ಪ್ರಖ್ಯಾತ ಆಧ್ಯಾತ್ಮಿಕ ಗುರು ಮತ್ತು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಚಿರಪರಿಚಿತರಾಗಿರುವ ಆಧುನಿಕ ಸಾಂಟಾ ಎಂದು ಕರೆಸಿಕೊಂಡಿರುವ ಸದ್ಗುರು ಜಗ್ಗಿ ವಾಸುದೇವ್ ಅವರು ಇದೇ ತಿಂಗಳ 17ರಂದು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಮಿದುಳಿನ ಶಸ್ತ್ರ ಚಿಕಿಸ್ಥೆಗೆ ಒಳಗಾಗಿದ್ದಾರೆ. ಜೀವನ ಶೈಲಿ ಮತ್ತು ಉತ್ತಮ ಆರೋಗ್ಯದ ಬಗ್ಗೆ ಪ್ರವಚನ ನೀಡಿ ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿರುವ ಸದ್ಗುರು ಅವರು ಅನೇಕ ವಾರಗಳಿಂದ ತಲೆನೋವಿನ ಬಾಧೆಗೆ ಒಳಗಾಗಿದ್ದರು.
ಆದರೂ ತಕ್ಷಣ ಚಿಕಿತ್ಸೆ ಪಡೆಯದ ಅವರು ತಲೆನೋವು ಹೆಚ್ಚಾದಾಗ ಭಕ್ತರ ಒತ್ತಾಯಕ್ಕೆ ಮಣಿದು ತಲೆಯ ಸ್ಕ್ಯಾನ್ ಮಾಡಿಸಿಕೊಂಡಾಗ ಮಿದುಳಿನ ಒಳಗೆ ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರು ಸದ್ಗುರು ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿ ಅವರ ಸಮಸ್ಯೆಯನ್ನು ನಿವಾರಿಸಿದ್ದಾರೆ. ಶಸ್ತ್ರ ಚಿಕಿಸ್ಥೆಯ ನಂತರ ಸದ್ಗುರು ಅವರು ಬಹಳಷ್ಟು ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ವರದಿ ಮಾಡಿದೆ.

1 Comment
Betano Casino https://betanogame.org/fr/ est votre porte-bonheur. Obtenez 100 % jusqu’Г 500 € de bonus et plongez dans l’action du jeu en direct. Commencez Г tourner et Г gagner immГ©diatement.