ಬೆಳಗಾವಿ: ಆರ್.ಎಸ್.ಎಸ್ ಅಂದ್ರೆ ನಮ್ಮ ಪಾಲಿಗೆ ತಾಯಿ ಇದ್ದಂತೆ. ಆರ್.ಎಸ್.ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ಗೆ ಇಲ್ಲ. ಅವರು ನಿಸ್ವಾರ್ಥದಿಂದ ಸೇವೆ ಮಾಡುವರು. ಅಧಿಕಾರಕ್ಕಾಗಿ ಎಂಎಲ್ ಎ ಆಗಬೇಕು, ಎಂಪಿ ಆಗಬೇಕು ಅಥವಾ ಸಿಎಂ ಆಗುವ ಕನಸು ಕಂಡವರಲ್ಲ.
ಎಲ್ಲಿ ಅನ್ಯಾಯ ನಡೆಯುತ್ತದೆಯೋ, ಎಲ್ಲಿ ಸಾರ್ವಜನಿಕಕರು ಕಷ್ಟದಲ್ಲಿ ಇರ್ತಾರೆಯೋ, ಅಲ್ಲಿ ಗಟ್ಟಿಯಾಗಿ ನಿಂತು ಕೆಲಸ ಮಾಡಿದ್ದಾರೆ. ಪ್ಲಡ್ ಬಂದಾಗ ಮನೆ ಮಠ ಬಿಟ್ಟು ಆರ್ ಎಸ್ ಎಸ್ ಕೆಲಸ ಮಾಡಿದೆ ಹೀಗಂತ ಸಚಿವ ಮುರಗೇಶ್ ನಿರಾಣಿ ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ ಆರ್.ಎಸ್. ಎಸ್ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದರು. ಬಿಜೆಪಿ ಆರ್ ಎಸ್ ಎಸ್ ಕೈಗೊಂಬೆಯಾಗಿದೆ ಅಂತಾ ಕಾಂಗ್ರೆಸ್ ಆರೋಪಿಸುತ್ತದೆ.
ನಾವು ನಮ್ಮ ಕುಟುಂಬದಲ್ಲಿ ನಮ್ಮ ತಾಯಿ ತಂದೆ ಮಾತು ಕೇಳುತ್ತಿದ್ದೇವೆ. ಅದು ಕೈ ಗೊಂಬೆ ಅಂತಾ ಅಲ್ಲ ಅದು ನಮ್ಮ ಕರ್ತವ್ಯ.
ಆರ್ ಎಸ್ ಎಸ್ ಅಂದ್ರೆ ನಾವು ಅವರನ್ನು ತಾಯಿ ಸ್ಥಾನದಲ್ಲಿ ನೋಡುತ್ತೇವೆ. ಅವರ ಅನುಭವದ ಮಾರ್ಗದರ್ಶನದಲ್ಲಿ ನಡೆಯುತ್ತೇವೆ. ರಾಜಕಾರಣದಲ್ಲಿ ಇರಬಹುದು ಜೀವನದಲ್ಲಿ ಇರಬಹುದು ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ. ಕೈಗೊಂಬೆ ಅಂತಾ ಅಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಚಡ್ಡಿವಾರ್ ವಿಚಾರಕ್ಕೆ ಸಂಬಂಧಿಸಿದಂತೆ
ಸಿದ್ದರಾಮಯ್ಯ ಇರಬಹುದು, ಡಿಕೆಶಿ ಇರಬಹುದು ಕಾಂಗ್ರೆಸ್ ನವರು ಚಡ್ಡಿ ಬಗ್ಗೆ ಮಾತಾಡೋದು ಸೂಕ್ತ ಅಲ್ಲ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ ಅಳಿಲು ಸೇವೆ ಇದೆ. ಅವರು ಮಾಡುವ ಕೆಲಸ ಇನ್ನೂ ಸಾಕಷ್ಟು ಇದೆ, ಅದರಕಡೆ ಗಮನ ಕೊಡಲಿ. ಆರ್ ಎಸ್ ಎಸ್ ನವರ ಬಗ್ಗೆ ಆಳವಾಗಿ ಅಭ್ಯಾಸ ಮಾಡಿದ್ರೆ ಅವರ ಮನ ಪರಿವರ್ತನೆ ಆಗುತ್ತದೆ.
ಕಾಂಗ್ರೆಸ್ ನವರು, ಹೆಗಡೆವಾರ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ, ಅವರ ಬಗ್ಗೆ ಆಳವಾಗಿ ಅಭ್ಯಾಸ ಮಾಡಿದ್ರೆ ಅವರೂ ಬಿಜೆಪಿಗೆ ಬರ್ತಾರೆ ಎಂದು ಹೇಳಿದರು.
Previous ArticlePUBG ಆಡಲು ಬಿಡದ ತಾಯಿಯನ್ನು ಗುಂಡಿಟ್ಟು ಕೊಂದ ಬಾಲಕ!
Next Article ಜೈಲು ಭಯದಿಂದ ಹಾರ್ದಿಕ್ ಬಿಜೆಪಿಗೆ ಹಾರಿದ್ರಾ?