ಬೆಂಗಳೂರು. ಸೆ,14 – ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆ ವಿರುದ್ಧ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ.ಕನ್ನಡಪರ ಸಂಘಟನೆಗಳ ಜೊತೆಗೆ ಇದೀಗ ಪ್ರತಿಪಕ್ಷಗಳು ಕೈ ಜೋಡಿಸಿದ್ದು,ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿವೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯಾವ ಭಾಷೆಯ ಕಲಿಕೆಯನ್ನೂ ವಿರೋಧಿಸುವುದಿಲ್ಲ, ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ ಎಂದು ಹೇಳಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಹಿಂದಿ ದಿವಸ ಆಚರಣೆ ಹೆಸರಲ್ಲಿ ಹಿಂದಿ ಭಾಷೆ ಹಾಗೂ ಆರ್‌ಎಸ್‌ಎಸ್ ಹಿಂದುತ್ವವನ್ನು ಹೇರಲು ಹೊರಟಿದೆ ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟ್ವೀಟ್ ಮಾಡಿದ್ದು,ನಾನು ಸದಾ ಭಾಷೆ ಕಲಿಯುವ ವಿದ್ಯಾರ್ಥಿ. ಆರು ಭಾಷೆ ಮಾತನಾಡುತ್ತೇನೆ. ಹಲವು ಭಾಷೆಗಳನ್ನ ಅರ್ಥ ಮಾಡಿಕೊಳ್ಳುತ್ತೇನೆ. ಹಿಂದಿ ಸೇರಿದಂತೆ ಎಲ್ಲ ಭಾಷೆಯ ಮೇಲೆ ಗೌರವ ಇದೆ. ಹಾಗೇಯೇ ಯಾವುದೇ ಭಾಷೆ ಹೇಳುವುದನ್ನು ವಿರೋಧಿಸುತ್ತೇನೆ.ಹೀಗಾಗಿ ಹಿಂದಿ ಹೇರಿಕೆಗೆ ನನ್ನ ಧಿಕ್ಕಾರವಿದೆ ಎಂದಿದ್ದಾರೆ.
ಹಿಂದಿಬಹೇರಿಕೆಯ ಹಿಂದೆ ಆರ್‌ಎಸ್‌ಎಸ್‌ನ ಕುತಂತ್ರ ಕೆಲಸ ಮಾಡುತ್ತಿದೆ ಸಾವಿರಾರು ಭಾಷೆಗಳಿಗೆ ಜನ್ಮಕೊಟ್ಟ ಈ ನೆಲದಲ್ಲಿ ಇಂತಹ ಕುತಂತ್ರ ನಡೆಯುದಿಲ್ಲ ಎಂದು ಹೇಳಿದ್ದಾರೆ.