಮೀ ಸಂಚರಿಸುತ್ತಾ 66,000 ಟ್ರಿಪ್‌ಗಳನ್ನು ಪೂರೈಸುತ್ತಿದ್ದೇವೆ. ಇದು ಇಡೀ ಭಾರತದಲ್ಲೇ ಅತಿ ಹೆಚ್ಚು ಎಂದಿದ್ದಾರೆ.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆ
ಕೇವಲ ಯೋಜನೆಯಲ್ಲ, ಮಹಿಳೆಯರ ಆರ್ಥಿಕ ಸಬಲೀಕರಣದ ದೊಡ್ಡ ಹೆಜ್ಜೆ. ಸಾಮಾಜಿಕ ಸೇವೆ ಖಾಸಗಿ ಸಂಸ್ಥೆಗಳಂತೆ ನಾವು ಕೇವಲ ಲಾಭದಾಯಕ ಮಾರ್ಗಗಳನ್ನು ಮಾತ್ರ ಆರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಮೋಹನ್‌ದಾಸ್ ಪೈ ಅವರೇ, ಯಾವುದೇ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿ ಚರ್ಚೆ ನಡೆಸಲು ನಮ್ಮ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಒಬ್ಬರೇ ಸಾಕು. ದಯವಿಟ್ಟು ಬನ್ನಿ ಮತ್ತು ಅವರೊಂದಿಗೆ ನೇರವಾಗಿ ಸತ್ಯಾಸತ್ಯತೆಗಳ ಬಗ್ಗೆ ಚರ್ಚಿಸಿ. ನೀವು ಈ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ? ಅಥವಾ ಕೇವಲ ಟ್ವೀಟ್ ಮಾಡುವುದಕ್ಕಷ್ಟೇ ಸೀಮಿತವಾಗುತ್ತೀರಾ ಎಂದು ಕೇಳಿದ್ದಾರೆ
ಉದ್ಯಮಿ ಮೋಹನ್ ದಾಸ್ ಪೈ ಅವರು ತಮ್ಮ ಟ್ವೀಟ್ ನಲ್ಲಿ ರಾಮಲಿಂಗಾರೆಡ್ಡಿಯವರೇ ಸಾರಿಗೆ ಸಚಿವರಾಗಿ ನಿಮ್ಮ ಸಿದ್ಧಾಂತ ಮತ್ತು ನಡೆಯಿಂದ ರಾಜ್ಯಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ನೀಡುವಲ್ಲಿ ನೀವು ವಿಫಲರಾಗಿದ್ದೀರಿ. ಸಾರ್ವಜನಿಕ ಸಾರಿಗೆಯ ಕೊರತೆಯಿಂದ ಜನತೆ ಪರದಾಡುತ್ತಿದ್ದಾರೆ. ದಯವಿಟ್ಟು ಖಾಸಗಿ ವಲಯಕ್ಕೆ ಅವಕಾಶ ನೀಡಿ. ಕಳೆದ ಕೆಲವು ವರ್ಷದಿಂದ ಬಸ್‌ಗಳ ವ್ಯವಸ್ಥೆ ಸರಿಯಿಲ್ಲ. ಬಸ್ ಓಡಾಟ ಕಡಿಮೆಯಾಗಿದೆ. ಕೇವಲ ಸರ್ಕಾರಿ ಸಂಸ್ಥೆಗಳೇ ಕೆಲಸ ಮಾಡಬೇಕು ಎಂಬ ನಿಮ್ಮ ಹಠಮಾರಿತನ ಏಕೆ? ಜನರಿಗೆ ಸಾರ್ವಜನಿಕ ಸಾರಿಗೆ ಬೇಕು, ಅದನ್ನು ಯಾರು ಒದಗಿಸುತ್ತಾರೆ ಎಂದು ಪೋಸ್ಟ್ ಮಾಡಿದ್ದರು.


3 Comments
mgm online casino login https://betmgm-play.com/ betmgm РњРђ
Uncover hidden gems in a vast library of themed slots and video poker. In play ignation casino, secure encryption protects your data at all times. Play confidently and win big!
Hook your next jackpot with Big Bass Bonanza slot review Money symbols pay out during wild collection.